ಸಮರಸ ಓದುಗರಿಗೆ ನಾಳೆಯಿಂದೀ ಹೊತ್ತಿಗೆ-ಹೊಸ ಹೊತ್ತಿಗೆ
0
ಮಾರ್ಚ್ 09, 2019
ಸಮರಸ ಓದುಗ ಸ್ನೇಹಿತರೆ,ಪುಸ್ತಕಗಳ ಓದು ಇಂದಿನ ಈ ಹೊತ್ತು ಕುಸಿಯುತ್ತಿದೆ ಎಂಬ ಭೀತಿಯ ಮಧ್ಯೆ ಸಾಕಷ್ಟು ಪುಸ್ತಕಗಳು ದಾಖಲೆಯ ಸಂಖ್ಯೆಯಲ್ಲಿ ಓದುಗರನ್ನು ಸೆಳೆಯುತ್ತಿರುವುದನ್ನೂ ಅಲ್ಲಗೆಳೆಯುವಂತಿಲ್ಲ.
ಓದು ಕೇವಲ ಏಕಮುಖ ವಸ್ತುವಾಗದೆ; ಅದರಾಚೆಗೆ ಅದಕ್ಕೊಂದು ಬಹುಮುಖತೆ ಇದೆ ಎನ್ನುವುದು ನಿರ್ವಿವಾದ. ವ್ಯಕ್ತಿ ಪುಸ್ತಕವೊಂದನ್ನು ಓದುವ ಹಿಂದೆ ಸಹಜ ಕುತೂಹಲಗಳು ಸಾಕಷ್ಟು ಸಹಜ. ವ್ಯಕ್ತಿಗಳಿಂದ ವ್ಯಕ್ತಿಗೆ ಅಭಿರುಚಿ-ಆಸಕ್ತಿಗಳು ಭಿನ್ನವಾದಂತೆ ಓದುವ ಪುಸ್ತಕಗಳ ವಿಭಾಗಗಳೂ ಮಹತ್ವದ್ದೆ. ನಾವು ಪುಸ್ತಕವೊಂದನ್ನು ಓದುವ ಮೊದಲು ಅದರಲ್ಲೇನಿದೆ ಎಂಬ ಅಂಶದ ಶೇ.ಒಂದನ್ನಾದರೂ ತಿಳಿದೆವೆಂದಾದರೆ ಓದಿನ ರುಚಿ ಹೆಚ್ಚುತ್ತದೆ. ಜೊತೆಗೆ ನಮ್ಮ ಆಸಕ್ತಿಯ ಓದುವ ವಿಚಾರಗಳು ಎಲ್ಲೆಲ್ಲಿವೆ ಎನ್ನುವುದೂ ಕುತೂಹಲ ಮೂಡಿಸುತ್ತದೆ.
ಈ ನಿಟ್ಟಿನಲ್ಲಿ ಇಂದು ಬಹು ವಿಸ್ಕøತವಾಗಿ ಬೆಳೆದಿರುವ ಪುಸ್ತಕ ವಿಮರ್ಶೆ ಕ್ಷೇತ್ರಕ್ಕೆ ಸಮರಸ ಸುದ್ದಿ ಪ್ರಯತ್ನಿಸಲಿದ್ದು, ನಾಳೆಯಿಂದ ಈ ಹೊಸ ಅಂಕಣ-"ಈ ಹೊತ್ತಿಗೆ-ಹೊಸ ಹೊತ್ತಗೆ" ವಿಭಾಗ ಅನಿಯಮಿತವಾಗಿ ಪ್ರಕಟಗೊಳ್ಳಲಿದೆ. ಇದನ್ನು ಬರೆಯುವವರೂ ಉದಯೋನ್ಮುಖ ಗಡಿನಾಡಿನ ಬರಹಗಾರರೇ ಆಗಿದ್ದಾರೆ.
ಸಮರಸದಲ್ಲಿ ಓದುವುದರ ಜೊತೆಗೆ ಹಂಚುವುದೂ ಮಹತ್ವದ್ದು ಎನ್ನುವುದನ್ನು ಮರೆಯುವಂತಿಲ್ಲ. ಕಾರಣ ಇಂದು ಜಗತ್ತು ನಡೆಯುತ್ತಿರುವುದೇ ಪರಸ್ಪರ ಹಂಚುವಿಕೆ-ಹಚ್ಚುವಿಕೆ ಮತ್ತು ಒಂದಷ್ಟು ಮೆಚ್ಚುವಿಕೆಗಳಿಂದ...ಅಲ್ಲವೇ.
ಹಾಗಾದರೆ ನಾಳೆಯಿಂದ ನಿರೀಕ್ಷಿಸಿ...ಇದು ಸಮರಸ ಸುದ್ದಿಯಲ್ಲಿ ಮಾತ್ರ!...ಜೊತೆಗೆ ನವ ಮಾಧ್ಯಮ ವಿಭಾಗದಲ್ಲಿ ಇದೇ ಮೊತ್ತಮೊದಲೂ ಎನ್ನಲು ಅಡ್ಡಿಯಿಲ್ಲ.ಇದು ನಿಮ್ಮಿಂದ....ಸಮರಸ ಸುದ್ದಿ ಓದುಗ ಮಿತ್ರರಿಂದ.




