HEALTH TIPS

ಕಮ್ಯೂನಿಸ್ಟ್ ಭದ್ರ ಕೋಟೆಯಿಂದ ಸಚಿವ ಸಂಪುಟಕ್ಕೆ ವಿ.ಮುರಳೀಧರನ್


    ಕುಂಬಳೆ:  ನರೇಂದ್ರ ಮೋದಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ರಾಜ್ಯಸಭಾ ಸದಸ್ಯ ಕೇರಳದ ವಿ.ಮುರಳೀಧರನ್ ಮಾತ್ರವೇ ಸ್ಥಾನ ಪಡೆದಿದ್ದು, ಅವರಿಗೆ ಸಹಾಯಕ ವಿದೇಶಾಂಗ ಸಚಿವ (ರಾಜ್ಯ ಖಾತೆ) ಖಾತೆಯ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ.
      ಕಮ್ಯೂನಿಸ್ಟ್ ಭದ್ರ ಕೋಟೆಯಾದ ಕಣ್ಣೂರು ಜಿಲ್ಲೆಯ ತಲಶ್ಶೇರಿ ನಿವಾಸಿಯಾಗಿರುವ ವಿ.ಮುರಳೀಧರನ್ ಓರ್ವ ಉತ್ತಮ ಸಂಘಟಕ ಮಾತ್ರವಲ್ಲದೆ ಮೋದಿ, ಅಮಿತ್ ಷಾ ಮತ್ತು ಆರ್‍ಎಸ್‍ಎಸ್‍ನ ನಂಬಿಗಸ್ಥ. ಅವರು ಈ ಹಿಂದೆ ಬಿಜೆಪಿ ಕೇರಳ ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಳಿಕ ಅವರನ್ನು ಮಹಾರಾಷ್ಟ್ರದಿಂದ ರಾಜ್ಯಸಭಾ ಸದಸ್ಯರನ್ನಾಗಿ ಆರಿಸಲಾಯಿತು.
    ವಿದ್ಯಾರ್ಥಿ ಜೀವನದಲ್ಲೇ ಎಬಿವಿಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಮುರಳೀಧರನ್ ಎಬಿವಿಪಿ ತಲಶ್ಶೇರಿ ತಾಲೂಕು ಕಾರ್ಯದರ್ಶಿ, ಕಣ್ಣೂರು ಜಿಲ್ಲಾ ಪ್ರಮುಖ್, ರಾಜ್ಯ ಜೊತೆ ಕಾರ್ಯದಶಿರ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
     1998 ರಲ್ಲಿ ಕೇಂದ್ರದಲ್ಲಿ ವಾಜಪೇಯಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ವಿ.ಮುರಳೀಧರನ್ ಅವರನ್ನು ನೆಹರೂ ಯುವ ಕೇಂದ್ರದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಬಳಿಕ ಮಹಾನಿರ್ದೇಶಕರನ್ನಾಗಿಯೂ ಆರಿಸಲಾಗಿತ್ತು. 2009 ರಿಂದ 2015 ರ ತನಕ ಅವರು ಬಿಜೆಪಿಯ ಕೇರಳ ಘಟಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
    ಕೇರಳದಲ್ಲಿ ಬಿಜೆಪಿಯನ್ನು ಬಲಪಡಿಸಲು ಅವರು ಕಾಸರಗೋಡಿನಿಂದ ತಿರುವನಂತಪುರ ತನಕ 45 ದಿನಗಳ ಕಾಲ್ನಡೆ ಯಾತ್ರೆಯನ್ನೂ ನಡೆಸಿದ್ದರು. 2009 ರಲ್ಲಿ ಕಲ್ಲಿಕೋಟೆ ಲೋಕಸಭಾ ಕ್ಷೇತ್ರ ಮತ್ತು 2016 ರಲ್ಲಿ ತಿರುವನಂತಪುರದ ಕಳಕ್ಕೂಟ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
    1958 ರಲ್ಲಿ ತಲಶ್ಶೇರಿ ವಣ್ಣಾನ್ ವೀಟಿಲ್ ಗೋಪಾಲನ್-ದೇವಕಿ ದಂಪತಿಯ ಪುತ್ರನಾಗಿ ಜನಿಸಿದ ಮುರಳೀಧರನ್ ತಲಶ್ಶೇರಿ ಬ್ರನ್ನನ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ಡಾ.ಕೆ.ಎಸ್.ಜಯಶ್ರೀ ಅವರ ಪತ್ನಿಯಾಗಿದ್ದು, ಅವರು ಕಾಲೇಜು ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
     ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಮತ್ತು ಮೋದಿ ನೇತೃತ್ವದ ಒಂದನೇ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ರಾಜ್ಯಸಭಾ ಸದಸ್ಯ ಅಲೋನ್ಸಾ ಕಣ್ಣಂತಾನಂ ಅವರಿಗೂ ಸಚಿವ ಸ್ಥಾನ ಲಭಿಸಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಆ ನಿರೀಕ್ಷೆ ಈಡೇರಲಿಲ್ಲ.
    ಶಬರಿಮಲೆ ಆಚಾರ, ವಿಶ್ವಾಸ ಸಂರಕ್ಷಣೆ : ಕೇಂದ್ರ ಸಚಿವ ವಿ.ಮುರಳೀಧರನ್
     ಶಬರಿಮಲೆಯ ಆಚಾರ, ವಿಶ್ವಾಸ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ನೂತನವಾಗಿ ಸಚಿವ ಸ್ಥಾನವನ್ನು ಅಲಂಕರಿಸಿರುವ ವಿ.ಮುರಳೀಧರನ್ ಅವರು ಮಾಧ್ಯಮದೊಂದಿಗೆ ಹೇಳಿದ್ದಾರೆ.
     ಯಾವುದೇ ಕಾರಣಕ್ಕೂ ಶಬರಿಮಲೆಯ ಆಚಾರ, ವಿಶ್ವಾಸ ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ ಎಂದು ಸಚಿವರಾಗಿ ಪ್ರಮಾಣ ವಚನ ಸ್ವೀತಿರಿಸಿದ ಬಳಿಕ ಅವರು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಶಬರಿಮಲೆಗೆ ಮಹಿಳೆಯರನ್ನು ಪ್ರವೇಶಿಸಲಾಗುವುದೆಂದು ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು. ಇದೀಗ ಕೇಂದ್ರ ಸಚಿವ ವಿ.ಮುರಳೀಧರನ್ ಶಬರಿಮಲೆಯ ಆಚಾರ, ವಿಶ್ವಾಸವನ್ನು ಸಂರಕ್ಷಿಸುವುದಾಗಿ ಹೇಳುವ ಮೂಲಕ ಅಯ್ಯಪ್ಪ ಭಕ್ತರಲ್ಲಿ ಹೊಸ ಚೈತನ್ಯ ಮೂಡಿಸಿದೆ.
    ವಿದೇಶದಲ್ಲಿ ದುಡಿಯುತ್ತಿರುವ ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದೆಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರು ಅನಿವಾಸಿ ಭಾರತೀಯರ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಇದೀಗ ಅವರು ಆ ಸ್ಥಾನದಲ್ಲಿಲ್ಲದಿದ್ದರೂ ಅವರಿಂದ ಸಲಹೆಗಳನ್ನು ಪಡೆದುಕೊಂಡು ಸಮಸ್ಯೆ ಪರಿಹಾರಕ್ಕೆ ಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries