HEALTH TIPS

ಮೊಗಸಾಲೆಯವರ ಸಾಹಿತ್ಯಕ್ಕೆ ಸಾರ್ವಕಾಲಿಕ ಮೌಲ್ಯ: ಹರಿಕೃಷ್ಣ ಪುನರೂರು


             ಕಾಸರಗೋಡು:  ಗಡಿನಾಡಿನ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದು, ಕರುನಾಡಿನ ಗ್ರಾಮಿಣ ಪ್ರದೇಶದಲ್ಲಿ ನೆಲೆಸಿ, ಕನ್ನಡದ ಸೇವೆಯನ್ನು ತಳ ಮಟ್ಟದಿಂದ ನಡೆಸಿರುವ ಮೊಗಸಾಲೆಯವರ ಸಾಹಿತ್ಯಕ್ಕೆ ಸಾರ್ವಕಾಲಿಕ ಮೌಲ್ಯ ಇದೆ. ಅದು ಜನರ ಜೀವನಾಡಿಯ ಮಿಡಿತವನ್ನು ಸರಿಯಾದ ರೀತಿಯಲ್ಲಿ ಧ್ವನಿಸುತ್ತದೆ. ಈ ನಿಟ್ಟಿನಲ್ಲಿ ಡಾ ನಾ. ಮೊಗಸಾಲೆಯವರ ಸಾಹಿತ್ಯದ ಮೇಲೆ ನಡೆಯುತ್ತಿರುವ ಮೊದಲ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಮಹತ್ವವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರೂ, ಮೊಗಸಾಲೆ 75  ಅಭಿನಂದನ ಸಮಿತಿಯ ಗೌರವಾಧ್ಯಕ್ಷರೂ ಆದ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
       ಸಾಹಿತಿ, ಸಂಘಟಕ ಡಾ. ನಾ. ಮೊಗಸಾಲೆಯವರಿಗೆ 75 ವರ್ಷ ತುಂಬುವ ಹೊತ್ತಿನಲ್ಲಿ ವಿದ್ಯಾನಗರದ ಚಾಲದಲ್ಲಿರುವ ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಕನ್ನಡ ಸಂಘ ಕಾಂತಾವರ ಮತ್ತು ಮೊಗಸಾಲೆ 75 ಅಭಿನಂದನ ಸಮಿತಿ ಜಂಟಿಯಾಗಿ ಇತ್ತೀಚೆಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
      ಮೊಗಸಾಲೆಯವರಿಗೆ ಗಿಡ ಮತ್ತು ಸಿಹಿ ನೀಡುವ ಮೂಲಕ ಕಣ್ಣೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಎಂ. ಸಿ ರಾಜು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕರ್ನಾಟಕದಲ್ಲಿ ಅತೀ ಹೆಚ್ಚು ಜನಮಾನ್ಯರಾದ ಮೊಗಸಾಲೆಯವರು ಕಾಸರಗೋಡಿನವರೆಂಬುದು ನಮಗೆಲ್ಲಾ ಹೆಮ್ಮೆ. ಅವರ ಆಯ್ದ ಕೃತಿಗಳನ್ನು ಕನ್ನಡ ಪದವಿ ಅಥವಾ ಸ್ನಾತಕೋತ್ತರ ಪದವಿಗೆ ಪಠ್ಯವಾಗಿಸಲು ಕನ್ನಡಿಗರು ಪ್ರಯತ್ನಿಸಬೇಕು. ಈ ಮೂಲಕ ಅವರಿಗೆ ಶೈಕ್ಷಣಿಕ ಗೌರವವನ್ನು ನೀಡಿದಂತಾಗುತ್ತದೆ ಎಂದರು.
