HEALTH TIPS

ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಇ - ಆಟೋ ರಸ್ತೆಗೆ


    ಕಾಸರಗೋಡು: ಕೇರಳದ ಸ್ವಂತ ಇಲೆಕ್ಟ್ರಿಕಲ್ ಆಟೋ ರಿಕ್ಷಾವಾದ ಗ್ರೀನ್ ಇ ಆಟೋ ರಿಕ್ಷಾ ಜೂನ್ ತಿಂಗಳಲ್ಲಿ ರಸ್ತೆಗಿಳಿಯಲಿದೆ. ರಾಜ್ಯ ಉದ್ದಿಮೆ ಖಾತೆಯ ಆಶ್ರಯದಲ್ಲಿ ತಿರುವರಂತಪುರದಲ್ಲಿ ಕಾರ್ಯವೆಸಗುತ್ತಿರುವ ಸಾರ್ವಜನಿಕ ಸಂಸ್ಥೆಯಾದ ಕೇರಳ ಆಟೋಮೊಬೈಲ್ ಲಿಮಿಟೆಡ್(ಕೆ.ಎ.ಎಲ್) ಗ್ರೀನ್ -ಇ-ಆಟೋ ರಿಕ್ಷಾಗಳನ್ನು ನಿರ್ಮಿಸಿ ರಸ್ತೆಗಿಳಿಸಲಿದೆ.
ಕೇಂದ್ರದಲ್ಲಿ ಈಗಾಗಲೇ ಹಲವು ಇ-ಆಟೋ ರಿಕ್ಷಾಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ಪರಿಶೀಲನೆಗಾಗಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಶನ್ (ಎ.ಆರ್.ಎ.ಐ) ಗೆ ಸಲ್ಲಿಸಲಾಗಿದೆ. ಕೇಂದ್ರ ಉದ್ದಿಮೆ ಖಾತೆಯ ಎ.ಆರ್.ಎ.ಐ. ಅನುಮತಿ ಪ್ರತಿ ಲಭಿಸಿದಲ್ಲಿ ಮಾತ್ರವೇ ಇ-ಆಟೋಗಳಿಗೆ ಆರ್‍ಟಿಎ ಕಚೇರಿಗಳಲ್ಲಿ ನೋಂದಾವಣೆ ನಡೆಸಲು ಸಾಧ್ಯವಾಗಲಿದೆ. ಈಗ ಪರಿಶೀಲನೆಯಲ್ಲಿರುವ ಹಿನ್ನೆಲೆಯಲ್ಲಿ ಅದಕ್ಕೆ ಮುಂದಿನ ತಿಂಗಳು ಅನುಮತಿ ಲಭಿಸುವ ನಿರೀಕ್ಷೆ ಇದೆ. ಹಾಗೆ ನಡೆದಲ್ಲಿ ಮುಂದಿನ ಜೂನ್ ತಿಂಗಳಲ್ಲಿ ಇ-ಆಟೋ ರಿಕ್ಷಾಗಳನ್ನು ಕೇರಳದಲ್ಲಿ ರಸ್ತೆಗಿಳಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ಉದ್ದಿಮೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
    ಪೆಟ್ರೋಲ್ ಮತ್ತು ಡೀಸೆಲ್ ಜಾಲಿತ ವಾಹನಗಳು ಹೊರ ಬಿಡುವ ಹೊಗೆಯಿಂದಾಗಿ ಭಾರೀ ಪರಿಸರ ಮತ್ತು ವಾಯು ಮಾಲಿನ್ಯ ಸೃಷ್ಟಿಯಾಗುತ್ತಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇ-ಆಟೋ ರಿಕ್ಷಾ ಪರೀಕ್ಷೆಯಲ್ಲಿ ಕೆ.ಎ.ಎಲ್. ತೊಡಗಿ ಅದರಲ್ಲಿ ಯಶಸ್ವಿಯಾಗಿದೆ.
      ಇ-ಆಟೋ ರಿಕ್ಷಾಗಳಿಗೆ ಕೇಂದ್ರದ ಅಂಗೀಕಾರ ಲಭಿಸಿದ್ದಲ್ಲಿ ಕೇರಳದಲ್ಲಿ ಇನ್ನು ಕ್ರಮೇಣ ಪೆಟ್ರೋಲಿಯಂ ಇಂಧನ ಚಾಲಿತ ಆಟೋ ರಿಕ್ಷಾಗಳು ಇಲ್ಲದಾಗಿ ಇ - ಆಟೋ ರಿಕ್ಷಾಗಳನ್ನು ಪೂರ್ಣವಾಗಿ ಆವರಿಸಿಕೊಳ್ಳಲಿದೆ.
    ನಾಲ್ಕು ಚಕ್ರಗಳ ನಾಲ್ವರು ಪ್ರಯಾಣಿಕರಿಗೆ ಸಂಚರಿಸಬಹುದಾದ ಇ-ಆಟೋ ರಿಕ್ಷಾವೊಂದಕ್ಕೆ 2.5 ಲಕ್ಷ ರೂ. ಬೆಲೆ ಇದೆ. ಕಿಲೋ ಮೀಟರ್‍ಗೆ 50 ಪೈಸೆಯಷ್ಟು ಮಾತ್ರವೇ ಖರ್ಚು ಉಂಟಾಗಲಿದೆ. ಮುಂದೆ ಮೂವರು ಕುಳಿತು ಸಂಚರಿಸಬಹುದಾಗಿರುವ ಆಟೋ ರಿಕ್ಷಾಗಳನ್ನು ನಿರ್ಮಿಸಿ ರಸ್ತೆಗಿಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries