HEALTH TIPS

ದೇವರಗುಡ್ಡೆ : ಅತಿರುದ್ರ ಮಹಾಯಾಗಕ್ಕೆ ಭರದ ಸಿದ್ದತೆ

 
   ಕಾಸರಗೋಡು: ಮಧೂರು ರಸ್ತೆಯಲ್ಲಿ ರಾಮದಾಸ ನಗರದಿಂದ 1 ಕಿಲೋ ಮೀಟರ್ ಪಶ್ಚಿಮದಲ್ಲಿ ಪ್ರಕೃತಿ ರಮಣೀಯವಾದ ಗಂಗೆ ದೇವರಗುಡ್ಡೆ ಶ್ರೀ ಶೈಲ ಮಹಾದೇವ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ, ಸಕಲ ಜೀವರಾಶಿಗಳ ಒಳಿತು ಹಾಗು ಶ್ರೇಯಸ್ಸಿಗಾಗಿ ನಡೆಸುವ ಅತಿ ಮಹತ್ತರ ಯಾಗವಾದ ಅತಿರುದ್ರ ಮಹಾಯಾಗ 2020 ಫೆಬ್ರವರಿ 26 ರಿಂದ ಮಾರ್ಚ್ 2ರ ತನಕ ಜರಗಲಿದೆ.
     ಇದರ ಯಶಸ್ಸಿಗಾಗಿ ವಿವಿಧ ಸ್ಥರಗಳಲ್ಲಿ ಕೆಲಸ ಕಾರ್ಯಗಳು ಜರಗುತ್ತಿವೆ. ಇದೀಗ ಅತಿರುದ್ರ ಮಹಾಯಾಗ ಸಮಿತಿ ರಚನಾ ಮಹಾಸಭೆಯನ್ನು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
    ಸಭೆಯ ಅಧ್ಯಕ್ಷತೆಯನ್ನು ದೇವರಗುಡ್ಡೆ ಶ್ರೀ ಶೈಲ ಮಹಾದೇವ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಜಯಪ್ರಕಾಶ್ ನಾಯ್ಕ್ ಅವರು ವಹಿಸಿದ್ದು, ಖ್ಯಾತ ಜ್ಯೋತಿಗಳಾದ ಸಿ.ವಿ.ಪೆÇದುವಾಳ್ ಮತ್ತು ಕೆ.ಎಸ್.ಚಂದ್ರ ಶೇಖರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶ್ರೀನಿವಾಸ ನಾಯ್ಕ್ ಉಪಸ್ಥಿತರಿದ್ದರು. ಯಾಗ ಸಮಿತಿಯ ಪ್ರಧಾನ ಸಂಚಾಲಕರಾದ ನ್ಯಾಯವಾದಿ ಸತೀಶ್ ಕೋಟೆಕಣಿ ಯಾಗದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಅತಿರುದ್ರ ಮಹಾಯಾಗದ ಸಮಿತಿಯನ್ನು ರಚಿಸಲಾಯಿತು. ಯಾಗದ ಗೌರವ ಮಾರ್ಗದರ್ಶಕರಾಗಿ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಶ್ರೀ ರವಿಶಂಕರ ಗುರೂಜಿ, ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಮಾರ್ಗದರ್ಶಕರಾಗಿ ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಗೌರವ ಸಲಹೆಗಾರರು ರವೀಶ ತಂತ್ರಿ ಕುಂಟಾರು, ಪದ್ಮನಾಭ ಶರ್ಮ ಬೇಳ, ಆನೆಮಜಲು ವಿಷ್ಣು ಭಟ್ ಶ್ರೀ ಕ್ಷೇತ್ರ ಮಲ್ಲ, ಸೀತಾರಾಮ ಕೆದಿಲಾಯ, ಬ್ರಹ್ಮಶ್ರೀ ಕಮಲಾದೇವಿ ಆಸ್ರಣ್ಣ ಶ್ರೀ ಕ್ಷೇತ್ರ ಕಟೀಲು, ಮಹಾಪೆÇೀಷಕರಾಗಿ ಕುಸುಮೋದರ ಶೆಟ್ಟಿ ಮುಂಬೈ, ಕೆ.ಆರ್.ಆಳ್ವ ಬೆಂಗಳೂರು, ಭಾಸ್ಕರ ಶೆಟ್ಟಿ ಪುಣೆ,     ಖತ್ತರ್ ಕೃಷ್ಣ, ಗಣೇಶ್ ನಾಯ್ಕ್ ದುಬೈ, ಬಿ ವಸಂತ ಪೈ ಬದಿಯಡ್ಕ, ಡಾ.ಮಂಜುನಾಥ ಶೆಟ್ಟಿ ಕಾಸರಗೋಡು, ಸಂತೋಷ್ ಕುಮಾರ್ ನಾಯ್ಕ್ ಪುತ್ತೂರು, ಎಂ ಶಶಿಧರ ನಾಯ್ಕ್ ಬೆಂಗಳೂರು, ಆಶಾ ಶ್ರೀಕೃಷ್ಣ ಉಪಾಧ್ಯಾಯ ಮಧೂರು, ಡಾ|ಮಾಯಾ ಮಲ್ಯ, ಅರವಿಂದ ನಾಯ್ಕ್ ಬಹರೈನ್, ಲಕ್ಷ್ಮೀಪತಿ ರಾವ್ ಬೀರಿ, ರವಿ ಇಂದೋರ್, ಪೆÇೀಷಕರಾಗಿ ಸಂಸದ ನಳೀನ್ ಕುಮಾರ್ ಕಟೀಲು, ಸಂಸದೆ ಶೋಭಾ ಕರಂದ್ಲಾಜೆ, ಸುರೇಂದ್ರನ್ ಕಾಸರಗೋಡು, ಗೌರವಾಧ್ಯಕ್ಷರಾಗಿ ರಾಜೇಶ್ ನಾಯ್ಕ್ ಬಂಟ್ವಾಳ, ಅಧ್ಯಕ್ಷರಾಗಿ ಸಿ.ವಿ.ಪೆÇದುವಾಳ್, ಕಾರ್ಯಾಧ್ಯಕ್ಷರಾಗಿ ವೇದವ್ಯಾಸ ಕಾಮತ್ ಮಂಗಳೂರು, ಡಾ|ಅನಂತ ಕಾಮತ್ ಕಾಸರಗೋಡು, ಪ್ರಧಾನ ಸಂಚಾಲಕರಾಗಿ ನ್ಯಾಯವಾದಿ ಸತೀಶ್ ಕೋಟೆಕಣಿ, ಸಹ ಸಂಚಾಲಕರಾಗಿ ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ಎನ್.ಸತೀಶ್, ಚಂದ್ರಹಾಸ ಮಾಸ್ತರ್, ಮಹಾಬಲ ರೈ ಕಾಳ್ಯಂಗಾಡು, ನಾರಾಯಣ ಮಾಸ್ತರ್, ಕೋಶಾಧಿಕಾರಿಯಾಗಿ ಸಂದೀಪ್ ಪಿ, ಸಹ ಕೋಶಾ„ಕಾರಿಯಾಗಿ ಸುಧಾಕರ ಬೇಕಲ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನು  ರಚಿಸಲಾಯಿತು. ಸುರೇಶ್ ನಾಯ್ಕ್ ಸ್ವಾಗತಿಸಿ, ನಾಗೇಶ್ ಬೀರಂತಬೈಲ್ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries