ಬದಿಯಡ್ಕ: ಕಾಸರಗೋಡು ಜಿಲ್ಲಾ ಶಿವಬ್ರಾಹ್ಮಣ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ವೈ.ಪಿ.ರಾಮಚಂದ್ರ ಇವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪಿಲಿಕೂಡ್ಲು ಮೂಡಡ್ಕ ಶೌರೀಶ ನಿಲಯದಲ್ಲಿ ನಡೆಯಿತು.
ಸಂಘದ ಸ್ಥಾಪಕಾಧ್ಯಕ್ಷ ವೈ. ಸತ್ಯನಾರಾಯಣ ಕಾಸರಗೋಡು ಇವರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಘವು ಬೆಳೆಯುತ್ತಿರುವ ಹಂತದಲ್ಲಿದ್ದು ಸಮಾಜದಲ್ಲಿ ಉತ್ತಮಕಾರ್ಯಗಳನ್ನು ಮಾಡಿಕೊಂಡು ಮುಂದುವರಿಯಬೇಕೆಂದೂ, ಸಂಘದ ಎಲ್ಲಾ ಸದಸ್ಯರೂ ಏಕಮನಸ್ಸಿನಿಂದ ದುಡಿಯಬೇಕೆಂದು ಸಲಹೆನೀಡಿದರು.
ಗೌರವಾಧ್ಯಕ್ಷ ಪೆÇ್ರ. ಸುಬ್ರಹ್ಮಣ್ಯ, ಬಾಲಕೃಷ್ಣ ಶರ್ಮ ಕುಂಜಾರು ಶುಭಹಾರೈಸಿದರು. ಚಿ.ಶೌರೀಶ, ಕು. ಸಾತ್ವಿಕಾ ಹಾಗೂ ಕು. ಸಾನ್ವಿಕಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಮಾಧ್ಯಮ ಛಾಯಾಗ್ರಾಹಕ ಕೃಷ್ಣಕುಮಾರ್ ಪಿ.ಎಸ್. ಸ್ವಾಗತಿಸಿ, ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ್ ರಾವ್ ವಂದಿಸಿದರು. ಸಂಘದ ಕಾರ್ಯದರ್ಶಿ ಸೀತಾರಾಮ ರಾವ್ ಪಿಲಿಕೂಡ್ಲು ಕಾರ್ಯಕ್ರಮ ನಿರೂಪಣೆ ಮಾಡಿದರು.





