ಸ್ವರ್ಗ ಶಾಲೆಯಲ್ಲಿ ಹಿಂದಿ ಭಾಷಾ ತರಬೇತಿ
0
ಮಾರ್ಚ್ 17, 2019
ಪೆರ್ಲ:ಸ್ವರ್ಗ ಸ್ವಾಮೀಪದ ವಿವೇಕಾನಂದ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನದ ಸುರುಳಿ ಹಿಂದಿ ಭಾಷಾ ತರಬೇತಿ ಶಿಬಿರ ನಡೆಯಿತು.
6ನೇ ತರಗತಿಯ ಮಕ್ಕಳಿಗೆ ಶಿಬಿರ ಆಯೋಜಿಸಲಾಗಿದ್ದು ಶಾಲಾ ಹಿಂದಿ ಶಿಕ್ಷಕ ಮಿಥುನ್ ವಿ.ಆರ್., ಎಸ್.ಎಂ. ಅನುದಾನ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಶಾಂತ್ ತರಬೇತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಮಕ್ಕಳು ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಮುಖ್ಯ ಶಿಕ್ಷಕಿ ಗೀತಾ ಕುಮಾರಿ, ಶಿಕ್ಷಕ ಸಚ್ಚಿದಾನಂದ ಎಸ್., ವೆಂಕಟ ವಿದ್ಯಾಸಾಗರ್ ಉಪಸ್ಥಿತರಿದ್ದರು.

