ತ್ರಿಚಕ್ರ ವಾಹನಕ್ಕೆ ಅರ್ಜಿ ಆಹ್ವಾನ
0
ಮಾರ್ಚ್ 10, 2019
ಕಾಸರಗೋಡು: ಅಂಗವಿಕಲ ಲಾಟರಿ ಕಲ್ಯಾಣನಿಧಿ ಸದಸ್ಯರಿಗೆ ತ್ರಿಚಕ್ರ ವಾಹನ ವಿತರಣೆ ನಿಟ್ಟಿನಲ್ಲಿ ರಾಜ್ಯ ಲಾಟರಿ ಏಜೆಂಟರಿಂದ, ಮಾರಾಟಗಾರರಿಂದ ಕಲ್ಯಾಣನಿಧಿ ಮಂಡಳಿ ಅರ್ಜಿ ಆಹ್ವಾನಿಸಿದೆ. ಅರ್ಹರಾದ ಸಕ್ರಿಯ ಸದಸ್ಯತನವಿರುವ ಸದಸ್ಯರಲ್ಲಿ ಅಂಗವಿಕಲರಾದವರು ಮಾ.31ರ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಫಾರಂ ಮತ್ತು ಮಾಹಿತಿಗಾಗಿ ಜಿಲ್ಲಾ ಲಾಟರಿ ಕಲ್ಯಾಣ ನಿಧಿ ಕಚೇರಿ(ದೂರವಾಣಿ-04994-256404)ಯನ್ನು ಸಂಪರ್ಕಿಸಬಹುದು.

