ಎಣ್ಮಕಜೆ, ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಕಲಾಸಕ್ತರಿಗೆ ಉಚಿತ ತರಬೇತಿ
0
ಮಾರ್ಚ್ 17, 2019
ಪೆರ್ಲ:ಕೇರಳ ಸಾಂಸ್ಕೃತಿಕ ಇಲಾಖೆಯ ವಜ್ರ ಜ್ಯುಬಿಲಿ ಫೆಲೋಶಿಪ್ ಯೋಜನೆ ಅಂಗವಾಗಿ ಮಂಜೇಶ್ವರ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಲೆಗಳಲ್ಲಿ ಉಚಿತ ತರಬೇತಿ ನೀಡಲಾಗುತ್ತಿದ್ದು ಎಣ್ಮಕಜೆ ಮತ್ತು ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯ ಕಲಾಸಕ್ತರಿಗೆ ಎಣ್ಮಕಜೆ ಪಂಚಾಯಿತಿ ಸಭಾಂಗಣದಲ್ಲಿ ತರಬೇತಿ ನೀಡಲಾಗುವುದು.
ಅರ್ಜಿಗಳನ್ನು ಆಯಾ ಗ್ರಾಮ ಪಂಚಾಯಿತಿ ಕಚೇರಿ, ಕುಟುಂಬಶ್ರೀ ಪ್ರತಿನಿಧಿ ಅಥವಾ ಗ್ರಾ.ಪಂ. ಸದಸ್ಯರುಗಳಿಂದ ಪಡೆಯ ಬಹುದಾಗಿದೆ. ಹತ್ತು ವರ್ಷ ವಯಸ್ಸಿನ ಮೇಲ್ಪಟ್ಟ ಕಲಾಸಕ್ತರಿಗೆ ಚಿತ್ರಕಲೆ, ತಿರುವಾದಿರ, ಮತ್ತು ಪೂರಕ್ಕಳಿ ಮತ್ತಿತರ ಕಲೆಗಳ ಉಚಿತ ತರಬೇತಿ ನೀಡಲಾಗುತ್ತಿದ್ದು ಗರಿಷ್ಠ ಪ್ರಾಯಮಿತಿ ಇರುವುದಿಲ್ಲ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಪಂಚಾಯಿತಿ ಕಚೇರಿ, ಕುಟುಂಬಶ್ರೀ ಪ್ರತಿನಿಧಿ ಅಥವಾ ಗ್ರಾ.ಪಂ. ಸದಸ್ಯರುಗಳಿಂದ ಅರ್ಜಿಗಳನ್ನು ಪಡೆದು ಭರ್ತಿಗೊಳಿಸಿ ಮಾರ್ಚ್ 25ರ ಮುಂಚಿತವಾಗಿ ಆಯಾ ಪಂಚಾಯಿತಿ ಕಚೇರಿಗಳಲ್ಲಿ ಸಲ್ಲಿಸಹುದಾಗಿದೆ.

