HEALTH TIPS

ಯಕ್ಷ ಅಮರಾವತಿಯ ದೇವಕಾನ ಕೃಷ್ಣ ಭಟ್ ವಿಧಿವಶ

 
        ಉಪ್ಪಳ: ನಿವೃತ್ತ ಮುಖ್ಯಶಿಕ್ಷಕ ಯಕ್ಷಗಾನ ಕಲಾವಿದ ಪೈವಳಿಕೆ ದೇವಕಾನ ಕೃಷ್ಣ ಭಟ್ (74) ಮೇ 29 ರಂದು ನಿಧನ ಹೊಂದಿದರು. ಮೃತರು ಪತ್ನಿ ಪಾರ್ವತಿ,ಪುತ್ರರಾದ ಯಕ್ಷಗಾನ ಕಲಾವವಿದ, ಶಿಕ್ಷಕ ಶ್ರೀಕೃಷ್ಣ ದೇವಕಾನ ಹಾಗೂ ಖ್ಯಾತ ವೈದ್ಯ ಡಾ.ರಾಜಾರಾಮ ದೇವಕಾನ ಆವರನ್ನು ಅಗಲಿದ್ದಾರೆ.
        ಇವರು ಅಡೂರು,ಪಾಂಡಿ,ಕುಂಜತ್ತೂರು,ಪೈವಳಿಕೆ ನಗರ ಶಾಲೆಗಳಲ್ಲಿ ದೀರ್ಘಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಬಳಿಕ ಭಡ್ತಿ ಹೊಂದಿ ಮಂಗಲ್ಪಾಡಿ ಸರಕಾರಿ ಎಲ್.ಪಿ.ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. ಯಕ್ಷಗಾನ ಕಲಾವಿದ,ಪ್ರಸಾದನ ಕಲಾವಿದರಲ್ಲದೆ ರಂಗ ನಟರಾಗಿದ್ದರು. ಯಕ್ಷಗಾನದ ವೇಷಭೂಷಣ ಪರಿಕರಗಳ ವ್ಯವಸಾಯಿಯಾಗಿದ್ದರು. ಪೈವಳಿಕೆ ಶ್ರೀ ಗಣೇಶ ಕಲಾವೃಂದ ಹಾಗೂ ಬೆನಕ ಯಕ್ಷಕಲಾ ವೇದಿಕೆಯ  ಸ್ಥಾಪರಾಗಿದ್ದರಲ್ಲದೆ, ಚೇವಾರು ಜ್ಯೋತಿ ಕಲಾವೃಂದದ ಮಾಜಿ ಅಧ್ಯಕ್ಷರಾಗಿದ್ದರು. 1993 ರಲ್ಲಿ ಮಂಗಳೂರು ಕಲಾಗಂಗೋತ್ರಿ ಯಕ್ಷಗಾನ ತಂಡದಲ್ಲಿ ಕಲಾವಿದರಾಗಿ ಇವರು ವೇಷಭೂಷಣಗಳೊಂದಿಗೆ ಜಪಾನ್‍ಗೆ ತೆರಳಿದ್ದರು. ಇವರ ಸೇವೆಯನ್ನು ಗುರುತಿಸಿ ಇವರಿಗೆ ಕರ್ನಾಟಕ ಸರಕಾರವು 2013 ರ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಆಲ್ಲದೆ ಉಡುಪಿ ಕಲಾರಂಗ ಪ್ರಶಸ್ತಿ,ವನಜ ರಂಗಮನೆ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರಶಸ್ತಿ ಪುರಸ್ಕೃತರಾಗಿರುವರು.ಅಪಾರ ಶಿಷ್ಯರನ್ನು ಹೊಂದಿದ ಇವರನ್ನು ಎಡನೀರು ಮಠ ಸಹಿತ ಹಲವಾರು ಸಂಘ ಸಂಸ್ಥೆಗಳು ಸಮ್ಮಾನಿಸಿವೆ.
    ತೆಂಕುತಿಟ್ಟಿಗೆ ಜಗಮಗಿಸುವ ಅಲಂಕಾರ ತಂದವರು:
   ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಕಳೆದ ದಶಕದ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಪರಂಪರೆಯೊಂದಿಗೆ ಜಗಮಗಿಸುವ ವಸ್ತ್ರಾಲಂಕಾರವನ್ನು ಮೊತ್ತಮೊದಲ ಬಾರಿಗೆ ತಮ್ಮ ಗಣೇಶ ಕಲಾವೃಂದದಲ್ಲಿ ಅಳವಡಿಸಿ ನಾಡಿನ ಉದ್ದಗಲ ಯಕ್ಷ ವಸ್ತ್ರಗಳ, ಪರಿಕರಗಳ ಪ್ರಚಾರಕ್ಕೆ ಕೃಷ್ಣ ಭಟ್ ಅವರು ಕಾರಣರಾಗಿದ್ದರು. ಮಹಾರಾಷ್ಟ್ರ, ದೆಹಲಿ, ಚೆನ್ನೈ, ಬೆಂಗಳೂರುಗಳಿಂದ ಆಧುನಿಕ ಶೈಲಿಯ ಜರಿ ವಸ್ತ್ರಗಳು, ವಿವಿಧ ಇತರ ಪರಿಕರಗಳನ್ನು ತರಿಸಿ ತಜ್ಞರಿಂದ ಸ್ವಂತ ಮನೆಯಲ್ಲೇ ವಿನ್ಯಾಸಗೊಳಿಸಿ ಅಪಾರ ಜನಮನ್ನಣೆಗೊಳಗಾಗಿದ್ದರು. ಪ್ರಸಾಧನ ಮತ್ತು ಯಕ್ಷಗಾನ ವಸ್ತ್ರಗಳಲ್ಲಿ ಅಪಾರ ಜ್ಞಾನಹೊಂದಿದ್ದ ಅವರು ಪ್ರಸ್ತುತ ತೆಂಕುತಿಟ್ಟು ಕ್ಷೇತ್ರಕ್ಕೆ ನೀಡಿದ ಕಲಾ ಕಾಣ್ಕೆ ಮಹತ್ವದ್ದಾಗಿ ದಾಖಲಾಗಿದೆ. ಜೊತೆಎ ಹವ್ಯಾಸಿಯಾಗಿ ವೇಷಧಾರಿಯೂ ಆಗಿದ್ದ ಕೃಷ್ಣ ಭಟ್ ಅತಿಕಾಯ, ಇಂದ್ರಜಿತು, ರಾವಣ, ಕೌರವ, ಶೂರಪದ್ಮ, ಹಿರಣ್ಯಾಕ್ಷ ಮೊದಲಾದ ಪಾತ್ರಗಳಲ್ಲಿ ತಮ್ಮದೇ ಕೊಡುಗೆಯ ಮೂಲಕ ಅಚ್ಚಳಿಯದ ಪ್ರಭಾವವನ್ನು ಕಲಾರಸಿಕರಿಗೆ ಉಣಬಡಿಸಿದ್ದಾರೆ. ಬೆನಕ ಯಕ್ಷಕಲಾ ವೇದಿಕೆಯ ಮೂಲಕ ಮಂಗಳೂರು ಬಾನುಲಿ ಕೇಂದ್ರದ ಎ ಗ್ರೇಡ್ ಕಲಾವಿದರ ತಂಡವನ್ನು ಮುನ್ನಡೆಸಿ ಹಲವು ಪ್ರಸಂಗಗಳ ತಾಳಮದ್ದಳೆ ಕೂಟಗಳ ಧ್ವನಿಮುದ್ರಿಕೆಯಲ್ಲಿ ಭಾಗವಹಿಸಿದ್ದಾರೆ.
    ಸರಳ ಸಜ್ಜನಿಕೆಯ ದೇವಕಾನ ಕೃಷ್ಣ ಭಟ್ ಸಾಮಾಜಿಕವಾಗಿ ಸಹೃದಯಿ ವ್ಯಕ್ತಿಯಾಗಿ ಜನಪ್ರೀಯರಾಗಿದ್ದು, ಮೃತರು ಕುಟುಂಬಿಕರನ್ನಲ್ಲದೆ ಅಪಾರ ಬಂಧುಮಿತ್ರರನ್ನು, ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಸ್ವಗೃಹ ದೇವಕಾನ ಪರಿಸರದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ, ಬಂಧುಗಳ ಸಮಕ್ಷಮ ನೆರವೇರಿತು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries