ಮಹಾ ಮೃತ್ಯುಂಜಯೇಶ್ವರ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ಮೌನ ನಾಮಜಪ ಯಜ್ಞ
0
ಮಾರ್ಚ್ 17, 2019
ಮಂಜೇಶ್ವರ: ಪಾವೂರು ಸಮೀಪ ಕೊಪ್ಪಳದ ಮಹಾ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಾರ್ಚ್ 4 ರಿಂದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ಹಮ್ಮಿಕೊಂಡಿರುವ 48 ದಿನಗಳ ಉದಯಾಸ್ತಮಾನ ಮೌನ ನಾಮಜಪದ .ಹನ್ನೆರಡನೇಯ ದಿನವಾದ ಶನಿವಾರ ಬೆಳಿಗ್ಗೆ ಗಣಪತಿ ಹವನ ನಡೆಯಿತು. ಬಳಿಕ ಪುಂಡರೀಕಾಕ್ಷ ಯೋಗಾಚಾರ್ಯರವರಿಂದ ಮೌನ ನಾಮ ಜಪ ನೂರಕ್ಕಿಂತ ಹೆಚ್ಚುಬಾರಿ ನೆರವೇರಿತು. ಈ ಸಂದರ್ಭ ಸೇರಿದ್ದ ಭಕ್ತರಿಂದ ಸಾವಿರ ಸಂಖ್ಯೆಯಲ್ಲಿ ನಾಮ ಜಪ ನೆರವೇರಿತು. ಸಂಜೆ ಶ್ರೀಕೃಷ್ಣ ಭಜನಾ ಮಂಡಳಿ ಕೋಡಿಬ್ಯೆಲು ಇವರು ಭಜನಾ ಸಂಕೀರ್ತನೆ ನಡೆಸಿದರು. ಸಂಜೆ 6.30 ಕ್ಕೆ ಪುಂಡರೀಕಾಕ್ಷರಿಂದ ಸತ್ಸಂಗ ನಡೆಯಿತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ತು ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಂಕರ್ ಭಟ್ ಉಳುವಾನ, ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್.ಉಳುವಾನ, ಕೋಡಿಬೈಲು ಶ್ರೀಕೃಷ್ಣ ಭಜನಾ ಮಂದಿರದ ಅರ್ಚಕ ಸೋಮಯ್ಯ, ಸದಾನಂದ, ವಾಸಂತಿ ಕೋಡಿಬ್ಯೆಲು, ಭಜನಾ ಮಂಡಳಿ ಅಧ್ಯಕ್ಷ ಯೋಗಿಶ್, ಮಾಧವ ವಿಜಯಲಕ್ಷ್ಮಿ ಕುಂಜತ್ತೂರು, ಗೋಪಾಲ ಶೆಟ್ಟಿ ಅರಿಬೈಲು,ಸುಬ್ಬ ಗುರುಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕುಶಾಲಾಕ್ಷಿ ಕಾನದಕಟ್ಟ ಕಾರ್ಯಕ್ರಮ ನಿರ್ವಹಿಸಿದರು.

