HEALTH TIPS

ಪಿ ಆಂಡ್ಯ್ ಕೆ ರಸಗೊಬ್ಬರಕ್ಕೆ ಸಬ್ಸಿಡಿ: ಸಂಪುಟದ ಒಪ್ಪಿಗೆ

   
     ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರಿಗೆ ಕೆಗೆಟಕುವ ದರದಲ್ಲಿ ರಸಗೊಬ್ಬರ ಒದಗಿಸುವ ಉದ್ದೇಶದಿಂದ ಪೋಸ್ಟಾಟಿಕ್ ಹಾಗೂ ಪೊಟ್ಯಾಸಿಕ್ ರಸಗೊಬ್ಬರಕ್ಕೆ ಸಬ್ಸಿಡಿ ದರವನ್ನು ಘೋಷಿಸಿದೆ.
    ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ 2019-20 ನೇ ಸಾಲಿನಲ್ಲಿ ಪಿ ಆಂಡ್ ಕೆ ರಸಗೊಬ್ಬರಕ್ಕೆ ನ್ಯೂಟ್ರಿಯೆಂಟ್ ಆಧಾರಿತ  ಸಬ್ಸಿಡಿ ದರ ನೀಡಲು ಅನುಮೋದನೆ ನೀಡಿದೆ ಎಂದು ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
    ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಪ್ರತಿ ಕೆಜಿ ಸಾರಜನಕಕ್ಕೆ 18 ರೂಪಾಯಿ 90 ಪೈಸೆ, ರಂಜಕಕ್ಕೆ 15.11 ರೂ, ಪೊಟ್ಯಾಷ್ ಗೆ 11.12 ರೂ, ಸಲ್ಫರ್ ಗೆ 3.56 ರೂ ಸಬ್ಸಿಡಿ ದರ ನಿಗದಿಪಡಿಸಲಾಗಿದೆ. ಈ ಸಬ್ಸಿಡಿ ದರದ ಬಿಡುಗಡೆಯಿಂದ 22 ಕೋಟಿ 875  ಲಕ್ಷ ಅಂದಾಜು ವೆಚ್ಚವಾಗಲಿದೆ ಎಂದರು.
    ಈ ಯೋಜನೆಯಿಂದ ಉತ್ಪಾದಕರು ಹಾಗೂ ಆಮದುದಾರರು ರಸಗೊಬ್ಬರದ ಪೊರೈಕೆ ಗುತ್ತಿಗೆಯನ್ನು ರಚಿಸಲು ಹಾಗೂ ರೈತರಿಗೆ ರಸಗೊಬ್ಬರ ಒದಗಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.
     ಈ ಸಬ್ಸಿಡಿಯನ್ನು 2010 ಏಪ್ರಿಲ್ 1ರ ಬಿಎಸ್ ಯೋಜನೆ ಮೂಲಕ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries