HEALTH TIPS

ಧರ್ಮತ್ತಡ್ಕ ಶಾಲೆಯಲ್ಲಿ ಹಲಸು ಸಂಭ್ರಮ- ಸಹಜವಾಗಿ ನಮ್ಮ ಪರಿಸರದಲ್ಲಿ ಲಭ್ಯ ಆಹಾರ ವಸ್ತುಗಳ ಬಳಕೆಯೇ ಉತ್ತಮ: ರಾಮಚಂದ್ರ ಭಟ್

     
     ಕುಂಬಳೆ: ಬದುಕು ಎಷ್ಟು ಬದಲಾಗಿದೆ ಎಂಬುದಕ್ಕೆ ಇಂದಿನ ಜನರ ಆಹಾರ ಜೀವನದ ಬದಲಾವಣೆಯೇ ಸಾಕ್ಷಿ. ಸಹಜವಾಗಿ ನಮ್ಮ ಪರಿಸರದಲ್ಲಿ ಲಭ್ಯವಾಗುವ ಆಹಾರ ವಸ್ತುಗಳ ಬಳಕೆಯೇ ಉತ್ತಮ ಎಂಬುದು ಗೊತ್ತಿದ್ದರೂ ಕೂಡಾ ಜನರ ನಡೆ ವಿಷಕಾರಿ ಆಹಾರದ ಕಡೆಗೆ ಸಾಗುತ್ತಿದೆ ಎಂಬುದನ್ನು ಮನಗಂಡು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಹಯೋಗದೊಂದಿಗೆ ಹಲಸು ಸಂಭ್ರಮವು ಪ್ರತಿವರ್ಷದಂತೆ ಈ ಬಾರಿಯೂ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಜರಗಿತು. ಈ ಸಂದರ್ಭದಲ್ಲಿ ಹಲಸು ಸಂಭ್ರಮಕ್ಕೆ ಚಾಲನೆ ನೀಡಿದ ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್ ನೇರೋಳು ಮಾತನಾಡಿ, ಸಹಜವಾಗಿ ನಮ್ಮ ಪರಿಸರದಲ್ಲಿ ಸಿಗುವಂತಹ ಆಹಾರ ವಸ್ತುಗಳ ಬಳಕೆಯೇ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ಅಧ್ಯಾಪಿಕೆ ವಿಚೇತಾ ಲೋಕೇಶ್ ಅವರ ಸಹಕಾರದಿಂದ ಸುಮಾರು ನೂರರಷ್ಟು ಹಲಸನ್ನು ಮಧ್ಯಾಹ್ನದ ಊಟಕ್ಕೆ ಅನುಕೂಲವಾಗುವಂತೆ ಶಾಲೆಯಲ್ಲಿ ಅಧ್ಯಾಪಕ-ವಿದ್ಯಾರ್ಥಿಗಳ ಸಹಕಾರದಿಂದ ಉಪ್ಪಿನಲ್ಲಿ ಹಾಕಿ ಇರಿಸಲಾಯಿತು.
    ಶಾಲಾ ಅಧ್ಯಾಪಕ ಗೋವಿಂದ ಭಟ್, ಶಿವಪ್ರಸಾದ್ ಚೆರುಗೋಳಿ, ರಾಜಕುಮಾರ್ ಕಾಟುಕುಕ್ಕೆ, ಪ್ರದೀಪ ಕರ್ವಜೆ, ಪ್ರಶಾಂತ ಹೊಳ್ಳ ಎನ್., ತುಳಸಿ ಕೆ., ಸೌಮ್ಯ, ಗಂಗಮ್ಮ, ಕೇಶವ ಪ್ರಸಾದ ಎಡಕ್ಕಾನ, ಗಣೇಶ ನೇತೃತ್ವ ವಹಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries