HEALTH TIPS

ಶಿಕ್ಷಕರು ಆರೋಗ್ಯವಂತರು : ಸಂಶೋಧನಾ ವರದಿ

   
        ಕಾಸರಗೋಡು: ಶಿಕ್ಷಕ ವೃತ್ತಿಯಲ್ಲಿರುವವರಲ್ಲಿ ಜೀವನ ಶೈಲಿಗೆ ಸಂಬಂಧಿಸಿದ ರೋಗಗಳು ಉಳಿದವರಿಗೆ ಹೋಲಿಸಿದರೆ ಬಹಳ ಕಡಿಮೆ. ಮದ್ಯಪಾನ, ಧೂಮಪಾನ ಇತ್ಯಾದಿಗಳಲ್ಲಿ ಈ ವಲಯದಲ್ಲಿ ತೊಡಗಿಕೊಂಡವರು ಬಹಳ ವಿರಳವಾಗಿರುವುದೇ ಇದಕ್ಕೆ ಕಾರಣ ಎಂದು ಸಂಶೋಧನೆಗಳು ಖಚಿತಪಡಿಸಿವೆ.
       ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ನಾಯ್ಮಾರುಮೂಲೆ ತನ್ಬೀಹುಲ್ ಇಸ್ಲಾಂ ಹೈಯರ್  ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರಿಗೆ ಮತ್ತು ಇತರ ಸಿಬ್ಬಂದಿಗಾಗಿ ನಡೆಸಿದ ಜೀವನ ಶೈಲಿ ರೋಗ ಪತ್ತೆ ಶಿಬಿರ ಈ ಮಾತಿಗೆ ಸಾಕ್ಷಿಯಾಗಿದೆ. ಈ ಶಿಬಿರ ಪೂರ್ಣಗೊಂಡ ವೇಳೆ ಲಭಿಸಿದ ವರದಿ ಈ ವಿಚಾರಕ್ಕೆ ಬೆಳಕು ಚೆಲ್ಲಿದೆ. ಶಿಬಿರದಲ್ಲಿ ಭಾಗವಹಿಸಿದ 142 ಶಿಕ್ಷಕರಲ್ಲಿ 7 ಮಂದಿಗೆ ಮಾತ್ರ ರಕ್ತದೊತ್ತಡ, ಸಿಹಿಮೂತ್ರರೋಗ ಕಂಡುಬಂದಿದೆ. ಅಂದರೆ ಶೇ.4 ಮಂದಿ ಮಾತ್ರ ಈ ರೋಗ ಹೊಂದಿದ್ದಾರೆ. ಇವರಲ್ಲಿ 5 ಮಂದಿಯಲ್ಲಿ ರಕ್ತದೊತ್ತಡ ಪತ್ತೆಯಾದರೆ, ಇಬ್ಬರಲ್ಲಿ ಸಿಹಿಮೂತ್ರ ರೋಗ ಕಂಡುಬಂದಿದೆ.
     ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಜೀವನ ಶೈಲಿ ರೋಗ ಪತ್ತೆ ವೈದ್ಯಕೀಯ ಶಿಬಿರದಲ್ಲಿ ಶೇ.32 ಮಂದಿ ಸಿಬ್ಬಂದಿಗೆ ಈ ಸಾಲಿನ ರೋಗಗಳು ಪತ್ತೆಯಾಗಿದ್ದುವು. ಶಿಕ್ಷಕರು ಒಂದೇ ರೀತಿಯ ಶೈಲಿಯಲ್ಲಿ ಬದುಕನ್ನು ನಡೆಸುತ್ತಿರುವುದು ಈ ಸಕಾರಾತ್ಮಕ ಫಲಿತಾಂಶಕ್ಕೆ ಕಾರಣ ಎಂದು ಶಿಬಿರದಲ್ಲಿ ನೇತೃತ್ವದಲ್ಲಿ ವಹಿಸಿದ್ದ ಕೌನ್ಸಿಲಿಂಗ್ ನಡೆಸುವ ಆರೋಗ್ಯ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. ಸೂಕ್ತ ವ್ಯಾಯಾಮ, ನಿಯಮಿತ ಆಹಾರ ಸೇವನೆ ಇತ್ಯಾದಿಗಳು ಇವರ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಿವೆ ಎಂದು ಅವರು ಹೇಳಿದರು. ಶಾಲೆಯ 200 ಸಿಬ್ಬಂದಿಗಾಗಿ ಈ ಶಿಬಿರ ನಡೆಸಲಾಗಿತ್ತು.
     ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ನೌಕರಿ ನಡೆಸುವ ಕೇಂದ್ರಗಳಲ್ಲಿ ಆರೋಗ್ಯ ಸೌಹಾರ್ದ ವಾತಾವರಣವಿದ್ದರೆ, ಮಾನಸಿಕ ಒತ್ತಡ ಕಡಿಮೆಯಾಗಿ, ಕಾಯಕದಲ್ಲಿ ಪರಿಣಾಮಕಾರಿ ಫಲಿತಾಂಶ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
     ನೆರೆ ಹಾವಳಿಯಿಂದ ನಾಶನಷ್ಟ ಅನುಭವಿಸಿದವರಿಗೆ ತಮ್ಮ ಹಿತ್ತಿಲಿನಿಂದ 10 ಸೆಂಟ್ಸ್ ಜಾಗವನ್ನು ಉದಾರವಾಗಿ ದಾನನೀಡಿದ ಪಾಲಿಯೇಟಿವ್ ದಾದಿ ಪ್ರಿಯಾ ಕುಮಾರಿ ಅವರಿಗೆ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ಮರಣಿಕೆ ಹಸ್ತಾಂತರಿಸಿದರು
    ಶಾಲೆಯ ಪ್ರಬಂಧಕ ಎಂ.ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕಾರಿ ಷಮೀಮಾ ತನ್ವೀರ್ ತರಗತಿ ನಡೆಸಿದರು. ಆರೋಗ್ಯ ಇನ್ಸ್ ಪೆಕ್ಟರ್ ಬಿ.ಅಶ್ರಫ್, ಪ್ರಾಂಶುಪಾಲ ಮಹಮ್ಮದಾಲಿ, ಮುಖ್ಯ ಶಿಕ್ಷಕ ಕುಸುಮಾ ಜೋನ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸಿ.ಹಸೈನಾರ್, ನೌಕರ ಸಂಘದ ಕಾರ್ಯದರ್ಶಿ ಅಶೋಕನ್ ಮೊದಲಾದವರು ಉಪಸ್ಥಿತರಿದ್ದರು. ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರರಾದ ಆಫೀಝ್ ಷಾಫಿ, ಕೆ.ಎಸ್.ರಾಜೇಶ್, ಜೆ.ಪಿ.ಎಚ್.ದಾದಿಯರಾದ ಜಲಜಾ, ಕೊಚ್ಚುರಾಣಿ, ಮಂಜೂಷಾ, ಸಬೀನಾ, ಆಶಾಮೋಳ್, ಆಶಾ ಕಾರ್ಯಕರ್ತೆಯರಾದ ಶಶಿಕಲಾ, ಭವಾನಿ, ನೂರ್ಜಹಾನ್, ಷರ್ಮಿಳಾ, ಅಂಬಿಕಾ ಮೊದಲಾದವರು ನೇತೃತ್ವ  ವಹಿಸಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries