HEALTH TIPS

'ಲೋಕ'ಸಮರ ದಿನಗಳ ನಿಗದಿ: 7 ಹಂತಗಳಲ್ಲಿ ಚುನಾವಣೆ; ಏ.11ಕ್ಕೆ ಮೊದಲ ಹಂತದ ಮತದಾನ, ಮೇ.23ಕ್ಕೆ ಫಲಿತಾಂಶ

ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ನಿನ್ನೆಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ದಿನಾಂಕ ಘೋಷಿಸಿದ್ದು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ನಿನ್ನೆಯಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ದೆಹಲಿ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, 2019 ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಿದರು. ದೇಶಾದ್ಯಂತ ಒಟ್ಟಾರೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ.23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. ಏ. ರಂದು 11 ಮೊದಲ ಹಂತದ ಮತದಾನ ನಡೆಯಲಿದೆ. ಏಪ್ರಿಲ್18 ರಂದು 2 ನೇ ಹಂತದ ಮತದಾನ, ಏ. 23 ರಂದು 3 ನೇ ಹಂತದ ಮತದಾನ, ಏ.29 ರಂದು 4 ನೇ ಹಂತದ ಮತದಾನ, ಮೇ.6 ರಂದು 5ನೇ ಹಂತ ಮೇ.12 ರಂದು 6ನೇ ಹಂತ ಮೇ.19 ರಂದು 7 ನೇ ಹಂತದ ಮತದಾನ ನಡೆಯಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ವಿಶೇಷತೆಗಳೇನು? ದೇಶಾದ್ಯಂತ 10 ಲಕ್ಷ ಮತಗಟ್ಟೆಗಳು 8.4 ಕೋಟಿ ಹೊಸ ಮತದಾರರ ಸೇರ್ಪಡೆ ಒಟ್ಟಾರೆ 90 ಕೋಟಿ ಮತದಾರರು ಎಲ್ಲಾ ಕಡೆ ವಿವಿಪ್ಯಾಟ್ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಫೋಟೋ ನೀತಿ ಸಂಹಿತೆ ಉಲ್ಲಂಘನೆಯಾದರೆ ಸಿ-ವಿಜಿಲ್ ಮೊಬೈಲ್ ಆಪ್ ಮೂಲಕ ಅಧಿಕಾರಿಗಳ ಗಮನಕ್ಕೆ ತರಲು ಅವಕಾಶ (ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಪ್ರಯೋಗವಾಗಿತ್ತು) ಆಪ್ ಮೂಲಕ ದೂರು ಸಲ್ಲಿಸಿದವರಿಗೆ 100 ನಿಮಿಷಗಳಲ್ಲಿ ಅಧಿಕಾರಿಗಳಿಂದ ದೂರಿನ ಕುರಿತು ಕ್ರಮಕೈಗೊಂಡ ಬಗ್ಗೆ ಮಾಹಿತಿ ಮತದಾನ ಮಾಡುವ ದಿವ್ಯಾಂಗರಿಗೆ ವಿಶೇಷ ಸೌಲಭ್ಯ: ನೋಂದಣಿ ಮಾಡಲು ಆಪ್ 24 ಗಂಟೆಗಳ ಕಾಲ ಹೆಲ್ಪ್ ಲೈನ್- ಹೆಲ್ಪ್ ಲೈನ್ ಸಂಖ್ಯೆ-1950 ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಜಾಹಿರಾತು ಬೆಳಿಗ್ಗೆ 10 ರಿಂದ-10-6 ವರೆಗೆ ಧ್ವನಿವರ್ಧಕ ಬಳಕೆಗೆ ನಿಷೇಧ ಪರಿಸರ ವಿರೋಧಿ ವಸ್ತುಗಳು ಪ್ರಚಾರಕ್ಕೆ ಬಳಕೆ ಮಾಡುವಂತಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries