ಪ್ರತಾಪನಗರ ಶಿವಶಕ್ತಿ ಪ್ರೆಂಡ್ಸ್ ಕ್ಲಬ್ ವಾರ್ಷಿಕೋತ್ಸವ, ಶ್ರೀ ಸತ್ಯನಾರಾಯಣ ಪೂಜೆ
0
ಮಾರ್ಚ್ 17, 2019
ಉಪ್ಪಳ: ಪ್ರತಾಪನಗರ ಶ್ರೀ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಇದರ 28ನೇ ವಾರ್ಷಿಕೋತ್ಸವವು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಶನಿವಾರ ಸಂಜೆ ಕ್ಲಬ್ ನಲ್ಲಿ ನಡೆಯಿತು.
ಸಮಾರಂಭದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಹಿರಿಯರಾದ ಎಂ.ಕೆ.ಅಶೋಕ್ ಕುಮಾರ್ ಹೊಳ್ಳ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ ಬಾಡೂರು ಧಾರ್ಮಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಐಲ ಕ್ಷೇತ್ರದ ಮೋಕ್ತೇಸರ ಲಯನ್ ಲಕ್ಷ್ಮಣ ಕುಂಬ್ಳೆ, ರಾಮ ಎಫ್.ಸಿ.ಐ ಕೃಷ್ಣನಗರ, ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಕೆ.ಪಿ.ವಲ್ಸರಾಜ್, ಕ್ಲಬ್ ಅಧ್ಯಕ್ಷ ಶಿವಾನಂದ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ರಾಮಕೃಷ್ಣ ಕಾರಂತ ತಿಂಬರ ಇವರನ್ನು ಕ್ಲಬ್ ನ ವತಿಯಿಂದ ವೇದಿಕೆಯಲ್ಲಿದ್ದ ಗಣ್ಯರು ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಹರಿಣಾಕ್ಷಿ ಮತ್ತು ಪ್ರತಿಕ್ಷ ಪ್ರಾರ್ಥನೆ ಹಾಡಿದರು. ಕ್ಲಬ್ ನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ ಸ್ವಾಗತಿಸಿ, ಉದಯ ಶಂಕರ ಶೆಟ್ಟಿ ನಿರೂಪಿಸಿ, ಧನ್ ರಾಜ್ ಪ್ರತಾಪನಗರ ವಂದಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

