HEALTH TIPS

ದ್ವಾದಶ ರಾಶಿಯ ಮೇಲೆ ಶಿವರಾತ್ರಿ ಪ್ರಭಾವ

ಮಹಾಶಿವರಾತ್ರಿಯ ನಂತರ ರಾಹು, ಕೇತುಗಳ ಸ್ಥಾನಪಲ್ಲಟವಾಗುತ್ತದೆ. ಅದರ ನೇರ ಪರಿಣಾಮ ದ್ವಾದಶ ರಾಶಿಗಳ ಮೇಲಾಗುತ್ತದೆ. ಯಾರಿಗೆ ಶುಭ, ಅಶುಭ, ಸಾಮಾನ್ಯ ಎಂದು ನೋಡೋಣ. ಹದಿನೆಂಟು ವರ್ಷಗಳ ಬಳಿಕ ಮಾ.7ರಂದು ರಾಹುಕೇತುಗಳು ಸಾಕಷ್ಟು ಪರಿಣಾಮ ಉಂಟು ಮಾಡುತ್ತವೆ. ರಾಹು ಕರ್ಕಾಟಕ ರಾಶಿ ಮತ್ತು ಕೇತು ಮಕರ ರಾಶಿಯಿಂದ ತನ್ನ ಉಚ್ಛರಾಶಿ ಮಿಥುನ ಮತ್ತು ಧನು ರಾಶಿಯನ್ನು ಪ್ರವೇಶಿಸುತ್ತದೆ. ಅದರ ನೇರ ಪರಿಣಾಮ ದ್ವಾದಶ ರಾಶಿಗಳ ಒಂದೊಂದು ರೀತಿಯಲ್ಲಾಗುತ್ತದೆ. ಮಿಥುನ ರಾಶಿಗೆ ರಾಹು ಪ್ರವೇಶಿಸುತ್ತದೆ. ಮಿಥುನ ರಾಶಿಯ ಮಿತ್ರ ಗ್ರಹ ಬುಧ. ಜ್ಯೊತಿಷ್ಯ ಶಾಸ್ತ್ರದ ರೀತಿ ಮಿಥುನ ರಾಶಿಯಲ್ಲಿ ರಾಹುವಿನಿಂದಾಗಿ ಉನ್ನತ ಫಲಗಳು ಉಂಟಾಗುತ್ತವೆ. ಅಂತೆಯೇ ಧನೂ ರಾಶಿಗೆ ಕೇತು ಪ್ರವೇಶಿಸುತ್ತಾನೆ. ಶನಿಯೊಂದಿಗೆ ಸ್ಥಿತನಾಗಿರುತ್ತಾನೆ. ಆ ಕಾರಣ ಶನಿ ಮತ್ತು ಕೇತು ಯೋಗ ಉಂಟಾಗುತ್ತದೆ. ಈ ಯೋಗವು 2001-02 ಸಾಲಿನಲ್ಲಿ ಬಂದಿತ್ತು. ಇದೀಗ ಆ ಪ್ರಭಾವವು 19ನೇ ಸೆಪ್ಟಂಬರ್ 2020ರವರೆಗೆ ಇರುತ್ತದೆ. ಯಾರಿಗೆ ಶುಭ: ಮೇಷ, ವೃಷಭ, ಕರ್ಕಾಟಕ, ಧನುಸ್ಸು , ಮಕರ ರಾಶಿಯವರಿಗೆ ಲಾಭ ಉಂಟಾಗುತ್ತದೆ. ಇವರು ಕೈಹಿಡಿದ ಕಾರ್ಯದಲ್ಲಿ ಯಶಸ್ಸು ಕಾಣುತ್ತಾರೆ. ಯಾರಿಗೆ ಅಶುಭ : ಮಿಥುನ, ಕನ್ಯಾ, ವೃಶ್ಚಿಕ, ಮೀನ ರಾಶಿಯವರಿಗೆ ಅಷ್ಟೆ?ನು ಉತ್ತಮ ಫಲಗಳು ಉಂಟಾಗುವುದಿಲ್ಲ. ಆದರೆ ಅವರೆಷ್ಟು ಶ್ರಮ ವಹಿಸಿ ದುಡಿಯುತ್ತಾರೆ ಅಷ್ಟರ ಮಟ್ಟಿಗೆ ಉತ್ತಮ ಫಲವನ್ನು ಪಡೆಯುತ್ತಾರೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರ ವಹಿಸುವುದು ಒಳಿತು. ಯಾರಿಗೆ ಸಾಮಾನ್ಯ ಫಲ: ಸಿಂಹ, ತುಲಾ, ಕುಂಭ ರಾಶಿಯವರಿಗೆ ಸಾಮಾನ್ಯ ಫಲ ಉಂಟಾಗುತ್ತದೆ. ರಾಹು-ಕೇತುವಿನ ಕಾರಣ ಮುಂದಿನ ದಿನಗಳಲ್ಲಿ ಸಾಮಾಜಿಕ ವಲಯದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚುತ್ತದೆ. ಆದರೆ ಮಾಡುವ ಕೆಲಸದಲ್ಲಿ ಸಹನೆ ಇರಲಿ ಎನ್ನುವುದು ಜ್ಯೋತಿಷ್ಯದ ಸಲಹೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries