HEALTH TIPS

ಇಂದಿನಿಂದ ನಾಮಪತ್ರಿಕೆ ಸಲ್ಲಿಕೆ

ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಅಭ್ಯರ್ಥಿಗಳ ನಾಮಪತ್ರಿಕೆ ಸಲ್ಲಿಕೆ ಇಂದು (ಮಾ.28) ಆರಂಭಗೊಂಡು ಏ.4 ವರೆಗೆ ನಡೆಸಬಹುದಾಗಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರಿಕೆ ಸಲ್ಲಿಸಬಹುದು. ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ, ಅವರು ಹಾಜರಿರದ ವೇಳೆ ಸಹಾಯಕ ಚುನಾವಣಾಧಿಕಾರಿಗೆ ನಾಮಪತ್ರಿಕೆ ಸಮರ್ಪಿಸಬಹುದಾಗಿದೆ. ನಾಮಪತ್ರಿಕೆ ಸಲ್ಲಿಸಲು ಆಗಮಿಸುವರಾಜಕೀಯ ಪಕ್ಷಗಳ ಮೂರು ವಾಹನಗಳು ಮಾತ್ರ ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ಪ್ರವೇಶಿಸಲು ಅನುಮತಿಯಿದೆ. ಪತ್ರಿಕೆ ಸಲ್ಲಿಕೆ ವೇಳೆ ಅಭ್ಯರ್ಥಿ ಸಹಿತ 5 ಮಂದಿ ಮಾತ್ರ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಪ್ರವೇಶಿಸಬಹುದಾಗಿದೆ. ಅಭ್ಯರ್ಥಿಗಳು ಪ್ರಧಾನ ಕವಾಟ ಮೂಲಕವೇ ಸಿವಿಲ್ ಸ್ಟೇಶನ್ ಪ್ರವೇಶಿಸಬೇಕು. ಅಭ್ಯರ್ಥಿಗಳು ಕ್ರಿಮಿನಲ್ಕೇಸುಗಳಲ್ಲಿ ಶಾಮೀಲಾಗಿದ್ದರೆ ಯಾ ಇಲ್ಲವಾಗಿದ್ದರೆ ಈ ಸಂಬಂಧ ಸತ್ಯ ಪ್ರತಿಜ್ಞೆ ಫಾರಂ 26ರಲ್ಲಿ ದಾಖಲಿಸಿ ನಾಮಪತ್ರಿಕೆಯೊಂದಿಗೆ ಸಲ್ಲಿಸಬೇಕು. ನಾಮಪತ್ರಿಕೆಗಳ ಸೂಕ್ಷ್ಮ ತಪಾಸಣೆ ಏ.5ರಂದು, ವಾಪಸ್ ಪಡೆಯುವ ದಿನಾಂಕ ಏ.8 ಆಗಿದೆ. 70 ಲಕ್ಷ ರೂ. ಚುನಾವಣೆ ಸಂಬಂಧ ಪ್ರತಿ ಅಭ್ಯರ್ಥಿ ವೆಚ್ಚ ಮಾಡಬಹುದಾದ ಮೊಬಲಗು ಆಗಿದೆ. ನಾಮಪತ್ರಿಕೆಯೊಂದಿಗೆ ಜನರಲ್ವಿಬಾಗಕ್ಕೆ 25 ಸಾವಿರ ರೂ., ಪರಿಶಿಷ್ಟ ಜಾತಿ-ಪಂಗಡದವರಿಗೆ 12,500 ರೂ., ಅಭ್ಯರ್ಥಿ ಠೇವಣಿಯಿರಿಸಬೇಕು. ಜಿಲ್ಲೆಯ ಸಾರ್ವಜನಿಕ ಪ್ರದೇಶಗಳ ಎಲ್ಲ ಫ್ಲೆಕ್ಸ್ ಫಲಕ ತೆರವುಗೊಳಿಸುವ ಸಂಬಂಧ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ. ಖಾಸಗಿ ಜಾಗದಲ್ಲಿ ಜಾಹೀರಾತು ಫಲಕ ಸ್ಥಾಪಿಸುವುದಿದ್ದರೆ ಅನುಮತಿ ದಾಖಲೆಗಳನ್ನು ಸ್ಕ್ವಾಡ್ ಗಳು ಬಯಸಿದ ಪ್ರಕಾರ ಸಲ್ಲಿಸಬೇಕು. ಹಸುರು ಸಂಹಿತೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ಬಾಬು ತಿಳಿಸಿದರು. ಚುನಾವಣಾಧಿಕಾರಿಯ ಕಚೇರಿ, ಆಸುಪಾಸು ಡಿ.ವೈಎಸ್.ಪಿ. ಯಾರ್ಂಕ್ ಗಿಂತಕಡಿಮೆಯಿಲ್ಲದ ಪೊಲೀಸ್ ಅಧಿಕಾರಿಯಪೂರ್ಣ ನಿಯಂತ್ರಣ ಇರುವುದು. ಅಗ್ತ್ಯವಿದ್ದರೆಹೆಚ್ಚುವರಿ ಪೊಲೀಸರು ನೇಮಕ ನಡೆಯಲಿದೆ ಎಂದವರು ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries