HEALTH TIPS

ಜಿಯೋ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಿದ ಹಿಂದಿನ ರಹಸ್ಯವೇನು?

     ನವದೆಹಲಿ:  ಜಿಯೋ ತನ್ನ ಗ್ರಾಹಕರಿಗೆ ಇತರ ಆಪರೇಟರುಗಳಿಗೆ ಮಾಡುವ ಮೊಬೈಲ್ ವಾಯ್ಸ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ವಿಧಿಸಿರುವುದು ತಿಳಿದಿರಬಹುದು. ಇಂಟರ್‍ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ಕುರಿತು ರೂಪಿಸಲಾಗಿದ್ದ ಕಾನೂನು ರದ್ದುಗೊಳಿಸುವ ನಿಟ್ಟಿನಲ್ಲಿ ಜಿಯೋ ಹೆಜ್ಜೆ ಇಟ್ಟಿದೆ. ಇತರೆ ಆಪರೇಟರುಗಳಿಗೆ ಮಾಡುವ ಮೊಬೈಲ್ ವಾಯ್ಸ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಟರ್ಮಿನೇಶನ್ ಶುಲ್ಕವನ್ನು ಗ್ರಾಹಕರಿಂದ ಅನಿವಾರ್ಯವಾಗಿ ಹಿಂಪಡೆಯಲಿದೆ. ಇದಕ್ಕಾಗಿ ಐಯುಸಿ ಟಾಪ್-ಅಪ್ ವೋಚರ್‍ಗಳ ಮೂಲಕ ರೀಚಾರ್ಚ್ ಮಾಡಿಸಿಕೊಳ್ಳಬೇಕಿದೆ. ಐಯುಸಿ ಶುಲ್ಕ ಶೂನ್ಯಕ್ಕೆ ಇಳಿಯುವವರೆಗೆ ಮಾತ್ರವೇ ಈ ಕ್ರಮ ಚಾಲ್ತಿಯಲ್ಲಿರಲಿದ್ದು, ವಾಯ್ಸ್ ಕಾಲ್ ಮಾಡಲು ಐಯುಸಿ ಟಾಪ್ ಅಪ್ ವೋಚರ್ ರೀಚಾರ್ಜ್ ಮಾಡಿಸಿದರೆ, ಆ ಮೌಲ್ಯಕ್ಕೆ ಸಮಾನವಾದ ಡೇಟಾ ಪಡೆಯಲಿದ್ದಾರೆ, ಜೊತೆಗೆ ಜಿಯೋ ಗ್ರಾಹಕರ ಟ್ಯಾರಿಫ್‍ನಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ ಎಂದು ಸಂಸ್ಥೆ ಹೇಳಿದೆ.
     ಒಂದು ನಿರ್ದಿಷ್ಟ ಮೊಬೈಲ್ ಸಂಸ್ಥೆಯ ಗ್ರಾಹಕರು ಬೇರೊಂದು ಸಂಸ್ಥೆಯ ಗ್ರಾಹಕರಿಗೆ ಹೊರಹೋಗುವ (ಔಟ್‍ಗೋಯಿಂಗ್) ಮೊಬೈಲ್ ಕರೆ ಮಾಡಿದಾಗ, ಕರೆ ಮಾಡಿದ ಗ್ರಾಹಕರ ಸಂಸ್ಥೆಯು ಎರಡನೇ ಸಂಸ್ಥೆಗೆ ನೀಡಬೇಕಾದ ಶುಲ್ಕವೇ ಇಂಟರ್‍ಕನೆಕ್ಟ್ ಯೂಸೇಜ್ ಚಾರ್ಜ್ ಅಥವಾ ಐಯುಸಿ. ಎರಡು ವಿಭಿನ್ನ ಜಾಲಗಳ ನಡುವಿನ ಈ ಕರೆಗಳನ್ನು ಮೊಬೈಲ್ ಆಫ್-ನೆಟ್ ಕರೆಗಳೆಂದು ಗುರುತಿಸಲಾಗುತ್ತದೆ. ಐಯುಸಿ ಶುಲ್ಕವನ್ನು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿಗದಿಪಡಿಸುತ್ತದೆ ಮತ್ತು ಸದ್ಯ ಅದು ಪ್ರತಿ ನಿಮಿಷಕ್ಕೆ 6 ಪೈಸೆಗಳಷ್ಟಿದೆ. ಜಿಯೋ ಗ್ರಾಹಕರು ಇನ್ನು ವಾಯ್ಸ್ ಕಾಲ್ ಗೆ ದುಡ್ಡು ಕೊಡಬೇಕು, ಆದರೆ ಐಯುಸಿ ಶುಲ್ಕ ಶೂನ್ಯಕ್ಕೆ ಇಳಿಯಬೇಕೆಂದು ತನ್ನ ಅಭಿಪ್ರಾಯ ಎಂದು ಟ್ರಾಯ್ 2011 ರಲ್ಲೇ ಹೇಳಿದೆ. ಸನ್ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಟ್ರಾಯ್ ಸಲ್ಲಿಸಿದ 29 ಅಕ್ಟೋಬರ್ 2011ರ ಅಫಿಡವಿಟ್ ನಲ್ಲಿ ಟರ್ಮಿನೇಶನ್ ಶುಲ್ಕಗಳು ಕಡಿಮೆಯಾಗುತ್ತ ಬಂದು ಅಂತಿಮವಾಗಿ ಸೊನ್ನೆ ಟರ್ಮಿನೇಶನ್ ಶುಲ್ಕವನ್ನು ತಲುಪಬೇಕು ಎಂದು ಉಲ್ಲೇಖಿಸಲಾಗಿದೆ.
     2016ರಲ್ಲಿ ಟ್ರಾಯ್ ನೀಡಿದ ಮತ್ತೊಂದು ಅಫಿಡವಿಟ್ ನಲ್ಲಿ 1ನೇ ಅಕ್ಟೋಬರ್ 2017ರಿಂದ ಮೊಬೈಲ್ ಕರೆಗಳಿಗಾಗಿನ ಐಯುಸಿಯನ್ನು ಪ್ರತಿ ನಿಮಿಷಕ್ಕೆ 14 ಪೈಸೆಗಳಿಂದ ಪ್ರತಿ ನಿಮಿಷಕ್ಕೆ 6 ಪೈಸೆಗೆ ಇಳಿಸಲಾಯಿತು ಹಾಗೂ1ನೇ ಜನವರಿ 2020ರಿಂದ ಮೊಬೈಲ್ ಕರೆಗಳಿಗಾಗಿನ ಐಯುಸಿ ಶೂನ್ಯ ಆಗಿರಲಿದೆ ಎಂದು ಹೇಳಲಾಗಿದೆ.
     2ಜಿ ಜಾಲಗಳಲ್ಲಿನ ಅತಿ ಹೆಚ್ಚಿನ ಟ್ಯಾರಿಫ್ ಜಿಯೋ ಜಾಲದಲ್ಲಿನ ಉಚಿತ ವಾಯ್ಸ್ ಹಾಗೂ 2ಜಿ ಜಾಲಗಳಲ್ಲಿನ ಅತಿ ಹೆಚ್ಚಿನ ಟ್ಯಾರಿಫ್‍ಗಳ ನಡುವಿನ ಬೆಲೆ ವ್ಯತ್ಯಾಸವು, ಏರ್‍ಟೆಲ್ ಮತ್ತು ವೊಡಾಫೋನ್-ಐಡಿಯಾದ 35-40 ಕೋಟಿ 2ಜಿ ಗ್ರಾಹಕರು ಜಿಯೋ ಗ್ರಾಹಕರಿಗೆ ಮಿಸ್ಡ್ ಕಾಲ್‍ಗಳನ್ನು ನೀಡಲು ಕಾರಣವಾಗುತ್ತದೆ. ಪ್ರತಿ ದಿನವೂ ಜಿಯೋ ಜಾಲಕ್ಕೆ 25ರಿಂದ 30 ಕೋಟಿ ಮಿಸ್ಡ್ ಕಾಲ್‍ಗಳು ಬರುತ್ತಿವೆ.
    ಮಿಸ್ಡ್ ಕಾಲ್‍ಗಳ ಈ ಬೃಹತ್ ವಿದ್ಯಮಾನದಿಂದಾಗಿ, ಜಿಯೋಗೆ ಒಳಬರುವ ಕರೆಗಳು ಜಿಯೋದಿಂದ ಇತರ ಆಪರೇಟರ್‍ಗಳಿಗೆ ಹೊರಹೋಗುವ ಕರೆಗಳಾಗಿ ಪರಿವರ್ತನೆಯಾಗುತ್ತಿದೆ. ಪ್ರತಿನಿತ್ಯದ ಈ 25ರಿಂದ 30 ಕೋಟಿ ಮಿಸ್ಡ್ ಕಾಲ್‍ಗಳು ಜಿಯೋಗೆ 65ರಿಂದ 75 ಕೋಟಿ ನಿಮಿಷಗಳಷ್ಟು ಒಳಬರುವ ಟ್ರಾಫಿಕ್ ಆಗಬೇಕಿತ್ತು. ಅದರ ಬದಲು, ಜಿಯೋ ಗ್ರಾಹಕರು ಮರಳಿ ಕರೆ ಮಾಡುವುದರಿಂದಾಗಿ, 65ರಿಂದ 75 ಕೋಟಿ ನಿಮಿಷಗಳಷ್ಟು ಹೊರಹೋಗುವ ಟ್ರಾಫಿಕ್ ಸೃಷ್ಟಿಯಾಗುತ್ತಿದೆ. ಜಿಯೋ ಆಫ್-ನೆಟ್ ವಾಯ್ಸ್ ಟ್ರಾಫಿಕ್‍ನಲ್ಲಿ ಸಮಾನತೆ ಬೆಲೆ ವ್ಯತ್ಯಾಸದ ಪರಿಣಾಮಗಳನ್ನು, ಅದರಲ್ಲೂ ಮಿಸ್ಡ್ ಕಾಲ್ ವಿದ್ಯಮಾನವನ್ನು, ಹೊರತುಪಡಿಸಿದರೆ ಜಿಯೋ ಆಫ್-ನೆಟ್ ವಾಯ್ಸ್ ಟ್ರಾಫಿಕ್‍ನಲ್ಲಿ ಈಗಾಗಲೇ ಸಮಾನತೆಯನ್ನು ಸಾಧಿಸಿದೆ. ಇತರ ಆಪರೇಟರ್‍ಗಳು ತಮ್ಮ ದುಬಾರಿ 2ಜಿ ವಾಯ್ಸ್ ಟ್ಯಾರಿಫ್‍ನಿಂದಾಗಿ ಇದರಲ್ಲಿ ಮತ್ತೆ ಅಸಮಾನತೆ ತರುತ್ತಿದ್ದಾರೆ.
    ಇತ್ತೀಚೆಗೆ ಪ್ರಕಟಿಸಿದ ಸಮಾಲೋಚನಾ ಪತ್ರಕ್ಕೆ ಈ ಬಗೆಯ ಟ್ರಾಫಿಕ್ ಅಸಮಾನತೆಯೊಂದೇ ಆಧಾರವೆಂದು ಉಲ್ಲೇಖಿಸುವ ಮೂಲಕ, ಐಯುಸಿ ನಿಯಮಗಳ ತಿದ್ದುಪಡಿಯ ಮೂಲಕ 1ನೇ ಜನವರಿ 2020ರಿಂದ ಅನ್ವಯವಾಗುವಂತೆ ಶೂನ್ಯವೆಂದು ಈಗಾಗಲೇ ಘೋಷಿಸಲಾಗಿರುವ, ಐಯುಸಿಯ ಮುಗಿದ ಅಧ್ಯಾಯವನ್ನು ಟ್ರಾಯ್ ಮತ್ತೆ ತೆರೆದಿದೆ. 2017ರಲ್ಲಿ ಐಯುಸಿ ನಿಯಮಗಳ ತಿದ್ದುಪಡಿಯನ್ನು ಸಾಕಷ್ಟು ಚರ್ಚೆಗಳು ಮತ್ತು ಸಮಾಲೋಚನೆಗಳ ನಂತರವೇ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾಲೋಚನಾ ಪತ್ರವು ನಿಯಂತ್ರಣ ಕುರಿತ ಅನಿಶ್ಚಿತತೆಯನ್ನು ಸೃಷ್ಟಿಸಿದೆ ಮತ್ತು ಅದರಿಂದಾಗಿ, ಐಯುಸಿ ಶುಲ್ಕಗಳು ಇರುವವರೆಗೂ ಎಲ್ಲಾ ಆಫ್-ನೆಟ್ ಮೊಬೈಲ್ ಧ್ವನಿ ಕರೆಗಳಿಗೆ ನಿಮಿಷಕ್ಕೆ 6 ಪೈಸೆಗಳ ಈ ನಿಯಂತ್ರಣ ಶುಲ್ಕವನ್ನು ಮರಳಿ ಪಡೆಯಲೇಬೇಕಾದ ಅನಿವಾರ್ಯತೆ, ಹೆಚ್ಚು ಇಷ್ಟವಿಲ್ಲದೆಯೂ, ಜಿಯೋಗೆ ಒದಗಿಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries