ಮುಳ್ಳೇರಿಯ: ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಆಷಾಢ ಮಾಸದಲ್ಲಿ ಲೋಕಕಲ್ಯಾಣಾರ್ಥವಾಗಿ ವಿವಿಧ ಕ್ಷೇತ್ರಗಳಲ್ಲಿ ಜು.17ರಿಂದ ಜು. 23ರ ತನಕ ವಿಷ್ಣು ಸಹಸ್ರನಾಮ ಪಾರಾಯಣ ಸಪ್ತಾಹ ನಡೆಯಲಿದೆ. ಜು.17ರಿಂದ ಅಡೂರು ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಸಂಜೆ 6.30ರಿಂದ, ಕಲ್ಲೇರಿಮೂಲೆ ಮಹಾವಿಷ್ಣು ಕ್ಷೇತ್ರದಲ್ಲಿ ಸಂಜೆ 6.30ರಿಂದ ಹಾಗೂ ನೂಜಿಬೆಟ್ಟು ಮಹಾವಿಷ್ಣು ಕ್ಷೇತ್ರದಲ್ಲಿ ಬೆಳಗ್ಗೆ 6.40ರಿಂದ ಪಾರಾಯಣ ಕಾರ್ಯಕ್ರಮ ನಡೆಯಲಿದೆ. ಜು.24ರಿಂದ ಆ.17ರ ತನಕ ಶಿವಳ್ಳಿ ಬ್ರಾಹ್ಮಣ ಸಭಾದ ಮುಳ್ಳೇರಿಯ ವಲಯದ ಪ್ರತೀ ಮನೆಯಲ್ಲೂ ಸಂಜೆ 6.30ರ ನಂತರ ವಿಷ್ಣು ಸಹಸ್ರನಾಮ ಪಾರಾಯಣ ಮಾಸಾಚರಣೆ ನಡೆಯಲಿದೆ. ಈ ಪುಣ್ಯಕಾರ್ಯದಲ್ಲಿ ಶಿವಳ್ಳಿ ಸಮುದಾಯದ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
ಪಾರಾಯಣ ಮಾಸಾಚರಣೆ ಜು.17ರಿಂದ
0
ಜುಲೈ 15, 2019