ಉಪ್ಪಳ: ಕೋಟ್ಟಯಂನಲ್ಲಿ ಇತ್ತೀಚೆಗೆ ನಡೆದ ಭಾರತೀಯ ವಿದ್ಯಾನಿಕೇತನದ ರಾಜ್ಯಮಟ್ಟದ ವಿಜ್ಞಾನಮೇಳದಲ್ಲಿ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿ ಲೊಹಿತ್.ಟಿ.ಎ ತ್ರಿಕೋನ ಮಿತಿ ಆಧರಿಸಿದ ಗಣಿತ ಮಾದರಿಯ ನಿರ್ಮಾಣದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಈತನು ಅಮ್ಮೆನಡ್ಕ ತುಳಸೀದಾಸ್ ಮತ್ತು ವಾಣಿ ದಂಪತಿಯ ಪುತ್ರ.