ರಾಷ್ಟ್ರಪತಿಗೆ ಆಶೀರ್ವದಿಸಿದ ಸಾಲು ಮರದ ತಿಮ್ಮಕ್ಕ, ವಿಡಿಯೋ ವೈರಲ್!
0
ಮಾರ್ಚ್ 17, 2019
ನವದೆಹಲಿ: ಸಾವಿರಾರು ಸಸಿಗಳನ್ನು ರಸ್ತೆ ಬದಿಯಲ್ಲಿ ನೆಟ್ಟು ಅದನ್ನೇ ತನ್ನ ಮಕ್ಕಳು ಎಂದ ಬಾವಿಸಿ ಪೋಷಿಸಿದ ಸಾಲು ಮರದ ತಿಮ್ಮಕ್ಕ ಅವರಿಗೆ ನಿನ್ನೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಾಲುಮರದ ತಿಮ್ಮಕ್ಕ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ತಿಮ್ಮಕ್ಕ ಅವರು ರಾಷ್ಟ್ರಪತಿ ಅವರ ಹಣೆಯನ್ನು ಮುಟ್ಟಿ ಆಶೀರ್ವದಿಸಿದರು. ರಾಷ್ಟ್ರಪತಿಗಳು ಸಹ ದೀರ್ಘಾಯುಶಿ ತಿಮ್ಮಕ್ಕ ಅವರನ್ನು ಆಶೀರ್ವಾದವನ್ನು ಭಕ್ತಿ ಪೂರ್ವಕವಾಗಿ ಸ್ವೀಕರಿಸಿದ ಅಪೂರ್ವ ಘಟನೆ ನಡೆಯಿತು.
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಬರುತ್ತಿದ್ದಂತೆ ಸಮಾರಂಭದಲ್ಲಿ ನೆರೆದಿದ್ದ ಗಣ್ಯರು ಚಪ್ಪಾಳೆ ತಟ್ಟುವ ಮುಖಾಂತರ ಸಾಲುಮರದ ತಿಮ್ಮಕ್ಕರಿಗೆ ಗೌರವ ಸಲ್ಲಿಸಿದ್ದಾರೆ.

