ಬದಿಯಡ್ಕ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ನೀರ್ಚಾಲಿನಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉದ್ಘಾಟಿಸಿ ಚಾಲನೆಯನ್ನು ನೀಡಿದರು. ಕುಂಜಾರು ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ನೀರ್ಚಾಲಿನಿಂದ ಆರಂಭಿಸಿದ ಪಾದಯಾತ್ರೆಗೆ ಕೆಪಿಸಿಸಿ ಕಾರ್ಯದರ್ಶಿ ಕೆ.ನೀಲಕಂಠನ್ ಧ್ವಜ ಹಸ್ತಾಂತರಿಸಿದರು. ಗಾಂಧೀಜಿಯವರ ರಾಷ್ಟ್ರಸೇವೆಯ ಕುರಿತು ಘೋಷವಾಕ್ಯಗಳೊಂದಿಗೆ ಹೊರಟ ಪಾದಯಾತ್ರೆಗೆ ಕನ್ನೆಪ್ಪಾಡಿಯ ಸ್ವಾಗತಿಸಲಾಯಿತು. ಬದಿಯಡ್ಕದಲ್ಲಿ ಸಮಾರೋಪಗೊಂಡಿತು. ನೇತಾರರಾದ ಗಂಗಾಧರ ಗೋಳಿಯಡ್ಕ, ನಾರಾಯಣ ಮಣಿಯಾಣಿ, ಚಂದ್ರಹಾಸ ರೈ, ಖಾದರ್ ಮಾನ್ಯ, ಶ್ಯಾಂಪ್ರಸಾದ್ ಮಾನ್ಯ, ರವಿ ಮೆಣಸಿನ ಪಾರೆ, ತಿರುಪತಿಕುಮಾರ ಭಟ್, ಮ್ಯಾಥ್ಯೂ, ಶಿಜು, ಶಾಫಿ, ಜಯಶ್ರೀ, ಅನಿತ, ಎಂ.ಕೆ.ಪ್ರಸನ್ನ ಮೊದಲಾದವರು ನೇತೃತ್ವವನ್ನು ನೀಡಿದರು.





