ಕಾನತ್ತೂರು ಶ್ರೀನಾಲ್ವರ್ ದೈವಸ್ಥಾನದ ಆಡಳಿತ ಟ್ರಸ್ಟಿ ಕೆ.ಪಿ.ಮಾಲಿಂಗು ನಾಯರ್ ದೀಪ ಬೆಳಗಿಸಿ ಉದ್ಘಾಟಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಜಾನಪದ ಸಂಶೋಧಕ ಡಾ.ಸುಂದರ ಕೇನಾಜೆ ಅವರು ಮಾತನಾಡಿ, ಕಥೆಗಳು ನಮ್ಮೊಳಗಿನ ವಾಸ್ತವದ ತುಡಿತವಾಗಿದೆ. ವಾಸ್ತವತೆಗೆ ಕಲ್ಪನೆಗಳನ್ನು ಕಟ್ಟಿಕೊಟ್ಟಾಗ ಸುಂದರ ರೂಪದೊಂದಿಗೆ ಆಪ್ಯಾಯಮಾನವಾಗಿ ಇತರರನ್ನು ಸೆಳೆಯುತ್ತದೆ ಎಂದು ತಿಳಿಸಿದರು. ವರ್ತಮಾನದಲ್ಲಿ ವಾಸ್ತವವೇ ಕಿರಿದಾಗಿರುವಾಗ, ಧಾರಾವಾಹಿಗಳಂತಹ ಅವಾಸ್ತವಿಕ ಪ್ರಪಂಚದಲ್ಲಿ ಬೆಳೆದುಬರುತ್ತಿರುವ ಇಂದಿನ ಕಾಲಘಟ್ಟದಲ್ಲಿ ಉತ್ತಮ ಕಥೆಗಳು ವಿರಳವಾಗುತ್ತಿದೆ ಎಂದು ವಿಶಾದ ವ್ಯಕ್ತಪಡಿಸಿದರು. ಕಥೆಗಳು ಯಾವತ್ತೂ ಸುಳ್ಳಾಡುವುದಿಲ್ಲ. ಕಥೆ, ಬರಹಗಳು ನನ್ನದು ಎಂಬ ಭಾವ ಓದುಗನಲ್ಲಿ ಸ್ಪುರಿಸಿದಾಗ ಆಪ್ತತೆ ಮೂಡುತ್ತದೆ. ತಿರುವು ಕಥಾ ಸಂಕಲನ ಇಂದು ಅತ್ಯುತ್ತಮ ಕೃತಿಯಾಗಿ ಮೂಡಿಬಂದಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕೃತಿ ಪರಿಚಯ ನೀಡಿ ಮಾತನಾಡಿದ ಲೇಖಕ, ಪತ್ರಕರ್ತ ದುರ್ಗಾಕುಮಾರ್ ನಾಯರ್‍ಕೆರೆ ಅವರು, ಕಥೆ ಹೇಳುವ ಮತ್ತು ಕೇಳುವ ಸ್ಥಿತಿಯಲ್ಲಿ ವರ್ತಮಾನದ ಪ್ರಪಂಚ ಇಲ್ಲದಿರುವುದು ಖೇದಕರವಾಗಿದೆ. ಹಿರಿಯರ ಬದುಕು ಕಥೆಯಾಗಿ ಮಾರ್ಗದರ್ಶಿಯಾಗುತ್ತಿತ್ತು. ಆದರೆ ಇಂದು ಅಂತಹ ಅನುಭವಗಳ ಕೊರತೆ ಎದ್ದು ಕಾಣುತ್ತಿದೆ.ಕಳೆದ ಬದುಕಿನ ಚಿತ್ರಗಳನ್ನು ತೆರೆದಿಡುವ ಉತ್ತಮ ಕಥೆಗಳು ಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತು ಸದಸ್ಯ ಹರ್ಷಾದ್ ವರ್ಕಾಡಿ, ಉದ್ಯಮಿ ಎಚ್.ಎಲ್.ಕೃಷ್ಣಪ್ಪ ಬೆಂಗಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಗಾಯಕ ರತ್ನಾಕರ ಓಡಂಗಲ್ಲು ಭಾವಗೀತೆಗಳನ್ನು ಹಾಡಿದರು. ಕಥೆಗಾರ ಬಿ.ಎಸ್.ಯೇತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ಗಂಗಾಧರ ಯಾದವ್ ತೆಕ್ಕೆಮೂಲೆ ವಂದಿಸಿದರು. ಯತೀಶ್ ಕುಮಾರ್ ರೈ ಮುಳ್ಳೇರಿಯ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಗುತ್ತುಹಿತ್ತಿಲು, ಶಶಿಧರ ತೆಕ್ಕೆಮೂಲೆ, ಶ್ರೀಕೃಷ್ಣ ಯಾದವ್, ಸರೋಜಿನಿ ಬಿ.ಎಸ್. ಸಹಕರಿಸಿದರು. ಶುಕ್ರವಾರ ನಿಧನರಾದ ಹಿರಿಯ ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.ಪುಸ್ತಕ ಓದುವಿಕೆಯ ಅನುಭವ ನವ ಮಾಧ್ಯಮಗಳಿಂದ ಲಭ್ಯವಾಗದು-ಚಿಂತಕ ಡಾ.ಎಚ್.ಎನ್.ಚಂದ್ರಶೇಖರ್ ಬಿ.ಎಸ್.ಯೇತಡ್ಕರ ತಿರುವು ಕಥಾ ಸಂಕಲನ ಬಿಡುಗಡೆಗೊಳಿಸಿ ಅಭಿಮತ
0
ಮಾರ್ಚ್ 10, 2019
ಬದಿಯಡ್ಕ: ಮಾನವ ಜೀವನದ ಪ್ರತಿಯೊಂದು ಘಟ್ಟದಲ್ಲೂ ಹೊಸ ಅನುಭವಗಳಿರುತ್ತವೆ. ಅಂತಹ ಅನುಭವಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಮೂಲಕ ಇತರರಿಗೂ ಮಾರ್ಗದರ್ಶನ ನೀಡಿದ ಕೃತಾರ್ಥತೆ ಮೂಡುತ್ತದೆ. ಕಥೆಗಾರ ಅಂತಹ ವಿಶೇಷ ಸಾಧ್ಯತೆಯನ್ನು ಪಡೆದವರಾಗಿದ್ದಾರೆ ಎಂದು ಚಿಂತಕ, ಸಮಾಜ ಸೇವಕ ಡಾ.ಎಚ್.ಎನ್.ಚಂದ್ರಶೇಖರ ಬೆಂಗಳೂರು ಅವರು ತಿಳಿಸಿದರು.
ಬದಿಯಡ್ಕದ ರಾಮಲೀಲಾ ಯೋಗಶಿಕ್ಷಣ ಕೇಂದ್ರ ಸಭಾಂಗಣದಲ್ಲಿ ಭಾನುವಾರ ಅಪರಾಹ್ನ ನಡೆದ ಸ್ನೇಹ ಹಸ್ತ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಮತ್ತು ಉದಯೋನ್ಮುಖ ಕಥೆಗಾರ ಬಿ.ಎಸ್.ಯೇತಡ್ಕ ಅವರ ತಿರುವು ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪುಸ್ತಕಗಳು ಜ್ಞಾನ ಭಂಡಾರದ ಕಾಶಿಯಾಗಿದ್ದು, ಅದರೊಳಗಿನ ಯಾವ ಅನುಭವಗಳನ್ನೂ ಆಧುನಿಕ ತಂತ್ರಜ್ಞಾನ ಒದಗಿಸಲಾರವು ಎಂದು ಅವರು ತಿಳೀಸಿದರು. ವ್ಯಕ್ತಿತ್ವ ರೂಪಣೆಯ ಮಾರ್ಗದರ್ಶನ ನೀಡುವ ಉತ್ತಮ ಕಥೆಗಳು ಕನ್ನಡ ಸಾರಸ್ವತ ಲೋಕಕ್ಕೆ ಇನ್ನಷ್ಟು ಮೂಡಿಬರಲಿ ಎಂದು ತಿಳಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕ, ಸಾಮಾಜಿಕ ಮುಂದಾಳು ಬಾಲಕೃಷ್ಣ ಪೊರ್ಕೂಡ್ಲು ಅಧ್ಯಕ್ಷತೆ ವಹಿಸಿ ಮಾತನಾಡಿ ಕವಿಯ ಮನಸ್ಸು ನೇರ ನಿಷ್ಠುರವಾಗಿರುತ್ತದೆ. ನಿರಹಂಕಾರದಿಂದ ಎಲ್ಲರೊಂದಿಗೆ ಜೊತೆಯಾಗಿ ಬದುಕುವ ಕವಿ ಎಲ್ಲರ ಭಾವನೆಗಳನ್ನು ಅರ್ಥೈಸಿ ಅಕ್ಷರಗಳಾಗಿ ಪೋಣೀಸಿದಾಗ ಹೊಸ ಹುಟ್ಟು ಪಡೆಯುತ್ತದೆ. ಬಿ.ಎಸ್.ಯೇತಡ್ಕ ಇಂತಹ ವಿಶಿಷ್ಟತೆ ಹೊಂದಿದ ನಿಗರ್ವಿ ಕವಿ ಎಂದು ಅವರು ತಿಳಿಸಿದರು.
ಕಾನತ್ತೂರು ಶ್ರೀನಾಲ್ವರ್ ದೈವಸ್ಥಾನದ ಆಡಳಿತ ಟ್ರಸ್ಟಿ ಕೆ.ಪಿ.ಮಾಲಿಂಗು ನಾಯರ್ ದೀಪ ಬೆಳಗಿಸಿ ಉದ್ಘಾಟಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಜಾನಪದ ಸಂಶೋಧಕ ಡಾ.ಸುಂದರ ಕೇನಾಜೆ ಅವರು ಮಾತನಾಡಿ, ಕಥೆಗಳು ನಮ್ಮೊಳಗಿನ ವಾಸ್ತವದ ತುಡಿತವಾಗಿದೆ. ವಾಸ್ತವತೆಗೆ ಕಲ್ಪನೆಗಳನ್ನು ಕಟ್ಟಿಕೊಟ್ಟಾಗ ಸುಂದರ ರೂಪದೊಂದಿಗೆ ಆಪ್ಯಾಯಮಾನವಾಗಿ ಇತರರನ್ನು ಸೆಳೆಯುತ್ತದೆ ಎಂದು ತಿಳಿಸಿದರು. ವರ್ತಮಾನದಲ್ಲಿ ವಾಸ್ತವವೇ ಕಿರಿದಾಗಿರುವಾಗ, ಧಾರಾವಾಹಿಗಳಂತಹ ಅವಾಸ್ತವಿಕ ಪ್ರಪಂಚದಲ್ಲಿ ಬೆಳೆದುಬರುತ್ತಿರುವ ಇಂದಿನ ಕಾಲಘಟ್ಟದಲ್ಲಿ ಉತ್ತಮ ಕಥೆಗಳು ವಿರಳವಾಗುತ್ತಿದೆ ಎಂದು ವಿಶಾದ ವ್ಯಕ್ತಪಡಿಸಿದರು. ಕಥೆಗಳು ಯಾವತ್ತೂ ಸುಳ್ಳಾಡುವುದಿಲ್ಲ. ಕಥೆ, ಬರಹಗಳು ನನ್ನದು ಎಂಬ ಭಾವ ಓದುಗನಲ್ಲಿ ಸ್ಪುರಿಸಿದಾಗ ಆಪ್ತತೆ ಮೂಡುತ್ತದೆ. ತಿರುವು ಕಥಾ ಸಂಕಲನ ಇಂದು ಅತ್ಯುತ್ತಮ ಕೃತಿಯಾಗಿ ಮೂಡಿಬಂದಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕೃತಿ ಪರಿಚಯ ನೀಡಿ ಮಾತನಾಡಿದ ಲೇಖಕ, ಪತ್ರಕರ್ತ ದುರ್ಗಾಕುಮಾರ್ ನಾಯರ್‍ಕೆರೆ ಅವರು, ಕಥೆ ಹೇಳುವ ಮತ್ತು ಕೇಳುವ ಸ್ಥಿತಿಯಲ್ಲಿ ವರ್ತಮಾನದ ಪ್ರಪಂಚ ಇಲ್ಲದಿರುವುದು ಖೇದಕರವಾಗಿದೆ. ಹಿರಿಯರ ಬದುಕು ಕಥೆಯಾಗಿ ಮಾರ್ಗದರ್ಶಿಯಾಗುತ್ತಿತ್ತು. ಆದರೆ ಇಂದು ಅಂತಹ ಅನುಭವಗಳ ಕೊರತೆ ಎದ್ದು ಕಾಣುತ್ತಿದೆ.ಕಳೆದ ಬದುಕಿನ ಚಿತ್ರಗಳನ್ನು ತೆರೆದಿಡುವ ಉತ್ತಮ ಕಥೆಗಳು ಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತು ಸದಸ್ಯ ಹರ್ಷಾದ್ ವರ್ಕಾಡಿ, ಉದ್ಯಮಿ ಎಚ್.ಎಲ್.ಕೃಷ್ಣಪ್ಪ ಬೆಂಗಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಗಾಯಕ ರತ್ನಾಕರ ಓಡಂಗಲ್ಲು ಭಾವಗೀತೆಗಳನ್ನು ಹಾಡಿದರು. ಕಥೆಗಾರ ಬಿ.ಎಸ್.ಯೇತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ಗಂಗಾಧರ ಯಾದವ್ ತೆಕ್ಕೆಮೂಲೆ ವಂದಿಸಿದರು. ಯತೀಶ್ ಕುಮಾರ್ ರೈ ಮುಳ್ಳೇರಿಯ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಗುತ್ತುಹಿತ್ತಿಲು, ಶಶಿಧರ ತೆಕ್ಕೆಮೂಲೆ, ಶ್ರೀಕೃಷ್ಣ ಯಾದವ್, ಸರೋಜಿನಿ ಬಿ.ಎಸ್. ಸಹಕರಿಸಿದರು. ಶುಕ್ರವಾರ ನಿಧನರಾದ ಹಿರಿಯ ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.