HEALTH TIPS

ರಂಗಸಿರಿ ದಸರಾ ಯಕ್ಷ ಪಯಣ


     ಬದಿಯಡ್ಕ: ರಂಗಸಿರಿ ಸಾಂಸ್ಕøತಿಕ ವೇದಿಕೆಯು ಈಗಾಗಲೇ ಊರು ಪರವೂರುಗಳಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿ ಮೆಚ್ಚುಗೆಗಳಿಸಿದೆ. ಅಲ್ಲದೆ ಹಲವು ವಿದ್ಯಾರ್ಥಿಗಳು ಮೇಳಗಳ ಹಿರಿಯ ಕಲಾವಿದರ ಜೊತೆಗೂ ಯಕ್ಷಗಾನಗಳಲ್ಲಿ ಭಾಗವಹಿಸಿ ಸೈಯೆನಿಸಿದ್ದಾರೆ. ರಂಗಸಿರಿಯು ಕಳೆದ ಕೆಲವು ವರ್ಷಗಳಿಂದ ಕನ್ನಡಿಗರ ನಾಡಹಬ್ಬ ದಸರಾ ಅಂಗವಾಗಿ `ರಂಗಸಿರಿ ದಸರಾ ಯಕ್ಷ ಪಯಣ'ವನ್ನು ಆಯೋಜಿಸುತ್ತ ಬಂದಿದೆ. ಕನ್ನಡಿಗರ ಹಬ್ಬವನ್ನು ವಿಶೇಷವಾಗಿ ಈ ಯಕ್ಷ ಪಯಣದ ಮೂಲಕ ಆಚರಿಸುವ ಕಾರ್ಯಕ್ರಮಕ್ಕೆ ನಾಡಿನೆಲ್ಲೆಡೆಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಪ್ರಸ್ತುತ ವರ್ಷ ರಂಗಸಿರಿಯು ದಶಮಾನೋತ್ಸವದ ಸಂಭ್ರಮದಲ್ಲಿದ್ದು, ದಸರಾ ಯಕ್ಷ ಪಯಣವನ್ನು ಇನ್ನಷ್ಟು ಅಂದವಾಗಿ, ಸಮರ್ಥವಾಗಿ ನಾಡುನುಡಿ ಸಂರಕ್ಷಣೆಯ ಧ್ಯೇಯಗಳೊಂದಿಗೆ ನಡೆಸಲು ಉದ್ದೇಶಿಸಿದೆ. ಕಾರ್ಯಕ್ರಮವು ಲಭ್ಯ ಸಮಯವನ್ನಾಧರಿಸಿ, ಯಕ್ಷಗಾನ ಪ್ರದರ್ಶನ ಹಾಗೂ ನಾಡು, ನುಡಿ, ಸಂಸ್ಕøತಿ ಸಂರಕ್ಷಣೆಯ ಜಾಗೃತಿ ವಚನಗಳನ್ನೂ ಒಳಗೊಂಡಿರುತ್ತದೆ. ಅವಿಭಜಿತ ದ.ಕ. (ಕಾಸರಗೋಡು, ದ.ಕ., ಉಡುಪಿ) ಹಾಗೂ ಕೊಡಗು ಜಿಲ್ಲೆಯ ಸಂಘಟಕರು ತಮ್ಮಲ್ಲಿ ಪ್ರಸ್ತುತ ಕಾರ್ಯಕ್ರಮವನ್ನು ಆಯೋಜಿಸಲು ಆಸಕ್ತರಿದ್ದರೆ ಸೆ.5ರ ಮೊದಲು ದೂರವಾಣಿ 9633876833ನ್ನು ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries