HEALTH TIPS

ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರ ದುರ್ಮರಣ

     
     ಬದಿಯಡ್ಕ: ಆಳವಾದ ಕೆರೆಗೆ ಈಜಲು ಇಳಿದ ಯುವಕರಿಬ್ಬರು ದುಮ9ರಣಕ್ಕೂಳಗಾದ ಘಟನೆ ನೀಚಾ9ಲು ಸಮೀಪದ ಮಾನ್ಯದಲ್ಲಿ ಬುಧವಾರ ಅಪರಾಹ್ನ ನಡೆದಿದೆ. ಮಾನ್ಯ-ಕೊಲ್ಲಂಗಾನ ಪರಿಸರದ ಅತಿ ಪುರಾತನ ಕೆರೆ ಎನಿಸಿಕೊ0ಡಿರುವ ಆಮುವಿನ ಕೆರೆಯಲ್ಲಿ ಘಟನೆ ನಡೆದಿದೆ. ಆಲಂಪಾಡಿ ಬಾಖವಿ ನಗರದ ಶಾಫಿ ಎಂಬವರ ಪುತ್ರ ಖಾದರ್ (18), ಬೆಳ್ಳೂರಡ್ಕ ಮುಹಮ್ಮದ್ ಎಂಬವರ ಪುತ್ರ ಸಾಲಿ (17) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ಪೊಲೀಸರು ಹಾಗೂ ಊರವರ ಸಹಾಯದೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.
       ರಜಾದಿನದಲ್ಲಿ ಅನೇಕರು ಈ ಕೆರೆಯಲ್ಲಿ ಸ್ನಾನಕ್ಕೆ ಆಗಮಿಸುತ್ತಿದ್ದರು. ಅದೇ ರೀತಿ ಬುಧವಾರ ಮಧ್ಯಾಹ್ನ ವೇಳೆ ಸ್ನಾನಕ್ಕೆಂದು 3 ಮಂದಿ ಸ್ನೇಹಿತರೊಂದಿಗೆ ಮೃತಪಟ್ಟ ಖಾದರ್ ಹಾಗೂ ಸಾಲಿ ಆಗಮಿಸಿದ್ದರು. ಮಧ್ಯಾಹ್ನ ವೇಳೆಯಲ್ಲಿ ಎಲ್ಲರೂ ಜೊತೆಯಲ್ಲಿ ಸ್ನಾನಕ್ಕಿಳಿದಿದ್ದರು. ಇದೇ ವೇಳೆ ಇಬ್ಬರು ಯುವಕರು ಮುಳುಗಿದಾಗ ಜೊತೆಯಲ್ಲಿ ಸ್ನಾನಕ್ಕೆಂದು ಆಗಮಿಸಿದ್ದವರು ಈ ವಿವರವನ್ನು ಇತರರಿಗೆ ತಿಳಿಸಿದ್ದರು. ಕೆರೆಯ ಮೇಲ್ಭಾಗದಲ್ಲಿ ಏನನ್ನೂ ಕಾಣದ ಊರವರು ಘಟನೆಯನ್ನು ಅಗ್ನಿಶಾಮಕ ದಳಕ್ಕೆ ತಿಳಿಸಿದರು. ಅವರು ಸ್ಥಳಕ್ಕೆ ಆಗಮಿಸಿ ನೀರಿನಲ್ಲಿ ಹುಡುಕಾಟ ಆರಂಭಿಸಿದರು. ಸುಮಾರು ಅರ್ಧಗಂಟೆ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. 8 ಮೀಟರುಗಳಷ್ಟು ಆಳವಿರುವ ಕೆರೆಯಲ್ಲಿ ಮೃತದೇಹವು ಹುದುಗಿತ್ತು. ಮುಳುಗುತಜ್ಞರು ಮೃತದೇಹವನ್ನು ಮೇಲಕ್ಕೆತ್ತಿದರು.
      ಆವರಣಗೋಡೆಯಲ್ಲದ ಕೆರೆ :
ಮಾನ್ಯ ಸಮೀಪದ ಈ ಕೆರೆಯು ಕುಡಿಯುವ ನೀರಿನ ಯೋಜನೆಯಲ್ಲಿದೆ. ಇಲ್ಲಿಂದ ಅನೇಕ ಕಡೆಗಳಿಗೆ ಮೋಟಾರು ಮೂಲಕ ಕುಡಿಯುವ ನೀರನ್ನು ವಿತರಿಸಲಾಗುತ್ತಿದೆ. ಸುಮಾರು 8 ಮೀಟರುಗಳಷ್ಟು ಆಳವಿರುವ ಈ ಕೆರೆಗೆ ಕಬ್ಬಿಣದ ಆವರಣ ಬೇಲಿಯಿತ್ತು ಎಂದು ಊರವರು ಹೇಳುತ್ತಾರೆ. ಅದೆಲ್ಲವನ್ನೂ ಕಿತ್ತೆಸೆಯಲಾಗಿದೆ. ಕೆರೆಯ ಸಮೀಪವಿರುವ ಪಂಪ್ ಹೌಸ್‍ನ ಮೇಲೇರಿ ಯುವಕರು ಕೆರೆಗೆ ಹಾರುತ್ತಿದ್ದು ಅಪಾಯಕಾರಿಯಾಗಿದೆ.
 
     ಇದೇ ಮೊದಲಲ್ಲ:
    ಈ ಕೆರೆಯಲ್ಲಿ ಕಳೆದ ವರ್ಷವೂ ಈಜಾಡಲು ಬಂದ ಯುವಕರ ಪೈಕಿ ಓರ್ವ ಮೃತಪಟ್ಟಿದ್ದ. ಅತ್ಯಂತ ಆಳವಿರುವ, ಅಗಲ ಕಿರಿದಾದ ಈ ಕೆರೆಯಲ್ಲಿ ಈಜಾಡಲು ಅನುಮತಿ ಇಲ್ಲದಿದ್ದರೂ, ಸ್ಥಳೀಯರ ಮಾತನ್ನು ದಿಕ್ಕರಿಸಿ ವಿವಿಧೆಡೆಗಳಿಂದ ಯುವಕರ ತಂಡ ಈಜಾಡಲು ದಿನನಿತ್ಯ ಇಲ್ಲಿಗೆ ಆಗಮಿಸುತ್ತಿದೆಯೆಂದು ಊರವರು ತಿಳಿಸಿದ್ದಾರೆ.
     ಬೇಲಿಗಳು ನಾಶ:
   ಈ ಕೆರೆಯ ಅಪಾಯವನ್ನು ಅರಿತು ಗ್ರಾ.ಪಂ. ಹಾಗೂ ಪೋಲೀಸರು ಈ ಹಿಂದೆಯೇ ತಡೆ ಬೇಲಿ ನಿರ್ಮಿಸಿ, ಅಪಾಯದ ಫಲಕ ಹಾಕಿಸಿದ್ದರು. ಆದರೆ ಬೇಲಿಯನ್ನು ಹಾಳುಗೆಡವಿ ಕೆರೆಗಿಳಿದು ಯುವಕರು ಈಜಾಡುತ್ತಿರುವುದು ಸಾಮಾನ್ಯವಾಗಿದೆ. ಜೊತೆಗೆ ಅಪಾಯದ ಸೂಚನಾ ಫಲಕವೂ ಎಸೆದಿರುವ ಸ್ಥಿತಿಯಲ್ಲಿ ಕಂಡುಬಂದಿದೆ.
        ಮಾನ್ಯ ಪರಿಸರದ ಕೆರೆ-ಕ್ವಾರೆಗಳು ಅಪಾಯ ಆಹ್ವಾನಿಸುತ್ತಿದೆ!
    ಮಾನ್ಯ ಪರಿಸರ ಹಿಂದಿನಿಂದಲೂ ಪ್ರಾಚೀನ ಬಾವಿ-ಕೆರೆಗಳಿಗೆ ಹೆಸರುಪಡೆದಿದೆ. ಪಾಂಡವರ ಕೆರೆ, ದೇವರಕೆರೆ ಮೊದಲಾಗಿ ಹತ್ತಕ್ಕಿಂತಲೂ ಹೆಚ್ಚು ಪಾರಂಪರಿಕ ಕೆರೆಗಳು ಈ ಪ್ರದೇಶದಲ್ಲಿದೆ. ಜೊತೆಗೆ 20 ಕ್ಕಿಂತಲೂ ಹೆಚ್ಚು ಕೆಂಗಲ್ಲಿನ ಕ್ವಾರೆಗಳಿದ್ದು, ಇವುಗಳಲ್ಲಿ ಮಳೆಗಾಲದಲ್ಲಿ ನೀರು ಕಟ್ಟಿನಿಲ್ಲುತ್ತದೆ. ಇಲ್ಲಿ ಈಜಾಡಲು ವಿವಿಧ ಪ್ರದೇಶಗಳಿಂದ ಮಕ್ಕಳ-ಯುವಕರ ತಂಡ ಆಗಮಿಸುತ್ತಿದ್ದು, ಸ್ಥಳೀಯರ ಎಚ್ಚರಿಕೆಯನ್ನು ಮೀರಿ ಈಜಾಡಲು ತೊಡಗಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೆ ಸೂಚನೆ ನೀಡಿದವರನ್ನು ಬೆದರಿಸುವುದು, ನಿಂದಿಸುವುದು ನಡೆಯುತ್ತಿದೆ.
    ಬುಧವಾರ ಮಾನ್ಯದಲ್ಲಿ ದುರ್ಘಟನೆ ಉಂಟಾದ ಪ್ರದೇಶಕ್ಕೆ ತಹಶೀಲ್ದಾರ್, ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಶಾಮಪ್ರಸಾದ್ ಮಾನ್ಯ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries