HEALTH TIPS

ಪುನರ್ನವದ ಸಾಮಾಜಿಕ ಬದ್ಧತೆ ಶ್ಲಾಘನೀಯ : ಶಾಸಕ ಎನ್.ಎ.ನೆಲ್ಲಿಕುನ್ನು


                 
       ಕಾಸರಗೋಡು: ತಾವು ದುಡಿದು ಸಂಪಾದಿಸಿದ ಸಂಪಾದನೆಯ ಒಂದು ಪಾಲನ್ನು ಸಮಾಜಕ್ಕೆ ನೀಡುವ ಪುನರ್ನವ ಟ್ರಸ್ಟ್‍ನ ಟ್ರಸ್ಟಿಗಳ ಸಾಮಾಜಿಕ ಬದ್ಧತೆ ಶ್ಲಾಘನೀಯ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಹೇಳಿದರು.
       `ಬಾಳಿಗೊಂದು ಬೆಳಕು' ಎಂಬ ಸಂದೇಶದೊಂದಿಗೆ ಆರ್ಥಿಕವಾಗಿ ಹಿಂದುಳಿದ, ಪ್ರತಿಭಾವಂತರಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯವನ್ನೊದಗಿಸುವ ಸದುದ್ದೇಶದಿಂದ ಪ್ರಾರಂಭವಾದ ಪುನರ್ನವ ಟ್ರಸ್ಟ್‍ನ 9 ನೇ ವಾರ್ಷಿಕ ಕಾರ್ಯಕ್ರಮವನ್ನು ನಗರದ ಹೊಸಬಸ್ ನಿಲ್ದಾಣ ಸಮೀಪದ ಸ್ಪೀಡ್ ವೇ ಇನ್ ಸಭಾಂಗಣದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
         ವಿವಿಧ ಹುದ್ದೆಗಳಲ್ಲಿರುವ ಐವರು ಸಹಪಾಠಿಗಳು ರಚಿಸಿದ ಪುನರ್ನವ ಟ್ರಸ್ಟ್ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಶಿಕ್ಷಣ ಅರ್ಧದಲ್ಲಿ ಮೊಟಕುಗೊಳ್ಳಬಾರದು ಎಂಬ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರಿಗೆ ನೀಡುವ ಧನಸಹಾಯವನ್ನೊಳಗೊಂಡ ಶಿಕ್ಷಣ ಕಿಟ್ ಮಾದರಿಯಾಗಿದೆ. ಇಂತಹ ಟ್ರಸ್ಟ್ `ರೋಲ್ ಮೋಡೆಲ್' ಎಂದೇ ಹೇಳಬಹುದು ಎಂದು ಶ್ಲಾಘಿಸಿದ ಶಾಸಕರು ಯುವ ತಲೆಮಾರು ಸತ್ಪ್ರಜೆಯಾಗಿ ರೂಪುಗೊಳ್ಳಬೇಕೆಂಬ ಸಂಕಲ್ಪದಲ್ಲಿ ದುಡಿಯುತ್ತಿರುವುದು ಸ್ತುತ್ಯರ್ಹ ಕಾರ್ಯ ಎಂದರು.
          ಕಳೆದ ಎಂಟು ವರ್ಷಗಳಿಂದ ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳ ಆಯ್ಕೆ ಮಾಡಲಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗು ಶೈಕ್ಷಣಿಕ ಪರಿಕರಗಳನ್ನು ನೀಡಿದ್ದು, ಈ ವರ್ಷ 49 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ನೀಡಿದೆ. ಒಟ್ಟು 247 ವಿದ್ಯಾರ್ಥಿಗಳಿಗೆ ನೆರವು ನೀಡಿದ್ದು ಸಾಮಾನ್ಯ ಕೆಲಸವಲ್ಲ. ಕಾಸರಗೋಡು ಜಿಲ್ಲೆಯಲ್ಲಿ ಮಾತ್ರವಲ್ಲ ಸುಳ್ಯ, ಮಂಗಳೂರು, ಮೈಸೂರು ಹಾಗು ಬೆಂಗಳೂರಿನ ಗ್ರಾಮೀಣ ಪ್ರದೇಶಗಳನ್ನು ಗುರುತಿಸಿ ಬಹುತೇಕ ವಿದ್ಯಾರ್ಥಿಗಳಿಗೆ ಸ್ಕೂಲ್ ಕಿಟ್ ವಿತರಣೆ, ಉಚಿತ ಕಾರ್ಯಾಗಾರ ಮತ್ತು ಕೌನ್ಸಿಲಿಂಗ್ ಮಾಡಿರುವುದು ಈ ತಂಡದ ಆತ್ಮಾರ್ಥತೆಯನ್ನು ತೋರಿಸುತ್ತದೆ ಎಂದರು.
        ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಶ್ರೀಕಾಂತ್ ಅವರು ಮಾತನಾಡಿ, ಪುನರ್ನವ ಟ್ರಸ್ಟ್ ನೀಡುತ್ತಿರುವ ಶೈಕ್ಷಣಿಕ ಸಹಾಯ ಪಡೆದುಕೊಂಡ ವಿದ್ಯಾರ್ಥಿಗಳು ಕಲಿಕೆಯಲ್ಲಿ ಇನ್ನೂ ಹೆಚ್ಚಿನ ಗಮನ, ಶ್ರದ್ಧೆ ವಹಿಸಬೇಕು. ಈ ವಿದ್ಯಾರ್ಥಿಗಳೂ ಸಮಾಜಕ್ಕೆ ಮಾದರಿಯಾಗಬೇಕು. ಆಗ ಈ ಶೈಕ್ಷಣಿಕ ಸಹಾಯ ಸಾರ್ಥಕವಾಗುತ್ತದೆ. ಕಾಸರಗೋಡಿನಲ್ಲಿ ಕನ್ನಡಿಗರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ರಾಜ್ಯ ಲೋಕಸೇವಾ ಆಯೋಗ(ಪಿಎಸ್‍ಸಿ) ನಡೆಸುತ್ತಿರುವ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗ ಪಡೆಯುವಂತಾಗಬೇಕು. ಸಿವಿಲ್ ಸರ್ವೀಸ್‍ನಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸದಾ ಸಿದ್ಧ ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
      ಕಿಟ್ ದಾರಿ ದೀಪ : ಇಂದಿನ ವಿದ್ಯಾರ್ಥಿಗಳಿಗೆ ಹೆತ್ತವರು ಮಾರ್ಗದರ್ಶಕರಾಗಬೇಕು, ಪಾಠವಾಗಬೇಕು. ಹೆತ್ತವರ ಅನುಭವ, ಜ್ಞಾನವನ್ನು ಪಡೆದುಕೊಂಡು ಅನ್ನದ ಒಂದೊಂದು ಅಗಳುವಿನ ಕಷ್ಟ ಮನವರಿಕೆಯಾಗಬೇಕು. ಆಗ ವಿದ್ಯಾರ್ಥಿಗಳು ಸಂಪೂರ್ಣವಾಗಿ ಶೈಕ್ಷಣಿಕ ಸಹಿತ ಯಾವುದೇ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಸಾಧ್ಯ. ಇಲ್ಲಿ ನೀಡಿರುವ ಈ ಕಿಟ್ ವಿದ್ಯಾರ್ಥಿಗಳಿಗೆ ದಾರಿ ದೀಪ ಎಂದು ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗದ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಹೇಳಿದರು.
       ಮರಿಕಾನ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಿಕೆ ವಾಣಿಶ್ರೀ ಸಿ.ಎಚ್. ಅವರು ಮಾತನಾಡಿ ಹೆಚ್ಚೆಚ್ಚು ಪುಸ್ತಕಗಳನ್ನು ಓದುತ್ತಾ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಜ್ಞಾನ ಸಂಪಾದಿಸಲು ನಿರಂತರ ಪ್ರಯತ್ನ, ಕಠಿಣ ಅಭ್ಯಾಸದಲ್ಲಿ ವಿದ್ಯಾರ್ಥಿಗಳು ನಿರತರಾಗಬೇಕೆಂದರು.
      ಜಿಲ್ಲೆಯ ಕೊರಗ ಸಮುದಾಯದ ಪ್ರಥಮ ಎಂ.ಫಿಲ್. ಪದವಿ ಪಡೆದ ಮೀನಾಕ್ಷಿ ಬೊಡ್ಡೋಡಿ ಅವರು ಈ ಸಂದರ್ಭದಲ್ಲಿ ಮಾತನಾಡಿ ತನ್ನ ಸಾಧನೆಗೆ ನೆರವಾದ ಎಲ್ಲರನ್ನು ಸ್ಮರಿಸಿದರು.
       ಟ್ರಸ್ಟಿಗಳಾದ ಡಾ.ರತ್ನಾಕರ ಮಲ್ಲಮೂಲೆ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ನವೀನ ಎಲ್ಲಂಗಳ ಪ್ರಾಸ್ತಾವಿಕವಾಗಿ ಮಾತನಾಡಿ ಟ್ರಸ್ಟ್ ನಡೆದುಬಂದ ಹಾದಿಯ ಬಗ್ಗೆ ಬೆಳಕು ಚೆಲ್ಲಿದರು.  ಪ್ರವೀಣ್ ಬೈಕುಂಜೆ ವಂದಿಸಿದರು.
         49 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ವಿತರಣೆ : ಪ್ರತೀ ವರ್ಷದಂತೆ ಈ ವರ್ಷವೂ ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಆಯ್ಕೆಯಾದ 46 ವಿದ್ಯಾರ್ಥಿಗಳಿಗೆ ಧನಸಹಾಯ ಹಾಗೂ ಶೈಕ್ಷಣಿಕ ಪರಿಕರಗಳನ್ನು ಪುನರ್ನವ ಟ್ರಸ್ಟ್  ನೀಡಿದೆ. ಮಾತ್ರವಲ್ಲದೆ ವಿಶೇಷ ಪರಿಗಣನೆಯೆಂಬ ನೆಲೆಯಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹಿರಿಯ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅಂಕಿತ ಎಂ., ಫಾತಿಮಾ ಅಸ್ರೀನಾ ಹಾಗೂ ಅಕ್ಷಿತಾ ಕೆ. ಅವರಿಗೂ ಸಹಾಯವನ್ನು ನೀಡಲಾಯಿತು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries