ಮುಂಬೈ: 2019 ರ ಹೊಸ ವರ್ಷವನ್ನು ಬಾಲಿವುಡ್ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ಮೂಲಕ ಬರಮಾಡಿಕೊಂಡಿತ್ತು. ನಿನ್ನೆ ಜು.26 ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಹಿನ್ನೆಲೆಯಲ್ಲಿ ಮರು ಬಿಡುಗಡೆಗೊಳಿಸಲಾಯಿತು.
ಜನವರಿ 11 ರಂದು ಬಿಡುಗಡೆಯಾಗಿದ್ದ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈಗ ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಚಿತ್ರ ಮತ್ತೆ ಬಿಡುಗಡೆಯಾಯಿತು. ಮುಂಬೈ ಮಿರರ್ ವರದಿಯ ಪ್ರಕಾರ ನಿನ್ನೆ 500 ಥಿಯೇಟರ್ ಗಳಲ್ಲಿ ಉರಿ ಚಿತ್ರ ಮರು ಬಿಡುಗಡೆಯಾಯಿತು.





