ಬದಿಯಡ್ಕ: ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಪ್ರವೇಶೋತ್ಸವವನ್ನು ಶಾಲಾ ಪ್ರಬಂಧಕ ಮತ್ತು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಗುರುವಾರ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಕೆ.ರಾಮಕೃಷ್ಣ ಭಟ್ ಶುಭಾಶಂಸನೆಗೈದರು. ನವಾಗತ ಮಕ್ಕಳನ್ನು ಕಲಿಕಾ ಕಿಟ್, ಸಿಹಿತಿಂಡಿ ನೀಡಿ ಸ್ವಾಗತಿಸಲಾಯಿತು. ಶಾಲಾ ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ, ಸ್ಥಳೀಯ ಅಂಗನವಾಡಿ ಅಧ್ಯಾಪಿಕೆ ಉಷಾ, ಹೆತ್ತವರು ಉಪಸ್ಥಿತರಿದ್ದರು. ಅಧ್ಯಾಪಿಕೆ ಮಧುಮತಿ ಸ್ವಾಗತಿಸಿ, ಶಿಕ್ಷಕಿ ಶ್ರೀವಿದ್ಯಾ ವಂದಿಸಿದರು.
ಕಿಳಿಂಗಾರು ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ
0
ಜೂನ್ 06, 2019