ರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ
0
ಮಾರ್ಚ್ 06, 2019
ಮಂಜೇಶ್ವರ: ವರ್ಕಾಡಿ ಗ್ರಾಮಪಂಚಾಯತಿಯ 2018-19 ಸಾಲಿನ ಉದ್ಯೋಗ ಖಾತರಿ ಯೋಜನೆಯಡಿಯ ಕಾಮಗಾರಿಯಾಗಿರುವ ಅಡಕಳಕಟ್ಟೆ-ಬೋಳ್ನ ರಸ್ತೆ ಕಾಂಕ್ರೀಟೀಕರಣದ ಉದ್ಘಾಟನೆ ಮಂಗಳವಾರ ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಸದಸ್ಯ ಗೋಪಾಲಕೃಷ್ಣ ಪಜ್ಜ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯರಾದ ರಹಮತ್ ರಝಾಕ್,ಜೆಸಿಂತಾ ಡಿಸೋಜಾ, ವಸಂತ ಎಸ್., ಸದಾಶಿವ ನಾಯ್ಕ್, ಇಂದಿರಾ, ಪಂಚಾಯತಿ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.




