HEALTH TIPS

ಸರಕಾರಿ ಸಿಬ್ಬಂದಿ ಯಾರಿಗಾಗಿಯೂ ಮತಯಾಚನೆ ನಡೆಸಕೂಡದು : ಜಿಲ್ಲಾಧಿಕಾರಿ

ಕಾಸರಗೋಡು: ಸರಕಾರಿ ಸಿಬ್ಬಂದಿ ಸಾಮಾಜಿಕ ಜಾಲತಾಣ ಇತ್ಯಾದಿ ಮೂಲಕ ಯಾವುದೇ ಅಭ್ಯರ್ಥಿಗಾಗಿ ಮತಯಾಚನೆ ನಡೆಸಿದರೆ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಎಚ್ಚರಿಕೆ ನೀಡಿದ್ದಾರೆ. ಸಿಬ್ಬಂದಿ ಆಡಳಿತೆ ಪರಿಷ್ಕರಣೆ ಇಲಾಖೆ 2019 ಮಾ.21ರಂದು ಪ್ರಕಟಿಸಿದ ಆದೇಶವನ್ನು ಸಿಬ್ಬಂದಿ ಕಡ್ಡಾಯವಾಗಿ ಪಾಲಿಸಬೇಕು. ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ರಾಜಕೀಯ ಪ್ರೇರಿತರಾಗಿ ಚಟುವಟಿಕೆ ನಡೆಸುವಂತಿಲ್ಲ. ಕೆಲವು ಸಿಬ್ಬಂದಿ ಸಾಮಾಜಿಕ ಜಾಲತಾಣಗಳಲ್ಲಿ ಇಂಥಾ ಚಟುವಟಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿರುವುದಾಗಿ ಅವರು ತಿಳಿಸಿದರು. ಸರಕಾರಿ ಸಿಬ್ಬಂದಿ ಪಕ್ಷಪಾತಿ ಧೋರಣೆ ನಡೆಸುವಂತಿಲ್ಲ. ಚುನಾವಣೆ ಸಂಬಂಧ ಚಟುವಟಿಕೆಗಳಲ್ಲಿ ಸ್ವತಂತ್ರವಾಗಿ ಕ್ರಮಕೈಗೊಳ್ಳುವ, ನಿಷ್ಪಕ್ಷಪಾತವಾಗಿ ಚಟುವಟಿಕೆ ನಡೆಸಬೇಕು. ಎಲ್ಲ ರಾಜಕೀಯ ಪಕ್ಷಗಳನ್ನು, ಅಭ್ಯರ್ಥಿಗಳನ್ನು ಏಕರೂಪದಲ್ಲಿ ಕಾಣಬೇಕು. ಸರಕಾರಿ ಸಿಬ್ಬಂದಿ ಅವರ ಹೆಸರು, ಪದವಿಯನ್ನು ಯಾವುದೇ ವ್ಯಕ್ತಿಗಳಿಗೆ, ಗ್ರೂಪ್‍ಗಳಿಗೆ ಸಹಾಯಕ್ಕಾಗಿ ಯಾ ವಿರೋಧಕ್ಕಾಗಿ ಬಳಸಬಾರದು. ಸಿಬ್ಬಂದಿ ವೈಯಕ್ತಿಕ ನೆಲೆಯಲ್ಲೂ ಇತರರು ನಡೆಸುವ ಚುನಾವಣೆ ಪ್ರಚಾರ ಸಭೆಗಳಲ್ಲಿ ಭಾಗವಹಿಸಬಾರದು. ಕಾನೂನು ಪಾಲನೆ ಸಂಬಂಧ ಸಿಬ್ಬಂದಿ ಸುರಕ್ಷಾ ಕ್ರಮಗಳ ಹಿನ್ನೆಲೆಯಲ್ಲಿ ಇಂಥಾ ವೇಳೆ ಭಾಗವಹಿಸಬಹುದಾಗಿದೆ. ಸರಕಾರಿ ಸಿಬ್ಬಂದಿ ತನ್ನ ಸ್ವಾ„ೀನ ಬಳಸಿ ಯಾವುದೇ ಅಭ್ಯರ್ಥಿಗಾಗಿ ಮತಯಾಚನೆ ನಡೆಸಕೂಡದು. ಸೇವಾ ಸಂಹಿತೆ, ಕ್ರಿಮಿನಲ್ ಕ್ರಮ ಸಂಹಿತೆ, 1951ರ ಜನಪ್ರಾತಿನಿಧ್ಯ ಕಾಯಿದೆ ಇತ್ಯಾದಿ ಉಲ್ಲಂಘಿಸ ಕೂಡದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries