HEALTH TIPS

ಭಗವದ್ಗೀತೆಯ ಸಾರವನ್ನರಿತು ಜೀವನದಲ್ಲಿ ಅಳವಡಿಸಿದಲ್ಲಿ ಪರಮ ಪಾವನ ಕಾಟುಕುಕ್ಕೆಯಲ್ಲಿ ಭಗವದ್ಗೀತಾ ಜ್ಞಾನಯಜ್ಞದಲ್ಲಿ ಸ್ವಾಮಿನಿ ಕಾಶಿಕಾನಂದ ಸರಸ್ವತಿ

ಪೆರ್ಲ:ಆಸಕ್ತಿ, ಆಕರ್ಷಣೆ ಹಾಗೂ ವಿಶೇಷ ಬುದ್ಧಿ ಸಾಮಥ್ರ್ಯದೊಂದಿಗೆ ಭಗವದ್ಗೀತೆಯ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದಲ್ಲಿ ಜೀವನ ಪರಮ ಪಾವನವಾಗುವುದು ಎಂದು ಚಿನ್ಮಯ ಮಿಷನ್‍ನ ಸ್ವಾಮಿನಿ ಕಾಶಿಕಾನಂದ ಸರಸ್ವತಿ ಹೇಳಿದರು. ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಚಿನ್ಮಯ ಮಿಷನ್ ಕಾಸರಗೋಡು, ಶ್ರೀಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿ ವತಿಯಿಂದ ಕಾರ್ತಿಕೇಯ ಚಾರಿಟೇಬಲ್ ಟ್ರಸ್ಟ್ ಸಹಕಾರದಲ್ಲಿ ಶುಕ್ರವಾರ ಸಂಜೆ ಜರುಗಿದ ಭಗವದ್ಗೀತಾ ಜ್ಞಾನಯಜ್ಞ ಗೀತಸಾರದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ವೇದಮಂತ್ರಗಳನ್ನು ಯಜ್ಞ ಕಾರ್ಯಗಳಿಗೆ ಅನ್ವಯವಾಗುವಂತೆ ಬೋಧಿಸಿ, ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿದ ವೇದವ್ಯಾಸ ಮಹರ್ಷಿಗಳು ವೇದಾಧ್ಯಯನಕ್ಕೆ ಸಲ್ಲಿಸಿರುವ ಸೇವೆ ಅನನ್ಯ. ಸೃಷ್ಟಿಯ ಜೊತೆಯಲ್ಲಿ ಉಗಮವಾದ ವೇದಗಳು, ಪರಮಾತ್ಮನ ಧ್ಯಾನದಿಂದ ಕರಗತವಾದ ಜ್ಞಾನಗಳಿಂದ ಸಾಧನೆ ಮಾಡಿದಲ್ಲಿ ಜೀವನದಲ್ಲಿ ಕಷ್ಟ ಪರಿಹಾರ, ಸುಖ ಸಂತೋಷ ಪಡೆಯಲು ಸಾಧ್ಯ. ಆದರೆ ಜೀವನದಲ್ಲಿ ಶಾಂತಿ, ನೆಮ್ಮದಿ ನೆಲೆನಿಂತು ಸಂಪೂರ್ಣ ತೃಪ್ತಿ, ಪರಿಪೂರ್ಣ ಸಾಧನೆ, ಜೀವನದ ಲಕ್ಷ್ಯ ಪೂರ್ಣತೆಗೆ ವೇದದ ಕೊನೆಯ ಭಾಗವಾದ ಜ್ಞಾನ ಕಾಂಡದ ಬಗೆಗಿನ ಅರಿವು ಪಡೆಯಬೇಕು ಎಂದರು. ಸ್ವಾಮಿ ಚಿನ್ಮಯಾನಂದರು ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆಯ ಸಾರವನ್ನು ಅಳವಡಿಸುವ ಬಗ್ಗೆ ಮನವರಿಕೆ ಮಾಡಿಕೊಟ್ಟ ಮಹನೀಯರು. ಭಗವದ್ಗೀತೆ ಕುರಿತಾದ ಅವರ ಗೀತಾಜ್ಞಾನ ಯಜ್ಞಗಳೆಂಬ ಉಪನ್ಯಾಸ, ಪುಸ್ತಕಗಳು ಭಗವದ್ಗೀತೆ ಮತ್ತು ಭಾರತೀಯ ಅಧ್ಯಾತ್ಮಿಕ ತತ್ವದಲ್ಲಿ ಜನಾಸಕ್ತಿ ಮೂಡಿಸಿದ ಅವರ ಸೇವೆಗಳು ಅದ್ವಿತೀಯವಾದುದು ಎಂದು ಅವರು ಈ ಸಂದರ್ಭ ತಿಳಿಸಿದರು. ದೇವಳದ ಪ್ರಧಾನ ಅರ್ಚಕ ನಾರಾಯಣ ಮಯ್ಯ ಸಮಾರಂಭವನ್ನು ಉದ್ಘಾಟಿಸಿದರು. ವೇ.ಮೂ.ರಾಮಭಟ್ ನೀರ್ಚಾಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಗೀತೆಯ ಸಾರವನ್ನು ಅರಿತು ನಮ್ಮಲ್ಲಿನ ಅಜ್ಞಾನದ ಕೊಳೆಯನ್ನು ತೊಳೆದು ಭಗವಂತನ ಶುದ್ಧಿಯನ್ನು ಜೀವನದಲ್ಲಿ ಅಳವಡಿಸಿದಲ್ಲಿ ಗೊಂದಲ, ಸಂದಿಗ್ಧತೆ, ಜಿಗುಪ್ಸೆಗಳು ದೂರವಾಗಬಲ್ಲುದು. ಮಾನಸಿಕ ಸಿದ್ಧತೆಯೊಂದಿಗೆ ಜೀವನದ ಗುರಿ ಹಾಗೂ ಅರ್ಥವನ್ನು ತಿಳಿದಾಗ ಜೀವನ ಪರಿಪೂರ್ಣ ಹಾಗೂ ಸಾರ್ಥಕವಾಗುವುದು ಎಂದರು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣನ್ ಕಾಟುಕುಕ್ಕೆ, ಮಾಜೀ ಅಧ್ಯಕ್ಷ ಸಿ.ಸಂಜೀವ ರೈ, ಕಾಸರಗೋಡು ಚಿನ್ಮಯ ಮಿಶನ್ ಕಾರ್ಯದರ್ಶಿ ಬಾಲಚಂದ್ರನ್ ಉಪಸ್ಥಿತರಿದ್ದರು. ಬಹುಮುಖ ಪ್ರತಿಭೆ ಸನ್ನಿಧಿ ಟಿ.ರೈ ಪೆರ್ಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಜ್ಞಾನ ಹಾಗೂ ಜ್ಞಾನ ಯಜ್ಞದ ಮಾಹಿತಿ ನೀಡಿದರು. ಶ್ರೀಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿ ಸದಸ್ಯೆ ರಾಜೀವಿ ಶೆಟ್ಟಿ ವಂದಿಸಿದರು. ಸುಮನಾ ಸುರೇಂದ್ರ ರೈ ನಿರೂಪಿಸಿದರು. ಮಹಿಳಾ ಮಂಡಳಿ ಅಧ್ಯಕ್ಷೆ ವಾಣೀ ಜಿ.ಶೆಟ್ಟಿ, ಸದಸ್ಯರು ನೇತೃತ್ವ ವಹಿಸಿದರು. ಟ್ರಸ್ಟ್ ಸ್ಥಾಪಕ ಸದಸ್ಯರುಗಳಾದ ತಾರನಾಥ ರೈ ಪೆರ್ಲ, ರಾಜಶ್ರೀ ಟಿ.ರೈ ಸಹಕರಿಸಿದರು. ಸಂಜೆ ಸ್ವಾಮಿನಿ ಕಾಶಿಕಾನಂದ ಸರಸ್ವತಿ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಪ್ರತಿದಿನ ಸಂಜೆ 5ರಿಂದ 6.30ರ ತನಕ ನಡೆಯುವ ಗೀತಾಸಾರ ಪ್ರವಚನ ಯಜ್ಞ ಇಂದು ಸಂಜೆ ಸಂಪನ್ನಗೊಳ್ಳಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries