HEALTH TIPS

ಸ್ಕಿಲ್ ಡೆವೆಲಪ್ ಮೆಂಟ್ ಯೋಜನೆ-70 ಮಂದಿ ಯುವನತೆಗೆ ನೌಕರಿ

                 
    ಕಾಸರಗೋಡು:  ಕೇಂದ್ರ-ರಾಜ್ಯ ಸರಕಾರಗಳು ಕುಟುಂಬಶ್ರೀ ಮುಖಾಂತರ ಜಾರಿಗೊಳಿಸುವ ಸ್ಕಿಲ್ ಡೆವೆಲಪ್ ಮೆಂಟ್ ಯೋಜನೆಯಾಗಿರುವ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಮೂಲಕ ಈ ಬಾರಿ ತರಬೇತಿ ಪಡೆದಿರುವ 70 ಮಂದಿಗೆ ನೌಕರಿ ಲಭಿಸಿದೆ. 18-35ವರ್ಷ ಪ್ರಾಯದ ಆಯ್ದ ಗ್ರಾಮೀಣ ವಲಯದ ಯುವತಿ-ಯುವಕರಿಗೆ ಉಚಿತ ರೂಪದಲ್ಲಿ ಕಡಿಮೆ ಅವಧಿಯ ತರಬೇತಿನೀಡಿ ನೌಕರಿಯ ಖಚಿತತೆ ನೀಡುವ ಯೋಜನೆ ಇದಾಗಿದೆ.
       ಪೆರಿಯ ಶ್ರೀ ನಾರಾಯಣ ಎಜ್ಯಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವ್ಯಾಪ್ತಿಯಲ್ಲಿ ಏ.4ರಂದು ಈ ಯೋಜನೆ ಮೂಲಕ ಹತ್ತನೇ ತರಗತಿ ಶಿಕ್ಷಣಾರ್ಹತೆ ಪಡೆದಿರುವ 70 ಮಂದಿ ಯುವಜನತೆಗೆ ಹಾಸ್ಪಿಟಾಲಿಟಿ(ಹೋಟೆಲ್ ಮೆನೆಜ್ ಮೆಂಟ್) ತರಬೇತಿಗೆ ಆಯ್ಕೆ ಮಾಡಲಾಗಿತ್ತು. ತರಬೇತಿ ಪೂರ್ಣಗೊಳ್ಳುತ್ತಿದ್ದಂತೆ ಎಲ್ಲ ವಿದ್ಯಾರ್ಥಿಗಳಿಗೂ ಉದ್ಯೋಗ ದೊರಕಿತ್ತು.
       ಜಿಲ್ಲೆಯ ಮತ್ತು ಇತರ ಜಿಲ್ಲೆಗಳ ಫೈವ್ ಸ್ಟಾರ್ ಶ್ರೇಣಿಯ 12 ಹೋಟೆಲ್ ಗಳಲ್ಲಿ ಸರಕಾರಿ ತಿಳಿಸಿರುವ ವೇತನ ಸಹಿತದ ನೌಕರಿ ಕ್ಯಾಂಪಸ್ ಇಟರ್ ವ್ಯೂ ಮೂಲಕ ಲಭಿಸಿದೆ.
        ಈ ಸಂಬಂಧಪೆರಿಯ ಡಿ.ಡಿ.ಯು.ಜಿ.ಕೆ. ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭವನ್ನು ಸಮಿತಿ ಅಧ್ಯಕ್ಷರೂ ಆಗಿರುವ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ಹಸ್ತಾಂತರಿಸಿದರು. ಎಸ್.ಎನ್.ಇ.ಟಿ.ಸಿ. ಅಧ್ಯಕ್ ಸಿ.ರಾಜನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಟುಂಬಶ್ರೀ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ಮುಖ್ಯ ಅತಿಥಿಯಾಗಿದ್ದರು. ಎಸ್.ಎನ್.ಟ್ರಸ್ಟ್ ನಿರ್ದೇಶಕ ಬಾಲಕೃಷ್ಣನ್ ಪೆರಿಯ, ಕುಟುಂಬಶ್ರೀ ಅಹಾಯಕ ಸಂಚಾಲಕ ಜೋಸೆಫ್ ಪೆರುಂಕಿಲ್, ಡಾ.ಕೆ.ವಿ.ಶಶಿಧರನ್, ಬೈಜು ಆಯಾಡತ್ತಿಲ್, ಕುಟುಂಬಶ್ರೀ ಜಿಲ್ಲಾ ಪ್ರೋಗ್ರಾಂ ಸಂಚಾಲಕಿ ರೇಶ್ಮಾ, ಮಹಮ್ಮದ್ ನಯೀಫ್, ಸಫೀರ್, ಐಶ್ವರ್ಯಾ ಕುಮಾರನ್ ಮೊದಲಾದವರು ಉಪಸ್ಥಿತರಿದ್ದರು.
     ಪ್ಲಸ್ ಟು ಕನಿಷ್ಠ ಶಿಕ್ಷಣಾರ್ಹತೆ ಹೊಂದಿರುವವರಿಗಾಗಿ 6 ತಿಂಗಳ ಅವಧಿಯ ಬ್ಯಾಂಕಿಂಗ್ ಆಂಡ್ ಅಕೌಂಟಿಂಗ್ (ಟ್ಯಾಲಿ), ಫ್ಯಾಷನ್ ಡಿಸೈನಿಂಗ್ ತರಬೇತಿಗಳು ಎಸ್.ಎನ್.ಟ್ರಸ್ಟ್ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ.
                 (ಚಿತ್ರ ಮಾಹಿತಿ: ಕುಟುಂಬಶ್ರೀ: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ಹಸ್ತಾಂತರಿಸುತ್ತಿರುವುದು.)

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries