HEALTH TIPS

ಸಮರಸ ಭಾಷಾಂತರಂಗ ಸೌರಭ-ಸಂಚಿಕೆ-23-ಬರಹ-ಶ್ರೀವತ್ಸ ಜೋಶಿ,ವಾಶಿಂಗ್ಟನ್ ಡಿ.ಸಿ

                     
೧. ‘ದಂಪತಿ’ ಒಂದು ಜೋಡಿಬಹುವಚನ ಬಳಸಬೇಡಿ!

"ಸಚಿವ ಹೆಚ್.ಡಿ ರೇವಣ್ಣ ದಂಪತಿಗಳಿಂದ ಸಕಲೇಶಪುರದಲ್ಲಿ ಹೊಳೆಮಲ್ಲೇಶ್ವರ ಸ್ವಾಮಿಗೆ ಪೂಜೆ", "ಒಬಾಮ ದಂಪತಿಗಳನ್ನು ಅಚ್ಚರಿಗೊಳಿಸಿದ BSF ಯೋಧರ ಬೈಕ್‌ ಸ್ಟಂಟ್‌", "ಬೆಂಗಳೂರು ಮೆಟ್ರೋದಲ್ಲಿ ಸಂಚರಿಸಿದಇನ್ಫೊಸಿಸ್ ಮೂರ್ತಿ ದಂಪತಿಗಳು"... ಇವೆಲ್ಲವೂ ಕನ್ನಡದ ದೊಡ್ಡ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಶೀರ್ಷಿಕೆಗಳುಇವೆಲ್ಲವುಗಳಲ್ಲೂ ‘ದಂಪತಿ’ ಎಂದು ಏಕವಚನ ಬಳಸಬೇಕಿತ್ತುಏಕೆಂದರೆ ಪ್ರತಿಯೊಂದರಲ್ಲೂ ನಿರ್ದಿಷ್ಟ ಒಂದು ಜೋಡಿ (ಇಂಗ್ಲಿಷ್‌ನಲ್ಲಾದರೆ Couple) ಬಗ್ಗೆ ಸುದ್ದಿ ಇರುವುದು. ಆ ದೃಷ್ಟಿಯಿಂದ, "ಎದ್ದೇಳು ಮಂಜುನಾಥ ಏಳು ಬೆಳಗಾಯಿತು..." ಪ್ರಖ್ಯಾತ ಭಕ್ತಿಗೀತೆಯಲ್ಲಿನ "ಹೆಗ್ಗಡೆಯ ದಂಪತಿಗಳು ನಿನ್ನಯ ಸೇವೆಗೆ ಕಾತರಿಸುತಿಹರು" ಸಹ ಸರಿಯಲ್ಲ, "ಹೆಗ್ಗಡೆ ದಂಪತಿ ನಿನ್ನಯ ಸೇವೆಗೆ ಕಾತರಿಸುತಿಹುದುಎಂದಿರಬೇಕಿತ್ತು (ಕವಿಗಳಿಗೆ ವ್ಯಾಕರಣ ನಿರ್ಬಂಧಗಳಿಂದ ಅಲ್ಪಸ್ವಲ್ಪ ವಿನಾಯಿತಿ ಇರುತ್ತದೆ ನಿಜ). ತಾತ್ಪರ್ಯ ಇಷ್ಟೇ: ‘ದಂಪತಿ’ ಅಂದರೆ ವಿವಾಹಸಂಬಂಧದಿಂದ ಬೆಸೆದ ಎರಡು ದೇಹಗಳು (ಗಂಡು ಮತ್ತು ಹೆಣ್ಣು ಎಂದು ಬರೆಯಬಹುದಿತ್ತು. ಈಗ ಭಾರತದಲ್ಲಿ ಐಪಿಸಿ ಸೆಕ್ಷನ್ 377 ಅಮಾನ್ಯವಾದ್ದರಿಂದ ’ಎರಡು ದೇಹಗಳು’ :-) ).  ಅಲ್ಲಿ ಇಬ್ಬರಿದ್ದಾರೆಂದ ಮಾತ್ರಕ್ಕೇ ಬಹುವಚನ ಬೇಕಿಲ್ಲಇಬ್ಬರದು ‘ಒಂದು’ ಜೋಡಿ. ಆದ್ದರಿಂದ ಏಕವಚನ ಸಾಕುಅದೇ ಸರಿ.


ಒಂದಕ್ಕಿಂತ ಹೆಚ್ಚು ಜೋಡಿಗಳ ವಿಚಾರವಾದರೆ ಆಗ ‘ದಂಪತಿಗಳು’ ಎಂದು ಬಹುವಚನ ಬಳಸಬೇಕು. ಉದಾಹರಣೆಗೆ- "100ಕ್ಕೂ ಹೆಚ್ಚು ದಂಪತಿಗಳಿಗೆ ಉಚಿತ ಸಾಮೂಹಿಕ ಷಷ್ಟಿಪೂರ್ತಿ ಸಮಾರಂಭ", "5000 ನವ ದಂಪತಿಗಳಿಂದ 770 ಸ್ವಾಮೀಜಿಗಳ ಪಾದಪೂಜೆ" - ಇಲ್ಲೆಲ್ಲ ದಂಪತಿಗಳು ಎಂದು ಬಹುವಚನ ಬಳಸಿರುವುದು ಸರಿ ಇದೆ.

"ವಾಷಿಂಗ್ಟನ್ ಡಿಸಿಸುತ್ತಮುತ್ತಲಿನ ಕನ್ನಡ ದಂಪತಿಗಳೇಬನ್ನಿ. ಪ್ರಣಯರಾಜ ಶ್ರೀನಾಥ್ ಜೊತೆಯಲ್ಲಿ ಒಂದು ಹಾಸ್ಯಮಯ ಸಂಜೆ ಕಳೆಯೋಣ. ‘ಆದರ್ಶ ದಂಪತಿ’ ಸ್ಪರ್ಧೆಯಲ್ಲಿ ಭಾಗವಹಿಸಿ." ಎಂದು ಈಗ ತಾನೆ ನಮ್ಮ ‘ಕಾವೇರಿ’ ಕನ್ನಡ ಸಂಘದ ಅಧ್ಯಕ್ಷರು ಕಳಿಸಿರುವ ಸಂದೇಶದಲ್ಲಿ "ದಂಪತಿಗಳು" ಮತ್ತು "ದಂಪತಿ" ಕ್ರಮವಾಗಿ ಬಹುವಚನ ಮತ್ತು ಏಕವಚನ ಅತ್ಯಂತ ಕರಾರುವಾಕ್ಕಾಗಿ ಬಳಕೆಯಾಗಿದೆ. [ಈ ಶನಿವಾರಸೆ.22ರಂದು ಇಲ್ಲಿನ ‘ಕಾವೇರಿ’ ಕನ್ನಡ ಸಂಘದ ಗಣೇಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀನಾಥ್ ನಿರ್ವಹಣೆಯಲ್ಲಿ ‘ಆದರ್ಶ ದಂಪತಿ’ ಸ್ಪರ್ಧೆ ಇದೆ. ಪ್ರಥಮ ಬಹುಮಾನ ಗಳಿಸುವ ಒಂದು ದಂಪತಿ ‘ಆದರ್ಶ ದಂಪತಿ’. ಏಕವಚನ ಸರಿ.]

೨. ದೋಷ ರಾಶಿ ನಾಶ ಮಾಡು ಶ್ರೀಶ ಕೇಶವ...

ಇಲ್ಲಿಫೇಸ್‌ಬುಕ್ ಪೋಸ್ಟ್‌ಗಳಿಂದಾಯ್ದ (ಲೇಖನಕೃಷಿಯಲ್ಲಿ ಸಾಕಷ್ಟು ನುರಿತ ಕೃಷಿಕರೇ ಬರೆದ!) ಅಥವಾ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ/ಲೇಖನಗಳಿಂದ ಕೆಲವು ಉದಾಹರಣೆಗಳನ್ನು ನೋಡೋಣ. ಇವುಗಳಲ್ಲಿ ಯಾವ ರೀತಿಯ ದೋಷಗಳಿವೆ ಎಂದು ತಿಳಿದುಕೊಳ್ಳೋಣ.

ಅ) "ಹೀಗೆ ಹೇಳಲಿಕ್ಕೆ ಹಲವಾರು ಕಾರಣವಿದೆ."  - ಇದರಲ್ಲಿ ವಾಕ್ಯರಚನೆ ದೋಷಯುಕ್ತವಾಗಿದೆ. ‘ಹಲವಾರು’ (ಒಂದಕ್ಕಿಂತ ಹೆಚ್ಚು) ಅಂದಮೇಲೆ "ಕಾರಣಗಳಿವೆ" ಅಂತ ಬರೆಯಬೇಕು.

ಆ) "ವಜ್ರಕಾಯಕ್ಕೀಗ ಭೈರಿಗೆಯ ಗುರಿ." - ಇದರಲ್ಲಿ ಪದರೂಪ ಪರಿಚಯವಿಲ್ಲದಿರುವುದರಿಂದ ದೋಷ ಉಂಟಾಗಿದೆ. ‘ಭೈರಿಗೆ’ ಅಲ್ಲ, ‘ಬೈರಿಗೆ’ ಆಗಬೇಕು. ‘ಬೈರಿಗೆ’ಯ ಮೂಲ ತುಳು ಭಾಷೆ ಎನ್ನುತ್ತಾರೆ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ. ತುಳು ಸಹ ಮಹಾಪ್ರಾಣ ಬಳಕೆಯಿಲ್ಲದ ಭಾಷೆ.

ಇ) "ಗೌರಿ ಲಂಕೇಶ್ ಹತ್ಯೆಯ ಆರೋಪಿ ಪರಶುರಾಮ ವಾಘ್ಮೋರೆ..." - ಇದರಲ್ಲಿ ಪದಮೂಲ ಗೊತ್ತಿಲ್ಲದಿರುವುದರಿಂದ ದೋಷ ಉಂಟಾಗಿದೆ. ಕನ್ನಡ ಪತ್ರಿಕೆಗಳೆಲ್ಲವೂ ಆರೋಪಿಯ ಅಡ್ಡಹೆಸರನ್ನು "ವಾಘ್ಮೋರೆ" ಎಂದು ತಪ್ಪಾಗಿ ಬರೆಯುತ್ತಿವೆಕೆಲವೆಡೆ ‘ವಾಗ್ಮೊರೆ’ ಎಂದು ಪ್ರಕಟವಾದದ್ದೂ ಇದೆ. ಸರಿಯಾದ ರೂಪ "ವಾಘ್ಮಾರೆ". ಈ ಅಡ್ಡಹೆಸರಿನವರು ಮಹಾರಾಷ್ಟ್ರದಲ್ಲಿ ಹೆಚ್ಚು ಜನರಿದ್ದಾರೆವಾಘ್ ಅಂದರೆ ಹುಲಿ. ಮಾರ್ ಅಂದರೆ ಹೊಡೆ/ಕೊಲ್ಲು ಎಂದರ್ಥ. ‘ವಾಘ್ಮಾರೆ’ ಅಂದರೆ "ಹುಲಿಯನ್ನು ಕೊಲ್ಲಬಲ್ಲ ಶೂರರು" ಅಂತ ತಲೆಮಾರುಗಳ ಹಿಂದಿನಿಂದ ಬಂದಿರುವ ಉಪಾಧಿ.

ಈ) "ಪ್ಲಾಸ್ಟರ್ ಹಾಕಿರುವ ಎಡಗೈನಿಂದಲೇ ಕಿರಿಯ ವೈದ್ಯರ ಕೈ ನುಳಿಚಿದರು" - ಇದರಲ್ಲಿ ವಿಭಕ್ತಿಪ್ರತ್ಯಯ ಸೇರಿಸುವಾಗ ಯಾವ ವ್ಯಂಜನ ಬಳಸಬೇಕೆಂದು ಗೊತ್ತಿಲ್ಲದೆ ದೋಷವಾಗಿದೆಎಡ+ಕೈ+ಇಂದ = ಎಡಗೈಯಿಂದಎಂದಾಗಬೇಕು (ಕ್ರಮವಾಗಿ ಆದೇಶ ಮತ್ತು ಆಗಮ ಸಂಧಿಗಳು).

ಉ) "ನೂರಾರು ಗಾಯಗೊಂಡ ಸಾರ್ವಜನಿಕರು ಅದೇ ಆಸ್ಪತ್ರೆಗೆ ದೌಡಾಯಿಸಿದರು." - ಇದರಲ್ಲಿ ಪದಪಲ್ಲಟ ದೋಷ ಇದೆ. ಬಹುಶಃ "Hundreds of wounded people ran to same hospital" ಎಂದು ಇಂಗ್ಲಿಷ್‌ನಲ್ಲಿ ಆಲೋಚಿಸಿ ಕನ್ನಡದಲ್ಲಿ ಬರೆದದ್ದಿರಬಹುದು. “ಗಾಯಗೊಂಡ ನೂರಾರು ಸಾರ್ವಜನಿಕರು ಅದೇ ಆಸ್ಪತ್ರೆಗೆ ದೌಡಾಯಿಸಿದರುಎಂದಾಗಬೇಕಿತ್ತು.

====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:

ಅ) ಸಂಭಂದ ತಪ್ಪು. ಸಂಬಂಧ ಸರಿ.
ಆ) ರೋಧನರೋಧನೆ ತಪ್ಪು. ರೋದನ (ಅಳುಅಳುವುದು) ಸರಿ.
ಇ) ಜಂಭ ತಪ್ಪು. ಜಂಬ ಸರಿ. [ಅಚ್ಚಕನ್ನಡದ ಪದ. ಮಹಾಪ್ರಾಣ ಇರಲಿಕ್ಕೆ ಸಾಧ್ಯವಿಲ್ಲ]
ಈ) ಝಾವ ತಪ್ಪು. ಜಾವ ಸರಿ. [‘ಯಾಮ’ ಸಂಸ್ಕೃತ ಪದದ ತದ್ಭವ ‘ಜಾವ’]
ಉ) ಸ್ಪೂರ್ತಿ ತಪ್ಪುಸ್ಫೂರ್ತಿ ಸರಿ. [ಒತ್ತಕ್ಷರ ಮಹಾಪ್ರಾಣ ಫ]

                                              ಬರಹ-ಶ್ರೀವತ್ಸ ಜೋಶಿ,ವಾಶಿಂಗ್ಟನ್ ಡಿ.ಸಿ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries