ಮಿಜೋರಾಂ ರಾಜ್ಯಪಾಲ ಸ್ಥಾನಕ್ಕೆ ಕುಮ್ಮನಂ ರಾಜಶೇಖರ್ ರಾಜೀನಾಮೆ, ಶಶಿ ತರೂರ್ ವಿರುದ್ಧ ಸ್ಪರ್ಧೆ!
0
ಮಾರ್ಚ್ 08, 2019
ತಿರುವನಂತಪುರ: ಮಿಜೋರಾಂ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಅವರು ರಾಜ್ಯಪಾಲ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಕುಮ್ಮಮಾನಂ ತಿರುವನಂತಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನ ಶಶಿ ತರೂರು ವಿರುದ್ಧ ಸ್ಪರ್ಧಿಸಲು ಈ ಕ್ರಮ ಕೈಗೊಂಡಿದ್ದಾರೆ. ಕುಮ್ಮನಂ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಗೀಕರಿಸಿದ್ದಾರೆ.
ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ ಮುಂದಿನ ರಾಜ್ಯಪಾಲರ ನೇಮಕವಾಗುವವರೆಗೆ ಮಿಜೋರಾಂ ರಾಜ್ಯಪಾಲರಾಗಿ ಹೆಚ್ಚುವರಿ ಹೊಣೆ ವಹಿಸಲಿದ್ದಾರೆ.




