HEALTH TIPS

ಕುವೈಟ್ ಸಂತ್ರಸ್ತರಲ್ಲಿ ಮಂಜೇಶ್ವರದ ಯುವಕರು



   
    ಮಂಜೇಶ್ವರ: ನಕಲಿ ಏಜೆಂಟನ ಉದ್ಯೋಗ ಭರವಸೆ ನಂಬಿ ಕುವೈಟ್ ದೇಶಕ್ಕೆ ತೆರಳಿ ಉದ್ಯೋಗ ಲಭಿಸದೆ ಸಂಕಷ್ಟದಲ್ಲಿರುವ ಯುವಕರ ಸಮೂಹದಲ್ಲಿ ಮಂಜೇಶ್ವರ ಯುವಕರು ಇದ್ದಾರೆ ಎಂಬ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
    ಸಂಕಷ್ಟದಲ್ಲಿರುವ ಯುವಕರ ವಾಪಸಾತಿಗೆ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಕುವೈಟ್‍ನಲ್ಲಿ ಸಂಕಷ್ಟದಲ್ಲಿರುವ ಭಾರತೀಯರ ಪೈಕಿ 35 ಯುವಕರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ಅದರಲ್ಲಿ 3 ಮಂದಿ ಮಂಜೇಶ್ವರದವರಿದ್ದಾರೆ ಎಂದು ಮಂಗಳವಾರ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮಂಜೇಶ್ವರ ಬಿಜೆಪಿ ನೇತಾರ ಆದರ್ಶ ಬಿ.ಎಂ.ಗೆ ಮಾಹಿತಿ ನೀಡಿದ್ದಾರೆ. ಸಂಕಷ್ಟದಲ್ಲಿರುವ ಯುವಕರಿಗೆ ಸಹಾಯವಾಗಿ ಸುಷ್ಮಾ ಸ್ವರಾಜ್, ಸಂಸದ ನಳಿನ್ ಕುಮಾರ್ ಕಟೀಲ್‍ರ ಮುತುವರ್ಜಿಯಿಂದ ಈಗಾಗಲೇ ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿ, ಬಟ್ಟೆಬರೆ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
    ಒಂದು ತಿಂಗಳ ಒಳಗಾಗಿ ಯುವಕರನ್ನು ಭಾರತಕ್ಕೆ ಕರೆತರಲಾಗುವುದಾಗಿ ಹೇಳಲಾಗಿದೆ. ನಕಲಿ ಏಜೆಂಟ್ ಬಲೆಗೆ ಬಿದ್ದು, ಕೆಲಸ ದಕ್ಕದೆ ಹತಾಶರಾಗಿರುವ ಯುವಕರ ಮನೆ ಮಂದಿ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ನಕಲಿ ಏಜೆಂಟ್ ಮೇಲೆ ಕೂಡ ಕೇಸು ದಾಖಲಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್, ಮಂಜೇಶ್ವರದ ಅರಿಬ್ ನೌಷಾದ್, ಪೈವಳಿಕೆ ಬೆರಿಪದವಿನ ಮನೋಜ್ ಸಂಕಷ್ಟದಲ್ಲಿರುವ ಯುವಕರ ಪೈಕಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries