HEALTH TIPS

ದುಡಿತವೇ ಜೀವನವಾದ ಕಯ್ಯಾರರ ಜೀವನಗಾಥೆ ಕಾಲಘಟ್ಟವೊಂದರ ಆಕರ-ಡಾ.ಬೇ.ಸಿ.

         
          ಮುಳ್ಳೇರಿಯ: ನುಡಿದಂತೆ ನಡೆದ, ನಡೆದಂತೆ ಬರೆದ ಸಾಧಕ ಶ್ರೇಷ್ಠ ಪರಂಪರೆಗೆ ಸೇರುವ ಬದುಕು-ಬರಹಗಳಿಂದ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಬರಹಗಳ ಸಮಗ್ರ ಅಧ್ಯಯನ ವಿಸ್ಕøತವಾಗಿ ನಡೆಯಬೇಕು. ತಮ್ಮ ಆತ್ಮಕತೆಯಾದ ದುಡಿತವೇ ಜೀವನ ಕೃತಿ ಕಾಲಘಟ್ಟವೊಂದರ ಸಮಗ್ರ ಪರಂಪರೆಯನ್ನು ತೆರೆದಿಡುವ ಮೂಲಕ ಶ್ರೇಷ್ಠ ಆಕರ ಗ್ರಂಥವಾಗಿ ರಾಷ್ಟ್ರಮಟ್ಟದಲ್ಲೇ ಗುರುತಿಸಿಕೊಳ್ಳುವಂತದ್ದು ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಕನ್ನಡ ಹೋರಾಟ ಸಮಿತಿಯ ಬದಿಯಡ್ಕ ಘಟಕದ ಅಧ್ಯಕ್ಷ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
        ಮುಳ್ಳೇರಿಯದ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಗ್ರಂಥಾಲಯದ ಆಶ್ರಯದಲ್ಲಿ ಕಾರಡ್ಕ ಸರ್ಕಾರಿ ಹೈಸ್ಕೂಲಿನಲ್ಲಿ ಶನಿವಾರ ಆಯೋಜಿಸಲಾದ ಕಯ್ಯಾರರ ಆತ್ಮಕತೆ "ದುಡಿತವೇ ಜೀವನ" ಕೃತಿಯ ಬಗ್ಗೆ ನಡೆದ ಸಂವಾದದಲ್ಲಿ ಆತ್ಮಕತೆಯ ಬಗ್ಗೆ ವಿಶ್ಲೇಷಣೆ ನಡೆಸಿ ಅವರು ಮಾತನಾಡಿದರು.
   ಬಹುಮುಖ ಸಂಪನ್ನತೆಯ ಕಯ್ಯಾರರು ಸ್ವಾತಂತ್ರ್ಯ ಹೋರಾಟ, ಕನ್ನಡ ಏಕೀಕರಣ, ವಿಲೀನೀಕರಣ, ಗಡಿನಾಡ ಹೋರಾಟ, ಸಾಹಿತ್ಯ, ಸಾಮಾಜಿಕ, ರಾಜಕೀಯ, ಕೃಷಿ,  ಪತ್ರಿಕೋದ್ಯಮ ಸಹಿತ ವೈವಿಧ್ಯಮಯ ಕ್ಷೇತ್ರಗಳಲ್ಲಿ ವಿಸ್ತರಿಸಿದವರು ಎಂದು ತಿಳಿಸಿದ ಅವರು ತಮ್ಮ ಆತ್ಮಕತೆಯಲ್ಲಿ ಸಂಪೂರ್ಣ ಮಾಹಿತಿಗಳನ್ನು ನೀಡುವುದರ ಮೂಲಕ ಕ್ಲಿಷ್ಟ ಸನ್ನಿವೇಶಗಳನ್ನು ನಿರ್ವಹಿಸಿದ ಬಗ್ಗೆ ಸಮತೋಲನವನ್ನು ಕಂಡುಕೊಂಡಿರುವುದು ವಿಶೇಷತೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಸಂಸ್ಕøತ ವಿದ್ವಾಂಸರಾಗಿ ವಿವಿಧೆಡೆ ಉದ್ಯೋಗದ ಅವಕಾಶಗಳಿದ್ದರೂ, ಹುಟ್ಟೂರ ಮಮತೆಯಿಂದ ಕೃಷಿ ಮತ್ತು ಅಧ್ಯಾಪನಕ್ಕಾಗಿ ಕಾಸರಗೋಡನ್ನು ಕಾರ್ಯಕ್ಷೇತ್ರವಾಗಿಸಿ ಕರ್ನಾಟಕದಾತ್ಯಂತ ಮೂಡಿಸಿರುವ ಸಂಚಲನ ಕಯ್ಯಾರರ  ಧೀಮಂತಕೆಯ ಸಾಕ್ಷಿಯಾಗಿದೆ ಎಂದು ವಿಶ್ಲೇಶಿಸಿದ ಅವರು ನೇಗಿಲ ಯೋಗಿಯಾಗಿ ಕೃಷಿ, ಮಣ್ಣಿನ ಸಮೃದ್ದತೆಯ ಅಭಿಮಾನದೊಂದಿಗೆ ಶತಮಾನ ಬಾಳಿ ಬೆಳಕಾದವರು ಎಂದು ತಿಳಿಸಿದರು.
    ಶಿಕ್ಷಕಿ, ಸಂಶೋಧನಾ ವಿದ್ಯಾರ್ಥಿ ಸೌಮ್ಯಾ ಪ್ರಸಾದ್ ಕಿಳಿಂಗಾರು ಅವರು ಆತ್ಮಕತೆಯ ಅವಲೋಕನ ನಡೆಸಿ ಮಾತನಾಡಿ, ಅಗಾಧ ಜ್ಞಾನ ಕಾಶಿಯವರಾದ ಕಯ್ಯಾರರು ಜಾತ್ಯಾತೀತರಾಗಿ ಮನುಷ್ಯನಾಗಿ ಬದುಕುವುದನ್ನು ಕಯ್ಯಾರರು ಅನುಸರಿಸಿದವರು ಎಂದು ತಿಳಿಸಿದರು. ಶಿಕ್ಷಣ ವ್ಯವಸ್ಥೆಯ ಪ್ರಾಥಮಿಕ ಸಿದ್ದಾಂತಗಳನ್ನು ರೂಪಿಸುವಲ್ಲಿ ಆದ್ಯಪ್ರವರ್ತಕರಾಗಿ ಹೊಸ ದಿಶೆ ನೀಡಿದ ಕಯ್ಯಾರರು ನಡೆ-ನುಡಿಯಲ್ಲಿ ಸರಳ ಸಜ್ಜನರಾಗಿ ಬದುಕಿ ಮಾದರಿಯಾದವರು. ಈ ಬಗ್ಗೆ ಬೆಳಕು ಚೆಲ್ಲುವ ಅವರ ಆತ್ಮಕತೆ ಎಲ್ಲಾ ಕಾಲಘಟ್ಟಕ್ಕೂ ವಿಶಿಷ್ಟವೆನಿಸುವ ವ್ಯಾಪಕತೆಹೊಂದಿದ್ದು, ಭಾಷಾ ಸ್ನೇಹಿಗಳು ಓದಲೇ ಬೇಕಾದ ಮಹತ್ವದ ಕೃತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ರಾಘವೇಂದ್ರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಚಂದ್ರನ್ ಮೋಟ್ಟಮ್ಮತ್ ಹಾಗೂ ಪತ್ರಕರ್ತ ಪುರುಷೋತ್ತಮ ಭಟ್ ಅವರು ಕಯ್ಯಾರ ಸಾಹಿತ್ಯ, ಸಮಾಜಸೇವೆ, ಹೋರಾಟ ಮೊದಲಾದ ಬಹುಮುಖಗಳು ವರ್ತಮಾನದ ಜನಜೀವನಕ್ಕೆ ಹೇಗೆ ಮಾದರಿಯಾಗಬೇಕು ಎಂದು ವಿಶ್ಲೇಶಿಸಿದರು. ಗ್ರಂಥಾಲಯದ ಸಂಚಾಲಕ ಕೆ.ಕೆ.ಮೋಹನನ್ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆ.ಗೋವಿಂದನ್ ವಂದಿಸಿದರು. ರಾಮಚಂದ್ರ ಬಲ್ಲಾಳ್ ನಾಟೆಕಲ್ಲು, ಚೇತನಾ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries