HEALTH TIPS

ರಂಗಸಿರಿ ಸಾಂಸ್ಕøತಿಕ ವೇದಿಕೆಯಿಂದ ಸಾರ್ವಜನಿಕ ಬಲೀಂದ್ರ ಪರ್ಬ

       ಬದಿಯಡ್ಕ: ನಮ್ಮ ತುಳುನಾಡಿನ ಪಾಡ್ದನಗಳಲ್ಲಿ ಕೂಡ ವರ್ಣಿಸಲ್ಪಟ್ಟ ದೊರೆ ಬಲೀಂದ್ರ ನಿಜವಾಗಿ ಈ ಮಣ್ಣಿಗೆ ಆಗಮಿಸುವುದು ದೀಪಾವಳಿ ಪರ್ಬದಂದು. ಆದರೆ ಮಲಯಾಳಿ ಏಕ ಸಂಸ್ಕøತಿ ಹೇರಿಕೆಗೆ ಮರುಳಾಗುತ್ತಿರುವ ನಾವು ವಾಮನ ಜಯಂತಿಯಂದು(ಓಣಂ) ಬಲಿಯೇಂದ್ರ ಬರುವುದೆಂಬ ತಪ್ಪುಕಲ್ಪನೆ ಮೂಡಿಸಿಕೊಂಡಿರುವುದು ದುರದೃಷ್ಟಕರ ಎಂದು ಕಾರ್ತಿಕ್ ಪಡ್ರೆ ಹೇಳಿದರು.
     ಅವರು ಬದಿಯಡ್ಕ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂಭಾಗದಲ್ಲಿ ಭಾನುವಾರ ಸಂಜೆ ಏರ್ಪಡಿಸಲಾಗಿದ್ದ ಸಾರ್ವಜನಿಕ ಬಲಿಯೇಂದ್ರ ಪರ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತಾಡಿದರು.
     ಓಣಂ ಸಂದರ್ಭದಲ್ಲಿ ಬಲಿಚಕ್ರವರ್ತಿಯನ್ನು ಡೊಳ್ಳುಹೊಟ್ಟೆಯ ಠೊಣಪ ವ್ಯಕ್ತಿಯಂತೆ ಹಾಸ್ಯಪಾತ್ರವಾಗಿ ಚಿತ್ರಿಸಿರುವುದು ಖಂಡನೀಯ. ಆತ ನಮ್ಮ ತುಳುನಾಡಿನ ಕೃಷಿಸ್ನೇಹೀ, ಜನಾನುರಾಗಿ ದೊರೆಯಾಗಿದ್ದ. ಪರ್ಬ ಆಚರಣೆಯು ಕನ್ನಡ, ತುಳುವ ಸಂಸ್ಕøತಿಯ ಅಸ್ತಿತ್ವದ ಪ್ರಶ್ನೆ ಎಂದು ಅವರು ಹೇಳಿದರು.
      ಗ್ರಾಮ  ಪಂಚಾಯತಿ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತಾಡಿದರು. ಪ್ರಭಾವತಿ ಕೆದಿಲಾಯ ಪುಂಡೂರು ಹಣತೆ ಬೆಳಗಿಸಿ ಶುಭನುಡಿದರು. ಗೋಪಾಲಕೃಷ್ಣ ವಾಂತಿಚ್ಚಾಲು ಪರಂಪರೆಯಂತೆ ಬಲೀಂದ್ರ ಲೆಪ್ಪುನಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಭಿಜ್ಞಾ ಬೊಳುಂಬು ಪ್ರಾರ್ಥಿಸಿದರು. ಶ್ರೀಶಕುಮಾರ ಪಂಜಿತ್ತಡ್ಕ ಸ್ವಾಗತಿಸಿ, ನಿರೂಪಿಸಿದರು. ರಾಜೇಶ್ ಉಬ್ರಂಗಳ ವಂದಿಸಿದರು.
     ಮನವಿ ಸಲ್ಲಿಕೆ: ರಂಗಸಿರಿಯ ವಿದ್ಯಾರ್ಥಿಗಳು ಬದಿಯಡ್ಕ ಪಂಚಾಯತಿನ ನಾಡೋಜ ಕಯ್ಯಾರ ಕಿಞÂ್ಞಣ್ಣ ರೈ ಸ್ಮಾರಕ ಗ್ರಂಥಾಲಯವನ್ನು ಸುಸಜ್ಜಿತಗೊಳಿಸಿ ಮತ್ತೆ ಓದುಗರಿಗೆ ತೆರೆದುಕೊಡಬೇಕೆಂಬ ಮನವಿಯನ್ನು ಪಂಚಾಯತಿ ಅಧ್ಯಕ್ಷರಿಗೆ ಸಲ್ಲಿಸಿದರು. ಕೂಡಲೇ ಸ್ಪಂದಿಸಿದ ಅಧ್ಯಕ್ಷರು, ಈಗಾಗಲೇ ಪ್ರತ್ಯೇಕ ಹಣವನ್ನು ಮೀಸಲಾಗಿರಿಸಿದ್ದು ಆದಷ್ಟು ಬೇಗನೆ ಕ್ರಮಕೈಗೊಳ್ಳುವುದಾಗಿ ನುಡಿದರು.
         ಸಹಾಯ ವಿತರಣೆ: ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಕಳೆದ ವರ್ಷ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಕೃಷ್ಣ ಕುಮಾರ್‍ಗೆ ತನ್ನ ಮನೆಯಲ್ಲಿ ದೀಪಾವಳಿ ಪರ್ಬ ಆಚರಣೆ ನಡೆಸುವುದಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು. ಹೆಸರು ಹೇಳಲಿಚ್ಛಿಸದ ಉದಾರಿಗಳೊಬ್ಬರು ತಾವಾಗಿಯೇ ಮುಂದೆ ಬಂದು ನೀಡಿದ ಈ ಧನಸಹಾಯವು ಹಬ್ಬವನ್ನು ಆಚರಿಸುವವರಿಗೊಂದು ಮಾದರಿಯಾಗಿ ಗಮನ ಸೆಳೆಯಿತು.
     ಸಂಗೀತ ಕುರ್ಚಿ ಸ್ಪರ್ಧೆಯು ಪ್ರಾಥಮಿಕ, ಪ್ರೌಢ ಹಾಗೂ ಹಿರಿಯ ಎಂಬ ಮೂರು ವಿಭಾಗಗಳಲ್ಲಿ ನಡೆಯಿತು. ಪ್ರಾಥಮಿಕ ವಿಭಾಗದಲ್ಲಿ ಚಿನ್ಮಯಕೃಷ್ಣ ಪ್ರಥಮ, ಶ್ರೀಪೂಜಾ ಉದನೇಶ್ ದ್ವಿತೀಯ; ಪ್ರೌಢವಿಭಾಗದಲ್ಲಿ ಮನೀಶ್ ವಳಮಲೆ ಪ್ರಥಮ, ನಂದಕಿಶೋರ್ ಮವ್ವಾರು ದ್ವಿತೀಯ; ಹಿರಿಯರ ವಿಭಾಗದಲ್ಲಿ ಗಾನಲತಾ ಬೊಳುಂಬು ಪ್ರಥಮ, ಗೀತಾ ವಳಮಲೆ ದ್ವಿತೀಯ; ಹೂಕಟ್ಟುವ ಸ್ಪರ್ಧೆಯಲ್ಲಿ ಶ್ಯಾಮಲಾ ಮವ್ವಾರು ಪ್ರಥಮ, ಭವ್ಯ ವಳಮಲೆ ದ್ವಿತೀಯ; ರಸಪ್ರಶ್ನೆಯಲ್ಲಿ ಅಭಿಜ್ಞಾ ಭಟ್ ಪ್ರಥಮ, ಗಾನಲತಾ ಬೊಳುಂಬು ದ್ವಿತೀಯ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಹೂಕಟ್ಟುವ ಸ್ಪರ್ಧೆಗೆ ವಿದುಷಿ ಗೀತಾ ಸಾರಡ್ಕ, ಡಾ.ಸ್ನೇಹಾಪ್ರಕಾಶ್ ಮತ್ತು ಗಾನಲತಾ ನಿರ್ಣಾಯಕರಾಗಿ ಸಹಕರಿಸಿದರು. ರಸೆಪ್ರಶ್ನೆ ಕಾರ್ಯಕ್ರಮವನ್ನು ದಿವ್ಯಗಂಗಾ ಪಿ ನಡೆಸಿಕೊಟ್ಟರು.
ಪರಿಸರವನ್ನು ಹಣತೆಯ ಬೆಳಕುಗಳಿಂದ ಅಲಂಕರಿಸಲಾಯಿತು. ಹಣತೆಯ ಹಿತವಾದ ಮಂದಪ್ರಕಾಶವು ಮನವರಳಿಸುವಂತೆ ಕಂಗೊಳಿಸಿತು. ಕಾರ್ಯಕ್ರದ ಕೊನೆಯಲ್ಲಿ ಸಿಹಿ ಅವಲಕ್ಕಿ, ಪಾನಕ ವಿತರಣೆ ನಡೆಯಿತು. ಬಳಿಕ ಹಾನಿಯಿಲ್ಲದ ಸುಡುಮದ್ದಗಳನ್ನು ಸಾಮೂಹಿಕವಾಗಿ ಉರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries