ಕಾಸರಗೋಡು: ಕೇರಳ ರಾಜ್ಯ ಭಾಷಾ ಅಲ್ಪಸಂಖ್ಯಾಕರ ಸಮಿತಿಯಿಂದ ಈ ಬಾರಿ ಕಾಸರಗೋಡಿನ ಕನ್ನಡ ಪ್ರತಿನಿಧಿಯಾಗಿದ್ದ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅವರನ್ನು ಹೊರತುಪಡಿಸಿ ಪುನರ್ ರಚಿಸಿರುವುದರ ವಿರುದ್ಧ ಕನ್ನಡ ಹೋರಾಟ ಸಮಿತಿಯ ಪದಾಧಿಕಾರಿಗಳು ತಿರುವನಂತಪುರಕ್ಕೆ ನಿಯೋಗ ತೆರಳಿ ಸಂಬಂಧಪಟ್ಟ ಇಲಾಖೆಯ ಮುಂದೆ ಪ್ರತಿಭಟನೆ ಸಲ್ಲಿಸಿ ಮನವಿ ನೀಡಲಾಯಿತು.
ಈ ಕುರಿತು ರಾಜ್ಯ ಅಲ್ಪಸಂಖ್ಯಾಕ ಸಮಿತಿಯ ಇಲಾಖೆಯ ಅ„ಕಾರಿಗಳು ಕನ್ನಡ ಭಾಷಾ ಅಲ್ಪಸಂಖ್ಯಾಕ ಪ್ರದೇಶ ಕಾಸರಗೋಡಿನಿಂದ ಓರ್ವ ಪ್ರತಿನಿ„ಯನ್ನು ಸೇರ್ಪಡೆಗೊಳಿಸುವ ಭರವಸೆ ನೀಡಿದರು.
ತಿರುವನಂತಪುರಕ್ಕೆ ತೆರಳಿದ ನಿಯೋಗದಲ್ಲಿ ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್ ಮೊದಲಾದವರಿದ್ದರು.




