ಹೊಸಬೆಟ್ಟು ಜಮ್ಮದ ಮನೆಯಲ್ಲಿ ಅಷ್ಟಬಂಧ ಬ್ರಹ್ಮಕಲಶ ಇಂದಿನಿಂದ
0
ಮಾರ್ಚ್ 18, 2019
ಮಂಜೇಶ್ವರ: ಭರತ ಖಂಡವು ವಿಶ್ವದ ಧರ್ಮ ಚಾವಡಿ. ಇಲ್ಲಿಯ ಆರಾಧನಾಲಯಗಳು ಆಧ್ಯಾತ್ಮಿಕ ಶಕ್ತಿ ಕೇಂದ್ರಗಳು. ಇಂತಹ ಶಕ್ತಿ ಕೇಂದ್ರದ ಮೂಲಕ ಧರ್ಮ, ಸಂಸ್ಕøತಿಯ ಬೆಳವಣಿಗೆ ನಡೆದು ಬಂದಿರುವುದು ಈ ಮಣ್ಣಿನ ಪುಣ್ಯದ ಫಲ ಎಮದು ಒಡಿಯೂರು ಶ್ರೀಸಂಸ್ಥಾನದ ಶ್ರೀಗುರು ದೇವಾನಂದ ಶ್ರೀಗಳು ತಿಳಿಸಿದರು.
ಹೊಸಬೆಟ್ಟು ಜಮ್ಮದ ಮನೆ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬ್ರಹ್ಮಕಲಶೋತ್ಸವವು ಇಂದಿನಿಂದ(ಮಂಗಳವಾರ) ಮಾ.22ರ ವರೆಗೆ ವಿವಿಧ ಕಾರ್ಯಕ್ರಮಗಳೊಮದಿಗೆ ನಡೆಯಲಿದೆ. ಸನಾತನ ಶ್ರದ್ದಾಳುಗಳು ಒಗ್ಗಟ್ಟಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಮದು ಅವರು ಕರೆನೀಡಿದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವಿರಾಜ ಶೆಟ್ಟಿ ನಿಟ್ಟೆಗುತ್ತು, ವೇದಮೂರ್ತಿ ಕೃಷ್ಣ ಭಟ್ ಕಣ್ವತೀರ್ಥ, ಸುಂದರ ಶೆಟ್ಟಿ ಬೊಳ್ನಾಡುಗುತ್ತು, ಬಾಲಕೃಷ್ಣ ಶೆಟ್ಟಿ, ನ್ಯಾಯವಾದಿ ಗಮಗಾಧರ ಕೊಂಡೆವೂರು, ಹರೀಶ್ ಶೆಟ್ಟಿ ಮಾಡ ಉಪಸ್ಥಿತರಿದ್ದರು.
ಇಂದು ಅಪರಾಹ್ನ 3ಕ್ಕೆ ಮಾಡ ಶ್ರೀಕ್ಷೇತ್ರದ ಬಳಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಸಂಜೆ 5ಕ್ಕೆ ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಧಾರ್ಮಿಕ ಸಭೆಯಲ್ಲಿ ಉದ್ಯಾವರ ಮಾಡ ಐಸ್ರಾಲ್ ಗುತ್ತು ಮಂಜು ಭಂಡಾರಿ ಅಧ್ಯಕ್ಷತೆ ವಹಿಸುವರು. ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಗಣ್ಯರು ಉಪಸ್ಥಿತರಿರುವರು. 6.30ರಿಂದ ಕಟೀಲ್ದಪ್ಪೆ ಶ್ರೀಉಳ್ಳಾಲ್ತಿ ನಾಟಕ ಪ್ರದರ್ಶನ ನಡೆಯಲಿದೆ.
ಮಾ.20 ರಂದು ಬೆಳಿಗ್ಗೆ 7ಕ್ಕೆ ಹಣಹೋಮ, ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ 5ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನ ನೀಡುವರು. ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಗಣ್ಯರು ಉಪಸ್ಥಿತರಿರುವರು. 6.30 ರಿಂದ ನೃತ್ಯ ಸೌರಭ ಭರತನಾಟ್ಯ ಪ್ರದರ್ಶನ ನಡೆಯಲಿದೆ.

