HEALTH TIPS

ಕ್ಷೇತ್ರಗಳ ಜೀರ್ಣೋದ್ಧಾರದಿಂದ ಊರು ಪ್ರಗತಿಯನ್ನು ಕಾಣುತ್ತದೆ : ಡಾ. ಸುಬ್ಬಣ್ಣ ರೈ

             ಉಳ್ಳೋಡಿ ಕಜಳ ಶ್ರೀಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಕಾರ್ಯಕ್ರಮದ ಸಮಾರೋಪ ಸಮಾರಂಭ
    ಬದಿಯಡ್ಕ: ನೀರ್ಚಾಲು ಸಮೀಪದ ಉಳ್ಳೋಡಿ ಕಜಳ ಶ್ರೀಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶನಿವಾರ ಪುನಃ ಪ್ರತಿಷ್ಠಾ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಸುಬ್ಬಣ್ಣ ರೈ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯನ್ನು ಕಾಣುವ ಮೂಲಕ ಊರಿನ ಜನತೆಯು ಒಂದುಗೂಡುತ್ತಾರೆ. ಒಂದೇ ಮನಸ್ಸಿನಿಂದ ಎಲ್ಲರೂ ಸೇರಿ ಪ್ರಾರ್ಥಿಸಿದರೆ ದೇವರು ಒಲಿಯುತ್ತಾನೆ. ಕ್ಷೇತ್ರಗಳು ಜೀರ್ಣೋದ್ಧಾರಗೊಂಡರೆ ಆ ಊರು ಪ್ರಗತಿಯನ್ನು ಕಾಣುತ್ತದೆ ಎಂದರು.
      ಪುನಃಪ್ರತಿಷ್ಠಾ ನಿರ್ಮಾಣಸಮಿತಿ ಅಧ್ಯಕ್ಷ ಮಹಾಲಿಂಗ ನಾಯ್ಕ ಅರ್ತಲೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಶಿಲ್ಪಿಗಳಾದ ಕುಂಞÂರಾಮ ಆಚಾರ್ಯ ಅದ್ರುಗುಳಿ, ಜನಾರ್ಧನ ಆಚಾರ್ಯ ಮಧೂರು, ಮೇಸ್ತ್ರಿ ಸುಬ್ಬನಾಯ್ಕ ಪುದುಕೋಳಿ ಇವರನ್ನು ಗೌರವಿಸಲಾಯಿತು.
     ಮುಖ್ಯ ಅತಿಥಿಗಳಾಗಿ ಡಾ. ಜನಾರ್ಧನ ನಾಯ್ಕ ಸಿ.ಎಚ್., ಬದಿಯಡ್ಕ ಗ್ರಾ.ಪಂ. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಂಪ್ರಸಾದ್ ಮೇಗಿನಡ್ಕ, ಕೇರಳ ರಾಜ್ಯ ಲೆಕ್ಕಪತ್ರ ವಿಭಾಗದ ಅಧಿಕಾರಿ ಗೋಪಾಲಕೃಷ್ಣ ನಾಯ್ಕ ಪಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಅಪ್ಪಯ್ಯ ನಾಯ್ಕ ಕಜಳ, ಬಾಬುನಾಯ್ಕ ಕೊಲ್ಲಂಗಾನ, ನಾರಾಯಣ ನಾಯ್ಕ ಕೊಲ್ಲಂಗಾನ ಉಪಸ್ಥಿತರಿದ್ದರು. ಹರಿಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನ್ವಿತ, ಮೋಕ್ಷಿತ, ಅಮೃತ ಪ್ರಾರ್ಥನಾಗೀತೆಯನ್ನು ಹಾಡಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ಸುರೇಂದ್ರ ಪಿ. ಸ್ವಾಗತಿಸಿ, ಬಾಲಕೃಷ್ಣ ನಾಯ್ಕ ನೀರ್ಚಾಲು ವಂದಿಸಿದರು. 
      ಸಭಾ ಕಾರ್ಯಕ್ರಮದ ನಂತರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ರಾತ್ರಿ  ಸೌಮ್ಯ ಶ್ರೀಕಾಂತ್ ಹಾಗೂ ಸೌರಮ್ಯ ಶೈಜು, ನೃತ್ಯಾರ್ಚನೆ ನಾಟ್ಯಮಂಟಪ ಮಧೂರು ಇವರ ಶಿಷ್ಯೆಯರಿಂದ ನೃತ್ಯ ಕಾರ್ಯಕ್ರಮ, ಶಾರದಾ ಆಟ್ರ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ ಅಭಿನಯಿಸಿದ ತುಳು ಹಾಸ್ಯಮಯ ನಾಟಕ `ಬಂಜಿಗ್ ಹಾಕೊಡ್ಚಿ' ಪ್ರದರ್ಶನಗೊಂಡಿತು. ಬೆಳಿಗ್ಗೆ ತಂತ್ರಿ ತುಂಗ ಅನಂತಪದ್ಮನಾಭ ಭಟ್ ಬನ್ನೂರು ಅವರ ನೇತೃತ್ವದಲ್ಲಿ ಚಂಡಿಕಾ ಹೋಮ, ಮಧ್ಯಾಹ್ನ ಪೂರ್ಣಾಹುತಿ, ಪ್ರಾರ್ಥನೆ, ಅನ್ನ ಸಂತರ್ಪಣೆ ನಡೆಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries