HEALTH TIPS

ಬಿಜೆಪಿ ಜಿಲ್ಲಾ ಸಮಿತಿ ನೂತನ ಕಚೇರಿ 'ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಮಂದಿರ' ಪ್ರವೇಶೋತ್ಸವ

 

     ಕಾಸರಗೋಡು:  ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೂತನ ಕಾರ್ಯಾಲಯ ತಾಳಿಪಡ್ಪು ಸನಿಹ ನಿರ್ಮಾಣಗೊಳ್ಳುತ್ತಿದ್ದು, ಗುರುವಾರ ಪ್ರವೇಶೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
       ನೂತನ ಕಾರ್ಯಾಲಯದಲ್ಲಿ ಹಾಲು ಕಾಯಿಸುವ ಮೂಲಕ ಸಾಂಪ್ರದಾಯಿಕ ಶೈಲಿಯಲ್ಲಿ ಸಂಪನ್ನಗೊಂಡಿತು. ಜನಸಂಘದ ಕಾಲಘಟ್ಟದಿಂದಲೇ ಸಂಘ ಪರಿವಾರದ ಶಕ್ತಿ ಕೇಂದ್ರವಾದ ಕಾಸರಗೋಡಿನಲ್ಲಿ ಬಿಜೆಪಿಗೆ ಸುಸಜ್ಜಿತ ಮತ್ತು ಬೃಹತ್ ಕೇಂದ್ರದ ಕನಸು ಈ ಮೂಲಕ ನನಸಾಗಿದೆ.
      ಕಾರ್ಯಕ್ರಮದಲ್ಲಿ ಆರ್‍ಎಸ್‍ಎಸ್ ಮಂಗಳೂರು ವಿಭಾಗ ತಾಲೂಕು ಸಂಘ ಚಾಲಕ್ ಗೋಪಾಲ ಚೆಟ್ಟಿಯಾರ್, ನಗರ ಸಂಘ ಚಾಲಕ್ ಕೆ.ಟಿ.ಕಾಮತ್, ಬಿಜೆಪಿ ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ.ಸಂಜೀವ ಶೆಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಗಣೇಶ್, ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಸಹಕಾರ ಭಾರತಿ ಅಖಿಲ ಭಾರತ ಕಾರ್ಯದರ್ಶಿ ನ್ಯಾಯವಾದಿ ಕೆ.ಕರುಣಾಕರನ್, ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯರಾದ ಎಸ್.ಕುಮಾರ್, ಶಿವಕೃಷ್ಣ ಭಟ್. ಕೊವ್ವಲ್ ದಾಮೋದರನ್, ಸಮಿತಿ ಸದಸ್ಯರಾದ ಪಿ.ಸುರೇಶ್ ಕುಮಾರ್ ಶೆಟ್ಟಿ, ರವೀಶ ತಂತ್ರಿ ಕುಂಟಾರು, ನ್ಯಾಯವಾದಿ ಬಿ.ರವೀಂದ್ರನ್, ಜಿಲ್ಲಾ ಉಪಾಧ್ಯಕ್ಷರಾದ ಸವಿತಾ ಟೀಚರ್, ನ್ಯಾಯವಾದಿ ಸದಾನಂದ ರೈ, ನಂಜಿಲ್ ಕುಂಞÂರಾಮನ್, ರಾಮಪ್ಪ ಮಂಜೇಶ್ವರ, ಕಾರ್ಯದರ್ಶಿಗಳಾದ ಎಂ.ವೇಲಾಯುಧನ್, ಪಿ.ರಮೇಶ್, ಮಂಡಲ ಅಧ್ಯಕ್ಷರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಸುಧಾಮ ಗೋಸಾಡ, ಕೆ.ಟಿ.ಪುರುಷೋತ್ತಮನ್, ಎನ್.ಮಧು, ಎಂ.ಭಾಸ್ಕರನ್, ಸೇವಾ ಭಾರತಿ ಸದಸ್ಯರಾದ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು. ಸೆ.11 ರಂದು ವಾಸ್ತು ಪೂಜಾದಿ ವಿಧಿವಿಧಾನಗಳು ನಡೆದಿತ್ತು.
     ಏನಿದೆ:
  ಸುಮಾರು ಹತ್ತು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಭವ್ಯ ಕಟ್ಟಡ ತಲೆಯೆತ್ತಿದ್ದು, ಗ್ರಂಥಾಲಯ, ಇ-ಲೈಬ್ರರಿ ವ್ಯವಸ್ಥೆ ಒಳಗೊಂಡಿದೆ. ಕಚೇರಿ ಕಾರ್ಯದರ್ಶಿ, ಅಧ್ಯಕ್ಷ ಸಹಿತ ಇತರ ಪದಾಧಿಕಾರಿಗಳಿಗೆ ವಿವಿಧ ಮೋರ್ಚಾ ಪದಾಧಿಕಾರಿಗಳಿಗೆ ಕಚೇರಿಯಲ್ಲಿ ಕಾರ್ಯಾಚರಿಸಲು ಪ್ರತ್ಯೇಕ ಸೌಕರ್ಯ ಕಲ್ಪಿಸಲಾಗಿದೆ.
   ಕಾರ್ಯಾಲಯವು ವಿಶಾಲ ಸಭಾಂಗಣ ಹೊಂದಿದ್ದು, ಪಕ್ಷದ ಮುಖಂಡರಿಗೆ ವಾಸ್ತವ್ಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಎರಡು ಕೊಠಡಿ ನಿರ್ಮಿಸಲಾಗಿದೆ. ಅಡುಗೆ ಕೊಠಡಿಯೊಂದಿಗೆ ಭೋಜನ ಸಭಾಂಗಣವೂ ಒಳಗೊಂಡಿದೆ. ಗ್ರಂಥಾಲಯದಲ್ಲಿ ಕನ್ನಡ, ಮಲಯಾಳ, ಇಂಗ್ಲಿಷ್ ಪುಸ್ತಕಗಳು ಲಭ್ಯವಿದೆ. ದೀರ್ಘ ಕಾಲದಿಂದ ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಸನಿಹದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ, ಪಕ್ಷದ ಜಿಲ್ಲಾ ಕಚೇರಿ ಕೆಲದ ಕೆಲವು ವರ್ಷದಿಂದ ಶ್ರೀ ವೆಂಕಟ್ರಮಣ ದೇವಸ್ಥಾನ ವಠಾರದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ನೂತನ ಕಟ್ಟಡದ ಔಪಚಾರಿಕ ಉದ್ಘಾಟನೆ ಶೀಘ್ರ ನಡೆಯಲಿರುವುದಾಗಿ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ, ವಕೀಲ ಕೆ.ಶ್ರೀಕಾಂತ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries