ಉಪ್ಪಳ: ಆರು ದಶಕಗಳಿಂದ ವೈದಿಕ ಪುರೋಹಿತರಾಗಿ ಸೇವೆ ಸಲ್ಲಿಸಿದ ಕನಿಯಾಲ ಸಮೀಪದ ವಾಟೆತ್ತಿಲ ಅಚ್ಯುತ ಭಟ್ ಇವರಿಗೆ ಯುವ ಕರಾಡ ಕನಿಯಾಲ ಸಂಘಟನೆ ವತಿಯಿಂದ ಅವರ ಸ್ವಗೃಹದಲ್ಲಿ ಗುರು ವಂದನೆ ಸಲ್ಲಿಸಲಾಯಿತು. ಸಂಘದ ಗೌರವಾಧ್ಯಕ್ಷ ತಂತ್ರಿ ಸತ್ಯನಾರಾಯಣ ಭಟ್ ಅಚ್ಯುತ ಭಟ್-ಅನ್ನಪೂರ್ಣೇಶ್ವರಿ ದಂಪತಿಗೆ ಶಾಲು ಹೊದಿಸಿ ಫಲಪುಷ್ಪವನ್ನಿತ್ತು ಗೌರವ ಸಲ್ಲಿಸಿದರು. ಸಂಘಟನೆಯ ಮಾಜಿ ಅಧ್ಯಕ್ಷ ಡಾ.ಮನು ಭಟ್ ಕೆದುಕೋಡಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಸತ್ಯನಾರಾಯಣ ಭಟ್ -ಅಚ್ಯುತ ಭಟ್ ವಾಟೆತ್ತಿಲ ಇವರ ಧಾರ್ಮಿಕ ಸೇವೆ ಸ್ಮರಣೀಯವಾದುದು, ಕರಾಡ ಬ್ರಾಹ್ಮಣ ಸಮುದಾಯದ ಮೇರು ಪುರೋಹಿತರಾಗಿ ಹಲವು ದಶಕಗಳಿಂದ ಸೇವೆ ಸಲ್ಲಿಸಿರುವ ಅಚ್ಯುತ ಭಟ್ಟರು ಸಮಾಜ ಮತ್ತು ಸಮುದಾಯದ ಪ್ರಮುಖ ಮಾರ್ಗದರ್ಶಕರಲ್ಲಿ ಓರ್ವರು ಎಂದು ಹೇಳಿದರು. ಹುಟ್ಟಿನಿಂದ ಸಾಯುವ ತನಕದ ಷೋಡಶ ಹಿಂದೂ ಸಂಸ್ಕಾರಗಳ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸುತ್ತಿದ್ದ ಅಚ್ಯುತ ಭಟ್‍ರವರ ಸಾಮಾಜಿಕ, ಧಾರ್ಮಿಕ ಕೊಡುಗೆ ಅನನ್ಯ ಮತ್ತು ಮಾರ್ಗದರ್ಶಿಯಾಗಿದೆ ಎಂದರು.
ಗುರುವಂದನೆ ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಶ್ರೀವತ್ಸ ಸುದೆಂಬಳ, ಅನಂತರಾಜ ವಾಟೆತ್ತಿಲ, ಅರವಿಂದ ಭಟ್ ಸುದೆಂಬಳ, ಸತ್ಯನಾರಾಯಣ ಭಟ್ ವಾಟೆತ್ತಿಲ, ಗಣೇಶ್ ಪ್ರಸಾದ್, ಗಣೇಶ್ ಪ್ರಸಾದ್ ಸಾರಥಿ, ರವಿ ಸುದೆಂಬಳ, ವೆಂಕಟೇಶ್ ಭಟ್, ಹರೀಶ್ ಭಟ್, ಅಚ್ಯುತ ಭಟ್ಟರ ಪುತ್ರ ಮಧುರ ಭಟ್ ಮನೆಮಂದಿ ಉಪಸ್ಥಿತರಿದ್ದರು.