         ಈ ಸಂದರ್ಭದಲ್ಲಿ ಮಾತನಾಡಿದ ಡಾ. ನಾ ಮೊಗಸಾಲೆಯವರು ತನ್ನ ಸಾಹಿತ್ಯದ ಕುರಿತಾಗಿ ಕಾಸರಗೋಡಿನಲ್ಲಿ ನಡೆಯುತ್ತಿರುವ ಪ್ರಥಮ ಕಾರ್ಯಕ್ರಮವಾಗಿರುವುದರಿಂದ ಜೀವನದ ಮಹತ್ವದ ಘಟ್ಟ ಎಂದು ಹೇಳಿದರು. ಕನ್ನಡ ಸಂಘದ ಕಾರ್ಯದರ್ಶಿ ಸದಾನಂದ ನಾರಾವಿಯವರು ಮೊಗಸಾಲೆಯವರ ಹತ್ತು ಸಾವಿರ ರುಪಾಯ ಬೆಲೆಯ ಪುಸ್ತಕವನ್ನು ಗ್ರಂಥಾಲಯಕ್ಕೆ ನೀಡಿದರು.  ಕನ್ನಡ ವಿಭಾಗ ನಿರ್ದೇಶಕ ಡಾ ರಾಜೇಶ್ ಬೆಜ್ಜಂಗಳ ಸ್ವಾಗತಿಸಿ, ನಿವೃತ್ತ ಶಿಕ್ಷಕ ವಿಠಲ ಬೇಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಮತ್ತು ಸ್ವಾತಿ ಪ್ರಾರ್ಥಿಸಿದರು. ಬಿ ಎಡ್ ವಿದ್ಯಾರ್ಥಿಗಳಾದ ರಾಜರಾಮ ಮತ್ತು ರಾಮಕೃಷ್ಣ ಸಹಕರಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.
         ಬಳಿಕ ನಡೆದ ವಿಚಾರ ಗೋಷ್ಠಿಯಲ್ಲಿ ಮೊಗಸಾಲೆಯವರ ಸಾಹಿತ್ಯ ಮತ್ತು ಸಂದರ್ಭದ ಕುರಿತು ಡಾ ಬಸವರಾಜ ಕಲ್ಗುಡಿ, ಕಾದಂಬರಿಗಳ ಕುರಿತು ಡಾ ಎಂ ಎಸ್ ಆಶಾದೇವಿ ಹಾಗೂ ಕಾವ್ಯದ ಕುರಿತಾಗಿ ಡಾ ಟಿ. ಯಲ್ಲಪ್ಪ ವಿಷಯ ಮಂಡಿಸಿದರು.  ಸಂಶೋಧಕಿ ಮಂಗಳೂರಿನ ಜ್ಯೋತಿ ಪ್ರಿಯಾ, ಮೂಡಬಿದ್ರೆಯ ಮಲ್ಲಿಕಾ, ಉಜಿರೆಯ ಮಧುರ ಲಕ್ಷ್ಮಿ ಭಟ್, ಬೆಂಗಳೂರಿನ ಕರಿಬಸವನ ಗೌಡ ಮತ್ತು ಡಾ, ಸಂಧ್ಯಾ ಕುಮಾರಿ ವಿವಿಧ ವಿಷಯಗಳಲ್ಲಿ ಪ್ರಬಂಧ ಮಂಡಿಸಿದರು. ಎಸ್.ಡಿ.ಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ್ ಹಳೆಮನೆ ಅಧ್ಯಕ್ಷತೆ ವಹಿಸಿದ್ದರು. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಡಾ ನಾ ಮೊಗಸಾಲೆಯವರೊಂದಿಗೆ ಸಂವಾದ ನಡೆಯಿತು. ಡಾ ರಾಜೇಶ್ ಬೆಜ್ಜಂಗಳರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಗಸಾಲೆ ದಂಪತಿಯವರನ್ನು ಕನ್ನಡ ವಿಭಾಗದ ಪರವಾಗಿ ನಿವೃತ್ತ ಪ್ರಾಧ್ಯಾಪಕ ಯು ಮಹೆಶ್ವರಿ ಸನ್ಮಾನಿಸಿದರು. ಸಂಶೋಧನಾ ವಿದ್ಯಾರ್ಥಿ ರವಿಶಂಕರ್ ಬೆಟ್ಟಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries