ಕಯ್ಯಾರು ಡೋನ್ ಬೋಸ್ಕೊ ಶಾಲಾ ಸಂಚಾಲಕ ಮತ್ತು ಮುಖ್ಯೋಪಾಧ್ಯಾಯರಿಗೆ ವಿದಾಯ ಸಮಾರಂಭ
0
ಮಾರ್ಚ್ 10, 2019
ಉಪ್ಪಳ: ಕಯ್ಯಾರು ಡೋನ್‍ಬೋಸ್ಕೊ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಳ್ಳುತ್ತಿರುವ ಫಾದರ್ ವಿಕ್ಟರ್ ಡಿ ಸೋಜ ಹಾಗೂ 12 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಲೂವಿಸ್ ಮೊಂತೇರೋರವರಿಗೆ ಶಾಲಾ ಆಡಳಿತ ವರ್ಗ, ರಕ್ಷಕ-ಶಿಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ವಿದಾಯ ಸಮಾರಂಭವನ್ನು ಇತ್ತೀಚೆಗೆ ಶಾಲಾಪರಿಸರದಲ್ಲಿ ಆಯೋಜಿಸಲಾಗಿತ್ತು.
ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂದನೀಯ ಫಾದರ್ ಆಂಟನಿ.ಎಂ.ಶೆರಾ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯೆ ರಾಜೀವಿ ರೈ, ಮಂಜೇಶ್ವರ ಉಪ ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್, ಬ್ಲಾಕ್ ಕಾರ್ಯಕ್ರಮ ಅಧಿಕಾರಿ ವಿಜಯ ಕುಮಾರ್.ಪಿ, ಕಯ್ಯಾರು ಕ್ರಿಸ್ತ ರಾಜ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಡಿ ಸೋಜ ಉಪಸ್ಥಿತರಿದ್ದು, ಶುಭಹಾರೈಸಿದರು.
ವೇದಿಕೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸ್ಟೀಫನ್ ಕ್ರಾಸ್ತ, ಮಾತೆಯರ ಸಂಘದ ಅಧ್ಯಕ್ಷೆ ವಿಲ್ಮಾ ಡಿ ಸೋಜ, ಶಾಲೆಯ ಹಿರಿಯ ಶಿಕ್ಷಕಿ ಮಾಗ್ದಲಿನ್ ಕ್ರಾಸ್ತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋರ್ಜ್ ಡಿ ಅಲ್ಮೇಡಾ, ಶಾಲಾ ನಾಯಕ ಅಲನ್ ಸಮೃದ್ದ್ ಕ್ರಾಸ್ತ ಮೊದಲಾದವರು ಉಪಸ್ಥಿತರಿದ್ದರು.
ಫಾದರ್ ವಿಕ್ಟರ್ ಡಿ ಸೋಜ ಮತ್ತು ಲೂವಿಸ್ ಮೊಂತೇರೊ ರವರನ್ನು ವಂದನೀಯ ಫಾದರ್ ಆಂಟನಿ ಎಂಶೆರಾ ಹಾಗೂ ಅತಿಥಿಗಳು ಗೌರವಿಸಿದರು.
ಶಿಕ್ಷಕಿ ಜ್ಯೋತಿ ಡಿಸೋಜ ಸ್ವಾಗತಿಸಿ, ಶಿಕ್ಷಕ ಲ್ಯಾನ್ಸಿ ಡಿಸೋಜ ವಂದಿಸಿದರು. ಸಿಸ್ಟರ್ ರೀನಾ, ಮೆಲ್ವಿನ್ ಡಿಸೋಜ ಪೆರ್ಮುದೆ, ಸಿರಿಲ್ ಕ್ರಾಸ್ತ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕರಾಟೆ ಪ್ರದರ್ಶನ, ಕೇರಳ ಶಾಲಾ ಕಲೋತ್ಸವದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಕನ್ನಡ ನಾಟಕ ಸದಾಶಿವ ಮಾಸ್ತರ್ ರಚನೆ, ನಿರ್ದೇಶನದ 'ಕೊಂಬು ಮೀಸೆ ' ನಾಟಕ ಪ್ರದರ್ಶನಗೊಂಡಿತು.

