HEALTH TIPS

ಮಂಜೇಶ್ವರ ಉಪ ಚುನಾವಣೆ-ಯುಡಿಎಫ್ ಸಭೆ-ಎಡಪಕ್ಷಗಳು ಪ್ರಸ್ತುತ ಐತಿಹಾಸಿಕ ಪತನದತ್ತ ಸಾಗುತ್ತಿದೆ-ಡಾ.ಶೂರನಾಡ್ ರಾಜಶೇಖರನ್


     ಉಪ್ಪಳ: ಲೋಕಸಭಾ ಚುನಾವಣೆಯಲ್ಲಿ ದಾಖಲೆಯ ಸ್ಥಾನಗಳನ್ನು ಕಳೆದುಕೊಂಡು ಐತಿಹಾಸಿಕ ಪದನದತ್ತ ಸಾಗುತ್ತಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಡಾ.ಶೂರನಾಡ್ ರಾಜಶೇಖರನ್ ಅವರು ತಿಳಿಸಿದರು.
    ಯುಡಿಎಫ್ ಮಂಜೇಶ್ವರ ಮಂಡಲ ಸಮಿತಿ ಗುರುವಾರ ಉಪ್ಪಳ ಸಿ.ಎಚ್. ಸಭಾಂಗಣದಲ್ಲಿ ಆಯೋಜಿಸಿದ್ದ ನೇತಾರರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ತ್ರಿಪುರಾ ಹಾಗೂ ಪಶ್ಚಿಮಬಂಗಾಳದಲ್ಲಿ ಎಡಪಕ್ಷ ಅನುಭವಿಸಿದ ಸೋಲು ಕೇರಳದಲ್ಲೂ ಉಂಟಾಗಲಿದೆ. ಏನಾದರೂ ತನ್ನ ನಡೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ದಾಷ್ಟ್ರ್ಯ ಸ್ವಂತ ಪಕ್ಷದ ಅವನತಿಗೆ ಕಾರಣವಾಗುವುದೆಂಬ ಅಂಶವನ್ನು ಗುರುತಿಸಲು ವಿಫಲವಾಗಿರುವುದು ಪಕ್ಷದ ಅಪಕ್ವತೆಯ ಸಂಕೇತವಾಗಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯ ಪುತ್ರನ ವಿವಾದಗಳನ್ನು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವ ಮುಖ್ಯಮಂತ್ರಿಯ ಮೌನದ ಹಿಂದೆ ಸಂಶಯಗಳಿವೆ ಎಂದು ಅವರು ಈ ಸಂದರ್ಭಧ ತಿಳಿಸಿದರು. ಮುಂಬರುವ ವಿಧಾನ ಸಭಾ ಉಪಚುನಾವಣೆಯಲ್ಲಿ ಜನಜಾಗೃತಿಯ ಮೂಲಕ ರಾಜ್ಯ ಸರಕಾರದ ವಿರುದ್ದ ಬಲವಾದ ಪ್ರತಿಭಟನೆ ವ್ಯಕ್ತಪಡಿಸಲಾಗುವುದೆಂದು ಅವರು ತಿಳಿಸಿದರು.
    ಯುಡಿಎಫ್ ಮಂಜೇಶ್ವರ ಮಂಡಲಾಧ್ಯಕ್ಷ ಮೂಸಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಂಜುನಾಥ ಆಳ್ವ, ಮುಸ್ಲಿಂಲೀಗ್ ರಾಜ್ಯ ಕಾರ್ಯದರ್ಶಿ ಕೆ.ಎಸ್.ಹಂಸ, ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್, ನ್ಯಾಯವಾದಿ ಸಿ.ಕೆ.ಶ್ರೀಧರನ್, ಕೇರಳ ಪ್ರದೇಶ ಕಾಂಗ್ರೆಸ್ಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಕುಂಞÂಕಣ್ಣನ್, ಕಾರ್ಯದರ್ಶಿ ಕೆ.ನೀಲಕಂಠನ್, ಮುಸ್ಲಿಂಲೀಗ್ ಜಿಲ್ಲಾಧ್ಯಕ್ಷ ಎಂ.ಸಿ.ಖಮರುದ್ದೀನ್, ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ರಹಿಮಾನ್, ಯುಡಿಎಫ್ ಜಿಲ್ಲಾಧ್ಯಕ್ಷ ಎ.ಗೋವಿಂದನ್ ನಾಯರ್ ಉಪಸ್ಥಿತರಿದ್ದು ಮಾತನಾಡಿದರು.
    ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ  ಪಿ.ಬಿ.ಅಬ್ದುಲ್ ರಝಾಕ್ ಅವರ ನಿಧನದ ಕಾರಣ ನಡೆಯಲಿರುವ ಉಪ ಚುನಾವಣೆಗೆ ಯುಡಿಎಫ್ ಕಾರ್ಯಸೂಚಿಯನ್ನು ಈ ಸಂದರ್ಭ ಸಿದ್ದಪಡಿಸಲಾಯಿತು. ಈ ಹಿನ್ನೆಲೆಯಲ್ಲಿ ಯುಡಿಎಫ್ ಮುಖಂಡರ ಸಭೆ ನಡೆಸಲಾಗಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries