ಚುನಾವಣೆ ಸಿದ್ಧತೆ: ಸಿಬ್ಬಂದಿಗೆ ತರಬೇತಿ
0
ಮಾರ್ಚ್ 15, 2019
ಕಾಸರಗೋಡು: ಲೋಕಸಭೆ ಚುನಾವಣೆ ಸಿದ್ಧತೆ ಸಂಬಂಧ ಮತದಾನ ಕರ್ತವ್ಯದ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರುಗಿತು.
ಮಾರ್ಚ್ ತಿಂಗಳ ಕೊನೆಯ ವರೆಗೂ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಎರಡು ಹಂತದಲ್ಲಿ ಈ ತರಬೇತಿ ನೀಡಲಾಗುವುದು. ಮೊದಲ ಹಂತವಾಗಿ ಅವರವರ ವಸತಿ ಪ್ರದೇಶಗಲಿರುವವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ತರಬೇತಿ ನಿಡಲಾಗುವುದು. ಎರಡನೇ ಹಂತದಲ್ಲಿ ಕರ್ತವ್ಯಕ್ಕೆ ನೇಮಿಸಲಾದ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ತರಬೇತಿನೀಡಲಾಗುವುದು. 40 ಮಂದಿಯ ಬ್ಯಾಚ್ಗಳ ರೂಪದಲ್ಲಿ ಅರ್ಧ ದಿನದ ತರಬೇತಿ ನೀಡಲಾಗುವುದು. ಇದರ ಅಂಗವಾಗಿ ಈ ತರಬೇತಿ ಜರುಗಿತು. ಜಿಲ್ಲೆಯ ವಿವಿಧ ಕಡೆಗಳಿಂದ 50ಮಂದಿ ಭಾಗವಹಿಸಿದರು.
ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಅಬ್ದುಲ್ ರಹಮಾನ್,ನೋಡೆಲ್ ಅಧಿಕಾರಿ ಕೆ.ವಿನೋದ್ ಅವರ ನೇತರತ್ವದಲ್ಲಿ ತರಬೇತಿ ನಡೆಯಿತು. ನೂತನವಾಗಿ ಏರ್ಪಡಿಸಲಾದ ವಿವಿಪಾಟ್ ನ ಚಟುವಟಿಕೆಗಳು, ವಿದ್ಯುನ್ಮಾನ ಮತಯಂತ್ರದ ಚಟುವಟಿಕೆಗಳು, ಮತದಾನಕ್ಕೆ ಮುನ್ನ ಕೈಗೊಳ್ಳಬೇಕಾದ ಕ್ರಮಗಳು, ಮತದಾನದ ಅವಧಿಯ ಚಟುವಟಿಕೆಗಳು ಇತ್ಯಾದಿಗಳಲ್ಲಿ ತರಬೇತಿನೀಡಲಾಯಿತು. ವಿವಿಪಾಟ್ ಅನುಷ್ಠಾದೊಂದಿಗೆ ಮತದಾನದ ಮೋಕ್ (ಪ್ರಹಸನ) ನಡೆಸಲು ಪೂರಕವಾಗಿದೆ. ಯಾರಿಗೆ ಮತದಾನ ನಡೆಸಿದ್ದೇವೆ ಎಂಬ ಕುರಿತು ಪ್ರಿಂಟ್ ಔಟ್, ಮತಯಂತ್ರದ ಫಲಿತಾಂಶ, ಮತದಾನ ವೇಳೆ ಸಿದ್ಧಪಡಿಸಿದ ಗಣನೆ ಮತ್ತು ನಂತರದ ಗಣನೆ ಏಕರೂಪದಲ್ಲಿ ಇದೆಯೇ ಎಂದು ಪರಿಶೀಲಿಸಲು ಮೋಕ್ ಪೋಲ್ ಸರ್ಟಿಫಿಕೆಟ್ ನಲ್ಲಿಉ ಸೂಕ್ತ ದಾಖಲೆ ನಡೆಸಬೇಕು. ಈಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ಆದೇಶ ಪ್ರಕಾರದ 50ಕ್ಕಿಂತಕಡಿಮೆಯಿಲ್ಲದ ಮತದಾನ ಮೋಕ್ ಅವಧಿಯಲ್ಲಿ ನಡೆಸಬೇಕಾಗಿದೆ. ಪೋಲಿಂಗ್ ಏಜೆಂಟರು ಪರ್ಯಾಯ ವ್ಯವಸ್ಥೆಯಲ್ಲಿ ಬರುವ ವೇಳೆ ಈ ಕುರಿತು ಸ್ಪಷ್ಟ ಮಾಹಿತಿ ದಾಖಲಿಸಬೇಕು. ಈ ನಿಟ್ಟಿನಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ತರಬೇತಿ ನಡೆಸಲಾಗುತ್ತಿದೆ.

