ಅಗೇಲು ಸೇವೆ
0
ಮಾರ್ಚ್ 17, 2019
ಉಪ್ಪಳ: ಇಲ್ಲಿನ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನದಲ್ಲಿ ಶ್ರೀ ಕೊರಗ ತನಿಯ ಮೊದಲಾದ ದೈವಗಳ ವಿಶೇಷ ಸಾಮೂಹಿಕ ಅಗೇಲು ಸೇವೆ ಮಾ.23 ರಂದು ನಡೆಯಲಿದೆ.
ಅಂದು ಸಂಜೆ 6.15 ಕ್ಕೆ ಬ್ರಹ್ಮರಿಗೆ ಹಾಲು, ಸೀಯಾಳ ಇಟ್ಟು ಪ್ರಾರ್ಥನೆ, 6.25 ಕ್ಕೆ ಕುಲ ದೈವಗಳಿಗೆ ಪ್ರಾರ್ಥನೆ, 6.35 ಕ್ಕೆ ಮಹಾಂಕಾಳಿ, ತನ್ನಿಮಾನಿಗ ದೈವಗಳಿಗೆ ಹಣ್ಣು ಹಂಪಲು ಸಮರ್ಪಣೆ, 6.45 ಕ್ಕೆ ಶ್ರೀ ಗುಳಿಗ ದೈವ, ಸಂಕೊಳಿಗೆ ದೈವಕ್ಕೆ ಕಲಶ ಪ್ರಾರ್ಥನೆ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

