HEALTH TIPS

'ಹತ್ಯೆ' ವಿದೇಶಿ ಪರಿಕಲ್ಪನೆಯಾಗಿದ್ದು ಭಾರತವನ್ನು ಕೆಣಕುವ ಪಿತೂರಿಯಾಗಿದೆ: ಮೋಹನ್ ಭಾಗವತ್


       ನಾಗ್ಪುರ: ಇಡೀ ಭಾರತ ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದು, ಭಾರೀ ಬಹುಮತದೊಂದಿದೆ ಮರುಆಯ್ಕೆಯಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರಕ್ಕೆ ದೇಶದ ಜನರ ಆಶೋತ್ತರಗಳನ್ನು ಈಡೇರಿಸುವ ಧೈರ್ಯವಿದೆ ಎಂಬುದನ್ನು ಸಾಬೀತು ಪಡಿಸಿದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಂಗಳವಾರ ಹೇಳಿದರು. 
     ಆರ್ ಎಸ್ ಎಸ್ ಮುಖ್ಯ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜನೆಗೊಂಡಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ಆಯುಧ ಪೂಜೆ ನೆರವೇರಿಸಿ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ವಿಧಿ ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಇದರಂತೆ ಜನರನ್ನು ನಿರೀಕ್ಷೆಯನ್ನು ಈಡೇರಿಸಿದೆ. ಈ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸುವ ಧೈರ್ಯವಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
    ಹತ್ಯೆ ಎಂಬ ಪದ ಭಾರತೀಯ ನೀತಿಗಳಲ್ಲೇ ಇಲ್ಲ. ಈ ಪದದ ಮೂಲ ಪ್ರತ್ಯೇಕ ಧಾರ್ಮಿಕ ಪಠ್ಯದಲ್ಲಿನ ಕಥೆಯಿಂದ ಬಂದಿರುವುದಾಗಿದೆ. ಭಾರತೀಯರು ಸೋದರತ್ವವವನ್ನು ನಂಬಿರುವವರಾಗಿದ್ದೇವೆ. ಭಾರತೀಯರು ಹಾಗೂ ಹಿಂದೂಗಳ ಮೇಲೆ ಇಂತಹ ಪದಗಳನ್ನು ಹೇರಿಕೆ ಮಾಡಬೇಡಿ.  ಸಂವಿಧಾನ ವಿರೋಧ ಚಟುವಟಿಕೆಗಳ ವಿರುದ್ಧ ಜನರನ್ನು ಸಂಘ ಪರಿವಾರ ಎಂದಿಗೂ ಬೆಂಬಲಿಸಿಲ್ಲ. ಯಾವುದೇ ಹಲ್ಲೆ ಪ್ರಕರಣಗಳ ವಿರುದ್ಧ ಸಂಘ ಪರಿವಾರ ನಿಂತಿತೆ. ಈ ನಿಟ್ಟಿನಲ್ಲಿ ಸಂಘ ಪರವಾರ ಕೆಲಸ ಮಾಡುತ್ತಿದೆ. ಭಾರತ ಎಲ್ಲಾ ಭಾರತೀಯರಿಗೆ, ಎಲ್ಲಾ ಧರ್ಮದವರಿಗೆ ಸೀಮಿತವಾಗಿದೆ. ಧರ್ಮ, ಜಾತಿ ಮೇಲೆ ಯಾರೊಬ್ಬರೂ ತಾರತಮ್ಯ ಮಾಡದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ಸ್ವಯಂಸೇವಕ ಸಂಘ ಅಧಿಕಾರದಲ್ಲಿದ್ದರೆ, ಈ ಪಾಠವನ್ನು ಜಾರಿಗೆ ತರುತ್ತಿದ್ದೆವು. ದೇಶದೊಳಗಿರುವ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಿದರೆ, ಭಯೋತ್ಪಾದನೆ ನಿಯಂತ್ರಣಕ್ಕೆ ಬರುತ್ತದೆ. ಗಡಿಯಲ್ಲಿ ಹಾಗೂ ಸಮುದ್ರ ಭಾಗಗಳಲ್ಲಿನ ಗಡಿಯಲ್ಲಿ ಭದ್ರತೆ ಉತ್ತಮ ರೀತಿಯಲ್ಲಿದ್ದು, ಗಡಿಯಲ್ಲಿ ಸಾಕಷ್ಟು ಯೋಧರು ದೇಶ ಕಾಯುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಾಗುತ್ತಿರುವ ಬದಲಾವಣೆಗಳನ್ನು ಪ್ರತೀಯೊಬ್ಬರು ನಂಬಬೇಕೆಂದೇನಿಲ್ಲ. ಆದರೆ, ಸ್ವ ಆಸಕ್ತಿಗಷ್ಟೇ ಆಧಾರವಾಗಿರಬಾರದು. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಯಾವುದೇ ರೀತಿಯ ಸಂಧಾನ ಮಾಡಿಕೊಳ್ಳಬಾರದು. 2014ರಿಂದ 2019 ಲೋಕಸಭಾ ಚುನಾವಣೆ ಬಳಿಕ ದೇಶದಲ್ಲಾದ ಬದಲಾವಣೆಯನ್ನು ಇಡೀ ವಿಶ್ವವೇ ನೋಡುತ್ತಿದೆ. ವೈವಿಧ್ಯತೆ ನಮ್ಮ ದೇಶದ ಆಂತರಿಕ ಶಕ್ತಿ. ಆದರೆ, ಜಾತಿ, ಮತ, ಭಾಷೆ ಮತ್ತು ಪ್ರದೇಶದ ವೈವಿಧ್ಯತೆಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬೇರ್ಪಡಿಸಲು, ಭಿನ್ನಾಭಿಪ್ರಾಯ ಮೂಡಿಸಲು ಯತ್ನಿಸುತ್ತಿವೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳು ಭಾರತ ಬಲಶಾಲಿಯಾಗಲು ಬಯಸುವುದಿಲ್ಲ. ಅಭಿವೃದ್ಧಿ ಹೊಂದುತ್ತಿರುವ ಭಾರತ ಅಂತಹ ಪಟ್ಟಭದ್ರ ಹಿತಾಸಕ್ತಿಗಳ ಮನಸ್ಸಿನಲ್ಲಿಂದು ಭಯವನ್ನು ಹುಟ್ಟುಹಾಕುತ್ತಿದೆ. ಭಾರತವು ಪಾಶ್ಚಿಮಾತ್ಯ ಪ್ರಪಂಚದಿಂದ ಪ್ರಭಾವಿತನಾಗಿಲ್ಲ ಎಂಬುದನ್ನು ಎರಡು ಚುನಾವಣೆಗಳ ಗೆಲುವೇ ತೋರಿಸುತ್ತಿದೆ ಎಂದು ತಿಳಿಸಿದ್ದಾರೆ.
      ವ್ಯಾಪಾರ ಮತ್ತು ಇತರ ಸಂಬಂಧಿತ ವಿಚಾರಗಳ ಕುರಿತು ವ್ಯಾಪಾರ ಒಪ್ಪಂದಗಳನ್ನು ನಮ್ಮದೇ ಆದ ನಿಯಮಗಳಿಗೆ ಅನುಗುಣವಾಗಿ ರೂಪಿಸಬೇಕು. ನಾವು ಸ್ವದೇಶಿಯನ್ನು ನಂಬುತ್ತೇವೆ. ಆದರೆ, ಅಂತರ್ ರಾಷ್ಟ್ರೀಯ ಸಂಬಂಧಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಭಾರತಕ್ಕೆ ಹೊಸ ಆರ್ಥಿಕತೆಯ ಮಾದರಿಯ ಅವಶ್ಯಕವಿದ್ದು, ಇದರಿಂದ ಕಡಿಮೆ ಶಕ್ತಿಯಿಂದ ಉತ್ತಮ ಕಾರ್ಯಗಳು ಹೊರಬೇಕಿದೆ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries