HEALTH TIPS

ಶ್ರೀ ಮಲ್ಲಿಕಾರ್ಜುನ ದೇವಸ್ಧಾನ ಮಾ.8-16 : ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

ಕಾಸರಗೋಡು: ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾ.8 ರಿಂದ 16 ರ ವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಾ.19 ರಿಂದ 23 ರ ವರೆಗೆ ಜಾತ್ರಾ ಮಹೋತ್ಸವ ನಡೆಯುವುದು. ಮಾ.8 ರಂದು ಬೆಳಗ್ಗೆ 9.30 ಕ್ಕೆ ವಿಗ್ರಹ ಮೆರವಣಿಗೆ, ಸಂಜೆ 4.30 ಕ್ಕೆ ಪೂಜ್ಯ ಶ್ರೀ ತಂತ್ರಿವರ್ಯರಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, 5 ಕ್ಕೆ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶಿಷ್ಯ ಶ್ರೀ ತೋಟಕಾಚಾರ್ಯ ಪರಂಪರಾಗತ ಶ್ರೀ ಕೇಶವಾನಂದ ಭಾರತಿ ಶ್ರೀ ಪಾದಂಗಳವರಿಗೆ ಪೂರ್ಣಕುಂಭ ಸ್ವಾಗತ, 5.30 ಕ್ಕೆ ಧಾರ್ಮಿಕ ಸಭೆ, ರಾತ್ರಿ 7.30 ರಿಂದ ಆಚಾರ್ಯ ವರಣ, ಸಾಮೂಹಿಕ ಪ್ರಾರ್ಥನೆ, ಬಿಂಬ ಪರಿಗ್ರಹ, ಪ್ರಾಸಾದ ಪರಿಗ್ರಹ, ಪಶುದಾನ, ಪುಣ್ಯಾಹ, ಪ್ರಾಸಾದ ಶುದ್ಧಿ, ಅಂಕುರಾರ್ಪಣೆ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ, 8.30 ಕ್ಕೆ ಭಕ್ತಿಗಾನ ಮೇಳ ನಡೆಯಲಿದೆ. ಎಲ್ಲಾ ದಿನಗಳಲ್ಲಿ ಮದ್ಯಾಹ್ನ 1ರಿಂದ ಮತ್ತು ರಾತ್ರಿ 8.30 ರಿಂದ ಪ್ರಸಾದ ಭೋಜನ ವಿತರಣೆ ನಡೆಯಲಿದೆ. ಮಾ.9 ರಂದು ಸಂಜೆ 5 ಕ್ಕೆ ಕೊಂಡೆವೂರಿನ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, 5.30 ಕ್ಕೆ ಧಾರ್ಮಿಕ ಸಭೆ, ರಾತ್ರಿ 8.30 ಕ್ಕೆ `ಕುಂಭಕರ್ಣನ್' ನಾಟಕ ಪ್ರದರ್ಶನ, ಮಾ.10 ರಂದು ಸಂಜೆ 5.30 ಕ್ಕೆ ಧಾರ್ಮಿಕ ಸಭೆ, ರಾತ್ರಿ 8.30 ಕ್ಕೆ ನಾಟ್ಯ ಸಮನ್ವಿತಂ, ಮಾ.11 ರಂದು ಸಂಜೆ 5.30 ಕ್ಕೆ ಧಾರ್ಮಿಕ ಸಭೆ, ರಾತ್ರಿ 7.30 ಕ್ಕೆ ನೃತ್ಯ ವೈಭವ, 9 ಕ್ಕೆ ಯೋಗ ಪ್ರದರ್ಶನ, 9.30 ಕ್ಕೆ ನೃತ್ಯಧಾರೆ ನಡೆಯಲಿದೆ. ಮಾ.12 ರಂದು ಸಂಜೆ 5.30 ಕ್ಕೆ ಧಾರ್ಮಿಕ ಸಭೆ, ರಾತ್ರಿ 8.30 ಕ್ಕೆ ಭಕ್ತಿ ಸಂಗೀತ ಸೌರಭ, ಮಾ.13 ರಂದು ಬೆಳಗ್ಗೆ 5 ರಿಂದ ಗಣಪತಿ ಹೋಮ, ಅ„ವಾಸ ಉದ್ಘಾಟನೆ, 7.10 ಕ್ಕೆ ಶ್ರೀ ಮಲ್ಲಿಕಾರ್ಜುನ ದೇವರ ಪುನ:ಪ್ರತಿಷ್ಠೆ, ಜೀವ ಕಲಶಾಭಿಷೇಕ, ಅಷ್ಟಬಂಧ ಲೇಪನ, ಶ್ರೀ ಗಣಪತಿ, ಶ್ರೀ ಶಾಸ್ತಾವು ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಬಲಿ, ಸಂಜೆ 5 ಕ್ಕೆ ಪೇಜಾವರ ಮಠಾ„ೀಶರಾದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, 5.30 ಕ್ಕೆ ಧಾರ್ಮಿಕ ಸಭೆ, ರಾತ್ರಿ 8.30 ರಿಂದ ಯಕ್ಷಗಾನ ಬಯಲಾಟ, 14 ರಂದು ಬೆಳಗ್ಗೆ 7.05 ಕ್ಕೆ ಅಶ್ವತ್ಥ ಉಪನಯನ, ಬ್ರಹ್ಮಕಲಶ ಮಂಟಪ, ಸಂಸ್ಕಾರ, ದೊಡ್ಡ ಬಲಿಕಲ್ಲು ಪ್ರತಿಷ್ಠೆ, ಸಂಜೆ 5 ಕ್ಕೆ ಒಡಿಯೂರಿನ ಪರಮಪೂಜ್ಯ ಸಾ„್ವ ಶ್ರೀ ಮಾತಾನಾಂದಮಯಿ ಅವರಿಗೆ ಪೂರ್ಣಕುಂಭ ಸ್ವಾಗತ, ರಾತ್ರಿ 8.30 ಕ್ಕೆ ನಾಟ್ಯರಂಗ್ ನಡೆಯಲಿದೆ. ಮಾ.15 ರಂದು ಸಂಜೆ 5.30 ಕ್ಕೆ ಆಚಾರ್ಯ ಸಂಗಮ, ರಾತ್ರಿ 8.30 ರಿಂದ `ದೇಶ ಕರೆದಾಗ' ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ಮಾ.16 ರಂದು ಬೆಳಗ್ಗೆ 5 ರಿಂದ ಕವಾಟೋದ್ಘಾಟನೆ, ನಿರ್ಮಾಲ್ಯ ದರ್ಶನ, ಗಣಪತಿ ಹೋಮ, ತೈಲಾಭ್ಯಂಜನ, ಉಷ:ಪೂಜೆ, ಶತರುದ್ರ ಪಾರಾಯಣ, ಹರಿಕಲಶಾಭಿಷೇಕ, ಮಧ್ಯಾಹ್ನ 12.30 ಕ್ಕೆ ಬ್ರಹ್ಮಕಲಶಾಭಿಷೇಕ, 1.30 ಕ್ಕೆ ಮಹಾಪೂಜೆ, ರಾತ್ರಿ 8 ರಿಂದ ರಾತ್ರಿ ಪೂಜೆ, ಶ್ರೀ ಭೂತಬಲಿ, ನೃತ್ಯ ಬಲಿ, ರಾಜಾಂಗಣ ಪ್ರಸಾದ, ಸಂಜೆ 5 ಕ್ಕೆ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, 5.30 ಕ್ಕೆ ಸಮಾರೋಪ ಸಮಾರಂಭ, ರಾತ್ರಿ 8.30 ರಿಂದ ಶ್ರೀ ಭೂತನಾಥಂ ನಾಟಕ ನಡೆಯಲಿದೆ ಎಂದು ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಅನಂತ ಕಾಮತ್, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸಿ.ವಿ.ಪೆÇದುವಾಳ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಂ ಪ್ರಸಾದ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಪಿ.ಮುರಳೀಧರನ್, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಕಮಲಾಕ್ಷ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷೆ ಜಲಜಾಕ್ಷಿ ಟೀಚರ್, ಜೀಣೋದ್ಧಾರ ಸಮಿತಿ ಉಪಾಧ್ಯಕ್ಷ ವೆಂಕಟ್ರಮಣ ಹೊಳ್ಳ ಮೊದಲಾದವರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries