HEALTH TIPS

ಸಂತ ಪದವಿಗೇರಿದ ಕೇರಳದ ಸಿಸ್ಟರ್ ಮರಿಯಂ ತ್ರೇಸಿಯಾ

    ತಿರುವನಂತಪುರ: ಕೇರಳದ ಸಿಸ್ಟರ್ ಮರಿಯಂ ತ್ರೇಸಿಯಾ ಚಿರಾಮಲ್ ಮಂಕಿಡಿಯಾನ್ ಅವರನ್ನು ಸಂತ ಪದವಿಗೇರಿಸಲಾಗಿದೆ ಎಂದು ನಿನ್ನೆ ವ್ಯಾಟಿಕನ್ ಸಿಟಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪೋಪ್ ಫ್ರಾನ್ಸಿಸ್ ಘೋಷಿಸಿದರು. 1876ರ ಏಪ್ರಿಲ್ 26ರಂದು ಕೇರಳದ ತ್ರಿಶೂರಿನಲ್ಲಿ ಜನಿಸಿದ ಸಿಸ್ಟರ್ ತ್ರೇಸಿಯಾ ಅವರು 1914ರಲ್ಲಿ ತ್ರಿಶೂರಿನಲ್ಲಿ ಸಿಸ್ಟರ್ಸ್ ಆಫ್ ಹೋಲಿ ಫ್ಯಾಮಿಲಿ ಪ್ರಾರ್ಥನಾ ಸಭೆ  ಯನ್ನು ಆರಂಭಿಸಿದರು. ರೋಮ್ ನ ಸಂತ ಪೀಟರ್ ಸ್ಕ್ವೇರ್ ನಲ್ಲಿ ನಡೆದ ಸೊಲೆಮನ್ ಯುಚಾರಿಶಿಸ್ಟಿಟ್ ಸೆಲೆಬ್ರೇಷನ್ ನಲ್ಲಿ ತ್ರೇಸಿಯಾ ಸೇರಿ ನಾಲ್ವರನ್ನು ಸಂತ ಪದವಿಗೇರಿಸಲಾಯಿತು ಎಂದು ವ್ಯಾಟಿಕನ್ ನ್ಯೂಸ್ ಹೇಳಿದೆ.
    ಇಂಗ್ಲೆಂಡಿನ ಕಾರ್ಡಿನಲ್ ಜಾನ್ ಹೆನ್ರಿ ನ್ಯೂಮನ್, ಸ್ವಿಸ್ ಲೇವುಮೆನ್ ಮಾರ್ಗುರೇಟ್ ಬೇಯ್ಸ್, ಬ್ರೆಜಿಲ್ಲಿನ ಸಿಸ್ಟರ್ ಡೂಲ್ಸ್ ಲೋಪ್ಸ್ ಹಾಗೂ ಇಟಾಲಿಯನ್ ಸಿಸ್ಟರ್ ಜಿಯೋಸೆಪ್ಪಿನ ವಾನಿನಿ ಅವರು ಸಂತ ಪದವಿ ಪಡೆದಿದ್ದಾರೆ. 1926ರಲ್ಲಿ 50ನೇ ವಯಸ್ಸಿನಲ್ಲಿ ಸಿಸ್ಟರ್ ತ್ರೇಸಿಯಾ ಮೃತರಾದರು.
    ಮರಿಯಂ ತ್ರೇಸಿಯಾ ಅವರು ತ್ರೇಸಿಯಾ ಎಂಬ ಹೆಸರಿನಲ್ಲಿ ಜನಿಸಿ, 1904ರಲ್ಲಿ ಕನ್ಯಾ ಮೇರಿ ಕೃಪೆಯಿಂದ ಮರಿಯಂ ತ್ರೇಸಿಯಾ ಎಂಬ ಹೆಸರು ಬಳಸಲು ಆ ಜ್ಞೆ  ಆಗಿದೆ ಎಂದು ಪ್ರಕಟಿಸಿದರು. ನಂತರ ದೀನ ದಲಿತರ ಸೇವೆ, ಮಾಂತ್ರಿಕ ಸ್ಪರ್ಶದ ಮೂಲಕ ಅನೇಕರ ಸಂಕಷ್ಟಗಲನ್ನು ದೂರಾಗಿಸಿದರು ಎಂದು ವ್ಯಾಟಿಕನ್ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 29ರಂದು 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಸಿಸ್ಟರ್ ಮರಿಯಂ ತ್ರೇಸಿಯಾ ಅವರ ಹೆಸರನ್ನು ಉಲ್ಲೇಖಿಸಿ, ಸಮಾಜಕ್ಕೆ ಅವರು ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries